ಹಿರಿಯ ಆಹಾರ ತಜ್ಞ ಅಂಬಿಕಾ ಶರ್ಮಾ ಅವರು ಹೇಳುವ ಪ್ರಕಾರ ಕೆಲವು ಹಸಿ ತರಕಾರಿಗಳನ್ನು ತಿನ್ನುವುದು ದೇಹಕ್ಕೆ ಹಾನಿಕರವಂತೆ. ಕೆಲವರು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ತರಕಾರಿಗಳನ್ನು ಹಸಿಯಾಗಿ ತಿಂದರೆ ಅದು ಜೀರ್ಣವಾಗುವುದಿಲ್ಲ. ಆಮ್ಲೀಯತೆ ಮತ್ತು ಹೊಟ್ಟೆಯುಬ್ಬರ ಸಮಸ್ಯೆ ಎದುರಿಸುತ್ತಾರೆ.
ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿನ್ನಲು ವೈದ್ಯರು ಶಿಫಾರಸು ಮಾಡ್ತಾರೆ. ಇನ್ನು ಕೆಲವು ತರಕಾರಿ ಪದಾರ್ಥಗಳನ್ನು ಕಚ್ಚಾ ಅಂದ್ರೆ ಹಸಿಯಾಗಿ ತಿನ್ನದಂತೆ ಶಿಫಾರಸು ಮಾಡ್ತಾರೆ. ಯಾಕೆ ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು ಎಂಬ ಬಗ್ಗೆ ತಜ್ಞರು ಏನು ಹೇಳಿದ್ದಾರೆ? ಅದು ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ನೋಡೋಣ. ಕೆಲವು ತರಕಾರಿಗಳನ್ನು ಹಸಿಯಾಗಿ ತಿಂದರೆ ಅವುಗಳು ನಿಮ್ಮ ಕರುಳಿನ ಆರೋಗ್ಯದ ಮೇಲೆ ಹೇಗೆ ಮತ್ತು ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.
ಯಾವ ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ?
ಹಿರಿಯ ಆಹಾರ ತಜ್ಞ ಅಂಬಿಕಾ ಶರ್ಮಾ ಅವರು ಹೇಳುವ ಪ್ರಕಾರ, ಕೆಲವು ಹಸಿ ತರಕಾರಿಗಳನ್ನು ತಿನ್ನುವುದು ದೇಹಕ್ಕೆ ಹಾನಿಕರ ಎಂದು ಹೇಳುತ್ತಾರೆ. ಕೆಲವರು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.
ತರಕಾರಿಗಳನ್ನು ಹಸಿಯಾಗಿ ತಿಂದರೆ ಅದು ಜೀರ್ಣವಾಗುವುದಿಲ್ಲ. ಆಮ್ಲೀಯತೆ ಮತ್ತು ಹೊಟ್ಟೆಯುಬ್ಬರ ಸಮಸ್ಯೆ ಎದುರಿಸುತ್ತಾರೆ. ಹಸಿ ಬದನೆಕಾಯಿ, ಅಕ್ಕಿ, ಹಸಿ ಆಲೂಗಡ್ಡೆ, ಮಶ್ರೂಮ್ ಸಲಾಡ್, ಹಸಿ ಹಾಲು, ಹಸಿ ಬೀನ್ಸ್
ಮತ್ತು ಹಸಿರು ಎಲೆ ಸೊಪ್ಪುಗಳನ್ನು ಹಸಿಯಾಗಿ, ಕಚ್ಚಾ ರೂಪದಲ್ಲಿ ತಿಂದರೆ ಅದು ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತದೆ. ಹಾಗಾದ್ರೆ ಇಲ್ಲಿ ಯಾವ ತರಕಾರಿ ಹಸಿಯಾಗಿ ತಿಂದರೆ ಯಾವ ಸಮಸ್ಯೆ ಉಂಟು ಮಾಡುತ್ತದೆ ಎಂದು ತಿಳಿಯೋಣ.
ಕಚ್ಚಾ ಆಲೂಗಡ್ಡೆ ಸೇವನೆ ಆಹಾರ ವಿಷ ಉಂಟು ಮಾಡಬಹುದು
ಆಹಾರ ತಜ್ಞೆ ಅಂಬಿಕಾ ಶರ್ಮಾ ಪ್ರಕಾರ, ಆಲೂಗಡ್ಡೆಯನ್ನು ಕಚ್ಚಾ ರೂಪದಲ್ಲಿ ತಿಂದರೆ ಅದು ಹೊಟ್ಟೆ ಉಬ್ಬುವ ಸಮಸ್ಯೆ ಉಂಟು ಮಾಡುತ್ತದೆ. ಅಲ್ಲದೆ ಇದು ಪೋಷಕಾಂಶ ವಿರೋಧಿ ಗುಣಲಕ್ಷಣ ಮತ್ತು ಸೋಲನೈನ್ ಹೊಂದಿದೆ, ಇದು ಆಹಾರ ವಿಷ ಉಂಟು ಮಾಡಬಹುದು ಅಂತಾರೆ.
ಆಲೂಗಡ್ಡೆ ಪಿಷ್ಟದಲ್ಲಿ ಸಮೃದ್ಧವಾಗಿದೆ. ಇದು ಗ್ಯಾಸ್ ಮತ್ತು ಉಬ್ಬುವಿಕೆ ಉಂಟು ಮಾಡುತ್ತದೆ. ಆಲೂಗಡ್ಡೆಯ ಮೇಲೆ ಹಸಿರು ಕಲೆ ಕಂಡರೆ ಅದನ್ನು ಕಚ್ಚಾ ತಿನ್ನುವುದು ತಪ್ಪಿಸಿ.
