ಸಾಕಷ್ಟು ಜನರು ದೇಹದ ತೂಕ ಕಡಿಮೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಕೆಲವರೂ ವಾಕಿಂಗ್ ಮಾಡುವುದು ಮತ್ತು ಮೆಟ್ಟಿಲು ಹತ್ತುವುದು ಮಾಡುತ್ತಾರೆ. ಮೆಟ್ಟಿಲು ಹತ್ತುವುದರಿಂದ ನಿಮ್ಮ ಹೃದಯದ ವೇಗ ಹೆಚ್ಚಾಗೂ ಬಡಿಯುತ್ತದೆ. ಇದರಿಂದ ಕಡಿಮೆ ಸಮಯದಲ್ಲಿ ನಿಮ್ಮ ಕ್ಯಾಲೋರಿಗಳು ತ್ವರಿತವಾಗಿ ಕೆಲಸ ಮಾಡಲು ಸಹಾಯವಾಗುತ್ತದೆ.
ಸಂಶೋಧನೆ ಪ್ರಕಾರ ಪ್ರತಿದಿನ ಒಂದೇ ಸಮಯದಲ್ಲಿ ಮೆಟ್ಟಿಲುಗಳನ್ನು ಹತ್ತುವುದರಿಂದ ಇಳಿಯುವುದರಿಂದ ವಾಕಿಂಗ್ ಗೆ ಹೋಲಿಕೆ ಮಾಡಿದರೆ 30% ಜಾಸ್ತಿ ಕ್ಯಾಲೋರಿಗಳನ್ನು ಸುಡುತ್ತದೆ ಮತ್ತು ಅದೇ ರೀತಿಯಾಗಿ ನಿಮಗೆ ಏನಾದರು ಸಮಯ ಇಲ್ಲವಾದರೆ ವಾಕಿಂಗ್ ಮಾಡಲು ಬದಲು ಮೇಟಿಲು ಹತ್ತುವುದು ಮತ್ತು ಇಳಿಯುವುದರಿಂದ ನಿಮ್ಮ ಸಮಯವು ಕೂಡ ಉಳಿಯುತ್ತದೆ ಮತ್ತು ನಿಮ್ಮ ಕ್ಯಾಲೋರಿ ಕೂಡ ವೇಗವಾಗಿ ಸುಡಲು ಸಹಾಯವಾಗುತ್ತದೆ.
ಆಫೀಸ್ ಗೆ ಹೋದಾಗ ನೀವು ಲಿಫ್ಟ್ ಬಳಸುವ ಮೊದಲು ಮೆಟ್ಟಿಲು ಬಳಸಿದರೆ ನಿಮಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಮೆಟ್ಟಿಲು ಹತ್ತುವುದರಿಂದ ತೊಡೆಗಳ ಸ್ನಾಯುಗಳು ಬಲವಾಗುತ್ತದೆ ಹಾಗು ಮೂಳೆ ಕಿಲುಗಳು ಕೂಡ ಬಲವಾಗುತ್ತದೆ.ಇದರಿಂದ ಕಾಲು ನೋವು ಬರುವ ಅಪಾಯ ಕೂಡ ಕಡಿಮೆ ಆಗುತ್ತದೆ.
ಇನ್ನು ಅಸ್ತಮಾ ಸಮಸ್ಸೆ ಇರುವವರು ಮತ್ತು ಹೃದಯ ಸಮಸ್ಸೆ ಇರುವವರು ಮತ್ತು ಕಿಲು ನೋವಿನ ಸಮಸ್ಸೆ ಇರುವವರು ಮೆಟ್ಟಿಲು ಹತ್ತಬಾರದು.