ನವರಾತ್ರಿ ಹಬ್ಬದಲ್ಲಿ ಈ ರೀತಿ ಬನ್ನಿ ಮರದ ಪೂಜೆಯನ್ನು ಮಾಡುವುದರಿಂದ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತವೆ. ಬನ್ನಿ ಮರದ ವಿಶೇಷತೆ ಏನೆಂದರೆ ಬನ್ನಿ ಮರವನ್ನು ದೇವರು ವೃಕ್ಷ ಎಂದು ಕರೆಯುತ್ತಾರೆ. ಈ ಬನ್ನಿಮರದ ಪ್ರತಿಯೊಂದು ಎಲೆಯು ಕೂಡ ಒಂದು ಚಿನ್ನಕ್ಕೆ ಸಮಾನ ಎಂದು ಹೇಳುತ್ತಾರೆ. ಹಾಗಾಗಿ ಪ್ರತಿ ವರ್ಷವೂ ಕೂಡ ನವರಾತ್ರಿ ವಿಜಯ ದಶಮಿಯಂದು ಬನ್ನಿ ಮರದ ಎಲೆಗಳನ್ನು ಮನೆಗೆ ತೆಗೆದುಕೊಂಡು ಬಂದು ಹಿರಿಯರಿಗೆ ಕೊಟ್ಟು ಹಿರಿಯರಿಂದ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.
ಬನ್ನಿಮರಕ್ಕೆ ಇಷ್ಟೊಂದು ಪ್ರಾಮುಖ್ಯತೆ ಬರುವುದಕ್ಕೆ ಬಹಳ ಹಿನ್ನಲೆ ಕಾರಣ ಕೂಡ ಇದೆ. ಇದರಲ್ಲಿ ಮುಖ್ಯವಾದ ಕಾರಣವೆಂದರೆ ಪಾಂಡವರು ವನವಾಸಕ್ಕೆ ಹೋಗುವಾಗ ತಮ್ಮ ಶಾಸ್ತ್ರಗಳನ್ನು, ಆಯುಧಗಳನ್ನು ಕಟ್ಟಿ ಇಟ್ಟು ಈ ಬನ್ನಿ ಮರದ ಮೇಲೆ ಇಟ್ಟುಬಿಟ್ಟ ಹೋಗಿದ್ದರು. ಅವರು ತಮ್ಮ ಅಜ್ಞಾತ ವಾಸ ಮತ್ತು ವನವಾಸ ಮುಗಿಸಿಕೊಂಡು ಬಂದರು ಕೂಡ ಅವರ ಆಯುಧಗಳು ಜೋಪಾನವಾಗಿ ಆ ಮರದ ಮೇಲೆನೇ ಇದ್ದವು.ವನವಾಸದಿಂದ ಬಂದ ನಂತರ ಕೌರವರ ಮೇಲೆ ವಿಜಯವನ್ನು ಸಾಧಿಸಿ ವಿಜಯದಶಮಿ ದಿನ ವಿಜಯ ಪತಕಿಯನ್ನು ಹರಿಸುತ್ತಾರೆ.ಹಾಗಾಗಿ ಆ ಕಾಲದಿಂದಲೂ ಕೂಡ ಬನ್ನಿ ಮರವನ್ನು ಪೂಜೆ ಮಾಡುವ ಪದ್ಧತಿ ಹಿಂದೂ ಸಂಪ್ರದಾಯದಲ್ಲಿ ಇದೆ.
ನವರಾತ್ರಿ ಹಬ್ಬದ ದಿನದಂದು ಈ ಬನ್ನಿ ಮರ ಪೂಜೆಯನ್ನು ಹೇಗೆ ಮಾಡುವುದು ಎಂದರೆ ಈ ಬನ್ನಿ ಮರವನ್ನು ಆದಷ್ಟು ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಬೇಕಾಗುತ್ತದೆ.ಪೂಜೆಗೆ ನೀರು ಅರಿಶಿಣ ಕುಂಕುಮ ಅಕ್ಷತೆ ಹೂವು ಫಲ ತಾಂಬೂಲ ಹಣ್ಣು ಕಾಯಿ ಕಡ್ಡಿ ಕರ್ಪೂರ ಎಲ್ಲವನ್ನು ನೀವು ಮನೆಯಿಂದ ತೆಗೆದುಕೊಂಡು ಹೋಗಿ ಬನ್ನಿ ಮರ ಬುಡಕ್ಕೆ ಸ್ವಲ್ಪ ನೀರು ಹಾಕಿದ ನಂತರ ಅರಿಶಿಣ, ಕುಂಕುಮ, ಹೂವು ಹಾಗೂ ಫಲ ತಾಂಬೂಲವನ್ನು ಇಡಬೇಕಾಗುತ್ತದೆ.ಜೊತೆಗೆ ನಿಂಬೆ ಹಣ್ಣಿನ ದೀಪವನ್ನು ಸಹ ಬನ್ನಿ ಮರದ ಹತ್ತಿರ ಹಚ್ಚಬಹುದು ಮತ್ತು ನೈವೈದ್ಯಕ್ಕೆ ಸಿಹಿಯನ್ನು ಮರದ ಹತ್ತಿರ ಇಟ್ಟು ದೀಪವನ್ನು ಹಚ್ಚಿ ನೈವೈದ್ಯ ಮಾಡಿದ ನಂತರ ದಾರದಿಂದ ಮರಕ್ಕೆ 9 ಅಥವಾ 5 ಸುತ್ತನ್ನು ಸುತ್ತಬೇಕಾಗುತ್ತದೆ.ದಾರದಿಂದ ಮರವನ್ನು ಸುತ್ತಿದ ನಂತರ ಸ್ವಲ್ಪ ಹೊತ್ತು ಅಲ್ಲೆ ಇದ್ದು ಮುತೈದೆಯರಿಗೆ ಅರಿಶಿಣ ಕುಂಕುಮವನ್ನು ಕೊಟ್ಟು ಬನ್ನಿ ವೃಕ್ಷದ ಪ್ರದಕ್ಷಿಣೆ ಮಾಡಬೇಕಾಗುತ್ತದೆ.
ಈ ರೀತಿ ಬನ್ನಿ ಮರ ಪೂಜೆ ಮಾಡುವುದರಿಂದ ನಿಮ್ಮ ಅರೋಗ್ಯ ವೃದ್ಧಿ ಆಗುತ್ತದೆ ಮತ್ತು ಮದುವೆ ವಿಳಂಬ ಆಗುವವರೂ 48 ದಿನಗಳ ಕಾಲ ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ ಈ ಬನ್ನಿ ಮರ ಪೂಜೆ ಮಾಡಿದರೆ ತುಂಬಾ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ ಮತ್ತು ಸಂತಾನ ಭಾಗ್ಯ ಇಲ್ಲದವರಿಗೂ ಕೂಡ ಸಂತಾನ ಭಾಗ್ಯ ಕೂಡಿ ಬರುತ್ತಾದೇ.ನವರಾತ್ರಿ ಹಬ್ಬದಲ್ಲಿ 9 ದಿನ ಬನ್ನಿ ಮರ ಪೂಜೆ ಮಾಡುವುದು ತುಂಬಾನೇ ಶ್ರೇಷ್ಠ. ಒಂದು ವೇಳೆ ಆಗದಿದ್ದರೆ ಕೋನೇಯಲ್ಲಿ ವಿಜಯದಶಮಿ ದಿನದಂದು ಪೂಜೆ ಮಾಡಿದರು ಕೂಡ ಒಳ್ಳೆಯ ಫಲ ಸಿಗುತ್ತದೆ.