ಇಡೀ ದಿನವನ್ನು ಆರೋಗ್ಯಕರ ವಾಗಿ ಕಳೆಯಬೇಕು ಎನ್ನುವವರಿಗೆ. ಬೆಳಗಿನ ಸಮಯದಲ್ಲಿ ಬ್ಲಾಕ್ ಟೀ ಕುಡಿಯೋದು ಅಷ್ಟು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಇದು ಹಲವು ಕಾಯಿಲೆಗಳನ್ನು ತರುತ್ತದೆ.
ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹಾಗಾದ್ರೆ ಅವು ಗಳು ಯಾವುವು ಎಂದರೆ.
ತಜ್ಞರ ಲೆಕ್ಕಾಚಾರದಲ್ಲಿ ಬ್ಲಾಕ್ ಟೀ ಅಥವಾ ಬ್ಲಾಕ್ ಕಾಫಿ ತುಂಬಾ ಆಮ್ಲಿಯ ಪ್ರಭಾವವನ್ನು ಹೊಂದಿದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದ ಆಮ್ಲ ಹಾಗೂ ಅಲ್ಕ್ಲೈನ್ ಸಮತೋಲನ ತಪ್ಪಿಸುತ್ತದೆ. ಇದು ದಿನ ಕಳೆದಂತೆ ಅಸಿಡಿಟಿ ಅಥವಾ ಅಜೀರ್ಣತೆಯನ್ನು ಹೆಚ್ಚು ಮಾಡಬಹುದು. ಇನ್ನು ಯಾವಗ ದೇಹದಲ್ಲಿ ನಿರ್ಜಲೀಕರಣ ಎದುರಾಗುತ್ತದೆ. ಆ ಸಂದರ್ಭದಲ್ಲಿ ಮಲಬದ್ಧತೆ ಕೂಡ. ಇದ್ದೇ ಇರುತ್ತದೆ. ಸೇವಿಸಿದ ಆಹಾರ ಕರುಳಿನ ಭಾಗದಲ್ಲಿ ಸರಿಯಾಗಿ ಜೀರ್ಣ ವಾಗದೆ ಇದ್ದರೆ. ಮಲ ವಿಸರ್ಜನೆ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ.
ಇನ್ನು ಬ್ಲಾಕ್ ಟೀ ಹೆಚ್ಚು ಅಸಿಡಿಕ್ ಆಗಿರುವುದರಿಂದ ಬೆಳಗಿನ ಸಂದರ್ಭದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ. ಅಮ್ಲಿಯ ಪ್ರಭಾವ ಹೆಚ್ಚಾಗುತ್ತದೆ ಇದು ಹಲ್ಲುಗಳ ಮೇಲೆ ಪ್ರಭಾವ ಬೀರಿ ಹಲ್ಲುಗಳ ಮೇಲ್ಭಾಗ ಎನಾಮಲ್ ಹಾಳ ಆಗುವಂತೆ ಮಾಡುತ್ತದೆ. ಮತ್ತು ಇನ್ನಿತರ ವಸಡುಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಇನ್ನೂ ಬ್ಲಾಕ್ ಟೀ ಕುಡಿಯುವುದರಿಂದ ಗ್ಯಾಸ್ಟಿಕ್ ಆಗುತ್ತದೆ ಎಂದು ಹೇಳುತ್ತಾರೆ. ಇದು ಕ್ರಮೇಣವಾಗಿ ಹೊಟ್ಟೆ ಉಬ್ಬರದ ತೊಂದರೆಯನ್ನು ತಂದು ಕೊಡುತ್ತದೆ. ಇದರ ಆಮ್ಲಿಯ ಪ್ರಭಾವ ದಿಂದ ಬೇರೆ ಆರೋಗ್ಯಕರ ಆಹಾರಗಳನ್ನು ಸಹ ಸರಿಯಾಗಿ ಸೇವಿಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ ನಿಮಗೆ ಬ್ಲಾಕ್ ಟೀ ಕುಡಿಯುವ ಬಯಕೆ ಇದ್ದರೆ ಅದರ ಉತ್ತಮ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಲು ತಜ್ಞರು ಹೇಳುವ ಹಾಗೆ ಊಟ ಆದ ಒಂದೆರಡು ಗಂಟೆಗಳ ನಂತರದಲ್ಲಿ ಸೇವನೆ ಮಾಡಬಹುದು. ಒಂದು ವೇಳೆ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಿ ಎಂದರೆ ಇದಕ್ಕೆ ಹಾಲು ಮತ್ತು ಸಕ್ಕರೆ ಹಾಕಬೇಡಿ. ಖಾಲಿ ಹೊಟ್ಟೆಯಲ್ಲಿ ಹಾಲು ಬೆರೆಸಿದ ಕಾಫಿ ಅಥವಾ ಟೀ ಹೊಟ್ಟೆಗೆ ತೊಂದರೆ ನೀಡುತ್ತದೆ.