ಪೂರ್ತಿ ದೇಹ ಬೆಳ್ಳಗೆ ಆಗಲು ಈ ಕ್ರೀಮ್ ಬಳಸಿ!

Written by Anand raj

Published on:

ಯಾವುದೇ ಕ್ರೀಮ್ ಹಾಗು ಮನೆಮದ್ದುಗಳಿಂದ ತಕ್ಷಣ ಫಲಿತಾಂಶ ಸಿಗುವುದಿಲ್ಲ. ಸ್ವಲ್ಪ ದಿನಗಳ ಕಾಲ ನೀವು ಬಳಸಬೇಕಾಗುತ್ತದೆ. ಅವಾಗ ಎರಡರಿಂದ ಮೂರು ಶೆಡ್ ಅಷ್ಟು ನಿಮ್ಮ ಸ್ಕಿನ್ ಲೈಟ್ ಆಗುತ್ತದೆ. ಹೀಗೆ ಅದನ್ನು ಮುಂದುವರೆಸಿದರೆ ನಿಮ್ಮ ಸ್ಕಿನ್ ಅಲ್ಲಿ ಒಳ್ಳೆಯ ಇಂಪ್ರೂವ್ ಮೆಂಟ್ಸ್ ಕಾಣಿಸುತ್ತದೆ. ಇವತ್ತಿನ ಲೇಖನದಲ್ಲಿ ಪೂರ್ತಿ ದೇಹ ಬೆಳ್ಳಗೆ ಆಗುವ ಕ್ರೀಮ್ ಬಗ್ಗೆ ತಿಳಿಸಿಕೊಡುತ್ತೇವೆ. ಈ ಕ್ರೀಮ್ ಅನ್ನು ಬಳಸುವುದರಿಂದ ಒಳ್ಳೆಯ ರಿಸಲ್ಟ್ ನಿಮಗೆ ಸಿಗುತ್ತದೆ. ಇದು ಟ್ಯಾನ್ ಅನ್ನು ಕೂಡ ಇದು ತೆಗೆದು ಹಾಕುತ್ತದೆ. ಇದು ಒಂದು ಕ್ರೀಮ್ ಸಾಕು ಮುಖ ಹಾಗು ಪೂರ್ತಿ ದೇಹವನ್ನು ಬೆಳ್ಳಗಾಗಿಸುತ್ತದೆ.

ಒಂದು ಬೌಲ್ ಗೆ 5 ಚಮಚ ಅಕ್ಕಿಯನ್ನು ಹಾಕಬೇಕು. ಅಕ್ಕಿಯನ್ನು ಚೆನ್ನಾಗಿ ತೊಳೆದು 5 ನಿಮಿಷ ನೀರಿನಲ್ಲಿ ನೆನಸಿಡಬೇಕು. ನಂತರ ಅದೇ ನೀರನ್ನು ಸ್ವಲ್ಪ ಹಾಕಿ ಅಕ್ಕಿಯನ್ನು ರುಬ್ಬಿಕೊಳ್ಳಿ. ಅಕ್ಕಿಯಲ್ಲಿ ವಿಟಮಿನ್ ಬಿ ಇದೆ. ಇದು ಸ್ಕಿನ್ ಅನ್ನು ವೈಟ್ ಮಾಡುತ್ತದೆ ಹಾಗು ಟ್ಯಾನ್ ಅನ್ನು ತೆಗೆದು ಹಾಕುತ್ತದೆ. ಇದು ನೆರಿಗೆಯನ್ನು ಮೂಡದಂತೆ ತಡೆದುಹಾಕುತ್ತದೇ. ನಂತರ ಇದಕ್ಕೆ ಎರಡು ಚಮಚ ಹಸಿ ಹಾಲನ್ನು ಹಾಕಬೇಕು.

ನಂತರ ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ತುರಿದು ರಸವನ್ನು ತೆಗೆದುಕೊಳ್ಳಿ. ಮೊದಲು ಒಂದು ಪ್ಯಾನ್ ಗೆ ಅಕ್ಕಿ ಪೇಸ್ಟ್ ಅನ್ನು ಹಾಕಿಕೊಳ್ಳಬೇಕು. ಮೀಡಿಯಂ ಫ್ಲಾಮ್ ನಲ್ಲಿ ಅಕ್ಕಿಯ ಪೇಸ್ಟ್ ಅನ್ನು ಅಲ್ಲಾಡಿಸುತ್ತ ಇರಬೇಕು. ಕ್ರೀಮ್ ತರ ಆದಮೇಲೆ ಒಂದು ಬೌಲ್ ಗೆ ಹಾಕಬೇಕು ಮತ್ತು ಇದಕ್ಕೆ ಆಲೂಗಡ್ಡೆ ರಸವನ್ನು ಹಾಗು ಒಂದು ಚಮಚ ಮೊಸರನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಈ ಕ್ರೀಮ್ ಅನ್ನು ಸ್ನಾನಕ್ಕಿಂತ 20 ನಿಮಿಷ ಮೊದಲು ಹಚ್ಚಿ ನಂತರ ಸ್ನಾನ ಮಾಡಿ. ಹೀಗೆ ಮಾಡುತ್ತ ಬಂದರೆ ನಿಮ್ಮ ಸ್ಕಿನ್ ತುಂಬಾನೇ ಇಂಪ್ರೂವ್ ಆಗುತ್ತದೆ.ಸ್ಕಿನ್ ನಲ್ಲಿ ಇರುವ ಟ್ಯಾನ್ ಎಲ್ಲಾ ರಿಮಿವ್ ಆಗಿ ಒಳ್ಳೆಯ ಗ್ಲೋ ಬರುತ್ತದೆ. ನಾವು ಹೇಳಿರುವ ಹಾಗೆಈ ಕ್ರೀಮ್ ಬಳಸಿದರೆ ನಿಮಗೆ 100% ಫಲಿತಾಂಶ ನಿಮಗೆ ಸಿಗುತ್ತದೇ.

Related Post

Leave a Comment