ಶ್ರಾವಣ ತಿಂಗಳಿನಲ್ಲಿ ಶಿವಭಕ್ತರು ಶಿವನನ್ನು ಒಲಿಸಿಕೊಳ್ಳಲು ಹಲವಾರು ರೀತಿಯ ಪೂಜೆಗಳನ್ನು, ಜಪ ತಪಗಳನ್ನು ಮಾಡುತ್ತಾರೆ. ಶಾಸ್ತ್ರದಲ್ಲಿ ಈ ಶ್ರಾವಣ ಭಗವಂತನಾದ ಶಿವನ ತಿಂಗಳು ಆಗಿದೆ. ಶಿವನ ಕ್ರೋಧ ಮತ್ತು ತಡಾದ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ತಿಂಗಳಲ್ಲಿ ನೀವು ಯಾವುದೇ ಪೂಜೆಗಳನ್ನು ಮಾಡಿದರೂ ಸಹ ಒಳ್ಳೆಯ ಫಲಗಳು ಸಿಗುತ್ತವೆ. ನಿಮ್ಮ ಮನಸ್ಸಿನ ಎಲ್ಲಾ ಇಚ್ಛೆಗಳು ಪೂರ್ತಿ ಆಗುತ್ತದೆ. ವಿಶೇಷವಾಗಿ ಶ್ರಾವಣ ಸೋಮವಾರ ದಿನದಂದು ಮಾಡಿದ ಪೂಜೆಯಿಂದ ಬೇಗ ಫಲ ಕೂಡ ಸಿಗುತ್ತದೆ.
ಈ ಕೆಲವು ಕಾರ್ಯಗಳನ್ನು ಶ್ರಾವಣ ಮಾಸದಲ್ಲಿ ಮರೆತರು ಮಾಡಬಾರದು.ಇಲ್ಲವಾದರೆ ಶಿವನ ಕೃಪೆಯಿಂದ ವಂಚಿತರಾಗುತ್ತೀರಾ.
1, ಸಾದ್ವಿಕಾ ಭೋಜನ–ಶ್ರಾವಣದ ಈ ಪವಿತ್ರವಾದ ತಿಂಗಳಿನಲ್ಲಿ ಆಹಾರದ ಬಗ್ಗೆ ನೀವು ಸ್ವಲ್ಪ ಗಮನ ಅರಿಸಬೇಕಾಗಿದೆ.ಈ ತಿಂಗಳಿನಲ್ಲಿ ಮಾಂಸ ಆಹಾರವನ್ನು ತಿನ್ನಬಾರದು.ಈ ತಿಂಗಳಿನಲ್ಲಿ ಸಸ್ಯಹಾರಿ ಪದಾರ್ಥವನ್ನು ತಿನ್ನಬೇಕು. ವಿಶೇಷವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸಬಾರದು.
2, ಬದನೇಕಾಯಿ ಸೇವನೆ–ಹಸಿರು ತರಕಾರಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಶ್ರಾವಣ ಮಾಸದಲ್ಲಿ ಬದನೆಕಾಯಿ ಪಲ್ಯವನ್ನು ತಿನ್ನಬಾರದು. ಬದನೆಕಾಯಿಯನ್ನು ಅಶುದ್ಧವಾದ ತರಕಾರಿ ಎಂದು ತಿಳಿಯಲಾಗಿದೆ.
3, ಹಾಲು–ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಹಾಲನ್ನು ಈಶ್ವರ ಲಿಂಗಕ್ಕೆ ಎರೆಯುತ್ತಾರೆ.ಈ ಒಂದು ಕಾರಣದಿಂದ ಶ್ರಾವಣ ತಿಂಗಳಿನಲ್ಲಿ ಹಾಲನ್ನು ಕುಡಿಯುವುದರಿಂದ ದೂರ ಇರುವುದು ಒಳ್ಳೆಯದು.
4,ಅವಮಾನ–ಶ್ರಾವಣ ತಿಂಗಳಿನಲ್ಲಿ ನೀವು ಮರೆತರು ಸಹ ಯಾರಿಗೂ ಸಹ ಅವಮಾನ ಮಾಡಬಾರದು.ಜೊತೆಗೆ ಈ ತಿಂಗಳಿನಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವುದೇ ಪ್ರಕಾರದ ಕೆಟ್ಟ ಯೋಚನೆಗಳನ್ನು ತರಬಾರದು. ವಿಶೇಷವಾಗಿ ತಂದೆ ತಾಯಿಯಾಗಲಿ ಹಿರಿಯರು ಆಗಲಿ ಗುರುಗಳಿಗೆ ನೀವು ಅವಮಾನ ಮಾಡಬಾರದು. ಮನೆಗೆ ಬಂದ ಜನರಿಗೂ ಮರೆತರು ಸಹ ಅವಮಾನ ಮಾಡಬೇಡಿ.ಮನೆಯ ಎದುರಲ್ಲಿ ಹಸು, ಆಕಳು ಬಂದರೆ ತಿನ್ನಲು ಅಕ್ಕಿ ಕೊಡಿ. ಬದಲಿಗೆ ಒಡೆದು ಕಳುಹಿಸಬೇಡಿ.ಒಡೆದು ಕಳಿಸಿದರೆ ಶಿವನ ವಾಹನ ಆದ ನಂದಿಗೆ ಅವಮಾನ ಮಾಡಿದಂತೆ ಆಗುತ್ತದೆ.
5, ಎಣ್ಣೆಯನ್ನು ಹಚ್ಚುವುದು–ಶ್ರಾವಣ ಮಾಸದಲ್ಲಿ ಮೈಗೆ ಎಣ್ಣೆಯನ್ನು ಹಚ್ಚಬಾರದು.ಜೊತೆಗೆ ನೀವು ಊಟ ಮಾಡುವಾಗ ಶುದ್ಧವಾದ ಪಾತ್ರೆಗಳನ್ನು ಬಳಸುವುದು ಒಳ್ಳೆಯದು. ಶ್ರಾವಣ ಮಾಸದಲ್ಲಿ ಎಣ್ಣೆಯನ್ನು ಹಚ್ಚಿದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
6, ಸಾರಾಯಿ ಸೇವನೆ–ಒಂದು ವೇಳೆ ಶ್ರಾವಣ ಮಾಸದಲ್ಲಿ ಯಾವುದೇ ವ್ಯಕ್ತಿಗಳು ಕೆಟ್ಟ ಕರ್ಮಗಳನ್ನು ಮಾಡಿದರೆ. ಇಂತವರನ್ನು ಶಿವನು ಯಾವತ್ತಿಗೂ ಕ್ಷಮಿಸುವುದಿಲ್ಲ.