ಎರಡು ಕತ್ತೆ ಮಧ್ಯೆ ಎಂದೂ ಹಾದು ಹೋಗಬಾರದು!

Written by Anand raj

Published on:

ಕತ್ತೆ ಭರ ಹೊತ್ತು ಸಾಗುವ ಕಷ್ಟ ಜೀವಿ. ಮಾನವ ಇದನ್ನ ಅತ್ಯಂತ ನಿಕೃಷ್ಟ ಪ್ರಾಣಿ ಎಂದೂ ಪರಿಗಣಿಸಿದ್ದಾನೆ. ಪ್ರಯಾಣ ಹೊರಟಿರುವಾಗ ಕತ್ತೆ ಎಡ ಭಾಗದಲ್ಲಿ ನಿಂತಿದ್ದಾರೆ ಅಥವಾ ಹಿಂದೆ ನಿಂತುಕೊಂಡಿದ್ದಾರೆ ಶುಭ ಎನ್ನಲಾಗುತ್ತದೆ. ಕೈಗೊಂಡ ಕಾರ್ಯವು ಕೈಗೂಡುತ್ತಾದೆ.

ಕತ್ತೆ ಹಿಂದೆ ಅಥವಾ ಎಡ ಭಾಗದಿಂದ ಕಿರುಚುವುದು ಕೇಳಿದರು ಶುಭವಾಗುತ್ತದೆ. ಪ್ರವಾಸ ಹೊರಟಾಗ ಕತ್ತೆ ಬಲಗಡೆ ಸಿಕ್ಕರೆ ಅಶುಭ ಎನ್ನಲಾಗುತ್ತದೆ.ಇನ್ನು ಎರಡು ಕತ್ತೆ ಮಧ್ಯೆ ಎಂದೂ ಹಾದು ಹೋಗಬಾರದು. ಕತ್ತೆಗಳ ನಡುವೆ ಹೋದರೆ ಹೋದ ಕಾರ್ಯ ಕೈಗೂಡುವುದಿಲ್ಲ. ಇನ್ನು ಬೆಳಗ್ಗೆ ಎದ್ದ ಕೂಡಲೇ ಕಟ್ಟೆಯನ್ನು ನೋಡಬಾರದು ಹಾಗು ಕತ್ತೆಯ ಕಿರುಚಟವನ್ನ ಕೇಳಬಾರದು. ಕತ್ತೆಯ ಮುಖ ನೋಡಿ ಅಥವಾ ಅದರ ಧ್ವನಿ ಕೇಳಿದೊಡನೆ ಕುಟುಂಬದವರೊಡನೆ ಜಗಳ ಆಡುವ ಪ್ರಸಂಗ ಬರುತ್ತದೆ.

ಕತ್ತೆ ಪೂರ್ವ ದಿಕ್ಕಿನಿಂದ ಕಿರುಚಿದರೆ ಬಂದು ಮಿತ್ರರೊಡನೆ ಜಗಳ ಅಗ್ನೇಯ ದಿಕ್ಕಿನಿಂದ ಕೂಗುವುದನ್ನು ಕೇಳಿದರೆ ಶುಭ ಸಮಾಚಾರ ಕೇಳಿ ಬರುವುದು.

ಇನ್ನು ಉತ್ತರ ದಿಕ್ಕಿನಲ್ಲಿ ಕಿರುಚಿದರೆ ಭೋಜನಕೂಟದಲ್ಲಿ ಪಾಲ್ಗೊಳ್ಳಬೇಕಾಗುವುದು.ಇನ್ನು ಯಮನ ದಿಕ್ಕಿನಿಂದ ಕೂಗಿದರೆ ಶುಭ ಮತ್ತು ವರುಣ ದಿಕ್ಕಿನಿಂದ ಕೂಗಿದರೆ ಕಾರ್ಯ ಸಿದ್ದಿ. ಶಾಸ್ತ್ರಗಳಲ್ಲಿ ಕತ್ತೆಯು ಅಶುಭದಾಯಕ ಪ್ರಾಣಿ ಎಂದೇ ಉಲ್ಲೆಕಿಸಲಾಗಿದೆ. ಅದರೆ ಮಾನವನಾ ಹೆಚ್ಚಿನ ಕೆಲಸಗಳಿಗೆ ಕತ್ತೆಯೇ ಅನುಕೂಲಕರ ಪ್ರಾಣಿಯಾಗಿದೆ.

Related Post

Leave a Comment