ಹಸಿ ಬದನೆ ತಿಂದರೆ ಅಸಿಡಿಟಿ ಸಮಸ್ಯೆ ಕಾಡುತ್ತದೆ
ಕಚ್ಚಾ ಬದನೆಕಾಯಿ ತಿಂದರೆ ಆರೋಗ್ಯಕ್ಕೆ ತುಂಬಾ ಹಾನಿಕರ. ಸೋಲನೈನ್ ಎಂಬ ವಿಷಕಾರಿ ಅಂಶವು ಹಸಿ ಬದನೆಯಲ್ಲೂ ಇದೆ. ಇದು ಆಹಾರ ವಿಷಕ್ಕೆ ಕಾರಣವಾಗುತ್ತದೆ. ಹಸಿ ಬದನೆ ತಿಂದರೆ ಅಲರ್ಜಿ ಉಂಟಾಗುತ್ತದೆ. ಹಸಿ ಬದನೆಕಾಯಿ ದೇಹದಲ್ಲಿ ಅಸಿಡಿಟಿ ಸಮಸ್ಯೆ ಉಂಟು ಮಾಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಉಂಟು ಮಾಡುತ್ತದೆ.
ಹಸಿ ಹಾಲು ಹೊಟ್ಟೆಗೆ ಒಳ್ಳೆಯದಲ್ಲ
ಚರ್ಮದ ವಿನ್ಯಾಸ ಸುಧಾರಿಸಲು ಹಸಿ ಹಾಲು ಸಹಕಾರಿ. ಹಸಿ ಹಾಲಿನಲ್ಲಿ ಸಾಲ್ಮೊನೆಲ್ಲಾ ಮತ್ತು ಇಕೋಲಿ ಎಂಬ ಬ್ಯಾಕ್ಟೀರಿಯಾಗಳಿವೆ. ಹಸಿಯಾಗಿ ಹಾಲು ಕುಡಿದರೆ ಬ್ಯಾಕ್ಟೀರಿಯಾ ದೇಹ ಸೇರಿ ತೊಂದರೆಯಾಗುತ್ತದೆ. ಹಾಗಾಗಿ ಹಾಲು ಕುದಿಸಿ ಕುಡಿಯಬೇಕು. ಹಾಲನ್ನು ಕುದಿಸಿದ ನಂತರ ಬ್ಯಾಕ್ಟೀರಿಯಾ ನಾಶವಾಗುತ್ತದೆ.
ಹಸಿ ಬೀನ್ಸ್ ಹೊಟ್ಟೆ ನೋವುಂಟು ಮಾಡುತ್ತದೆ
ಕಿಡ್ನಿ ಬೀನ್ಸ್ ಪ್ರೋಟೀನ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಹೊಂದಿದೆ. ಇದನ್ನು ಕಚ್ಚಾ ತಿಂದರೆ ಹೊಟ್ಟೆಗೆ ಹಾನಿಕರ. ಫೈಟೊಹೆಮಾಗ್ಗ್ಲುಟಿನ್ ಟಾಕ್ಸಿನ್ ಇದರಲ್ಲಿದೆ. ಇದು ದೇಹದಲ್ಲಿ ವಿಷ ಉಂಟು ಮಾಡುತ್ತದೆ.
ಕಚ್ಚಾ ಅಕ್ಕಿ ಸೇವನೆ ಹಾನಿಕರ
ಅಕ್ಕಿಯನ್ನು ಬೇಯಿಸದೇ ತಿಂದರೆ ಹೊಟ್ಟೆನೋವು ಬರುತ್ತದೆ. ಜೀರ್ಣವಾಗಲ್ಲ. ಹೊಟ್ಟೆಗೆ ಸಂಬಂಧಿಸಿದ ಅನೇಕ ರೋಗಗಳು ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ ಚೆನ್ನಾಗಿ ಬೇಯಿಸಿ ತಿನ್ನಬೇಕು.
ಕಚ್ಚಾ ಮಶ್ರೂಮ್ ಸಲಾಡ್ ಹಾನಿಕರ
ಅಣಬೆ ಸಲಾಡ್ ನಲ್ಲಿ ಕಚ್ಚಾ ಮಶ್ರೂಮ್ ತಿನ್ನುವುದು ಸೂಕ್ತವಲ್ಲ. ಇದು ಅನಾರೋಗ್ಯ ಉಂಟು ಮಾಡುತ್ತದೆ. ಅಣಬೆಗಳನ್ನು ಬೇಯಿಸಿ, ಕುದಿಸಿ ಅಥವಾ ಗ್ರಿಲ್ ಮಾಡಿ ತಿನ್ನಿರಿ.
ಎಲೆ ತರಕಾರಿ ಸೊಪ್ಪು ಹಸಿಯಾಗಿ ತಿನ್ನಬೇಡಿ
ಪಾಲಕ್, ಮೆಂತ್ಯ ಮತ್ತು ಇತರ ಎಲೆಗಳ ತರಕಾರಿಗಳು ಹಸಿಯಾಗಿ ತಿಂದರೆ ಅವುಗಳ ಪೌಷ್ಟಿಕಾಂಶ ಸಿಗಲ್ಲ. ಹೊಟ್ಟೆ ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಬೇಯಿಸಿ ತಿನ್ನಿರಿ.