ನವರಾತ್ರಿಯ ಹಬ್ಬದ ದಿನ ಅಖಂಡ ದೀಪವನ್ನು ಹೇಗೆ ಮಾಡುವುದು, ಯಾವ ರೀತಿ ರಂಗೋಲಿ ಹಾಕುವುದು, ಯಾವ ರೀತಿ ದೀಪವನ್ನು ಹಚ್ಚುವುದನ್ನು ಮೊದಲು ತಿಳಿದುಕೊಂಡರೆ ತುಂಬಾ ಒಳ್ಳೆಯದು.ಮೊದಲು ದೀಪದ ಬಗ್ಗೆ ಹೇಳುವುದಾದರೆ ನವರಾತ್ರಿ ಹಬ್ಬದಿಂದ ವಿಜಯ ದಶಮಿ ಹಬ್ಬ ಆಗುವವರೆಗೂ ದೀಪರಾಧನೆ ಮಾಡಬೇಕು.ಆದ್ದರಿಂದ ದೊಡ್ಡದಾದ ದೀಪ ಮತ್ತು ದೊಡ್ಡ ತಟ್ಟೆಯನ್ನು ತೆಗೆದುಕೊಳ್ಳಬೇಕು.ಮೊದಲು ದೀಪಕ್ಕೆ ಶ್ರೀಗಂಧ ಹಚ್ಚಬೇಕು. ನಂತರ ಅರಿಶಿಣ ಕುಂಕುಮವನ್ನು ಹಚ್ಚಬೇಕು.
ಯಾವುದೇ ಕಾರಣಕ್ಕೂ ಸ್ಟೀಲ್ ಅನ್ನು ಉಪಯೋಗಿಸಬಾರದು.ಆದಷ್ಟು ಪಂಚ ಲೋಹ, ತಾಮ್ರ, ಹಿತ್ತಾಳೆ, ಬೆಳ್ಳಿಯ ದೀಪವನ್ನು ಹಚ್ಚಬಹುದು.ನವರಾತ್ರಿ ಹಬ್ಬ ಆಚರಣೆ ಮಾಡುವಾಗ ಅಮ್ಮನವರೇ ಮನೆಗೆ ಬಂದು ನೆಲೆಸಿರುತ್ತಾರೆ.ಹಾಗಾಗಿ ಯಾವುದೇ ತಪ್ಪನ್ನು ಮಾಡುವುದಕ್ಕೆ ಹೋಗಬಾರದು.
ಅಖಂಡ ದೀಪರಾಧನೆ ಮಾಡುವಗ ಎಷ್ಟು ರೀತಿಯ ಎಣ್ಣೆ ಹಾಕಬೇಕು ಎಂದರೆ??
ಅಖಂಡ ದೀಪರಾಧನೆ ಮಾಡುವಾಗ ಒಂದೇ ರೀತಿಯ ಎಣ್ಣೆಯನ್ನು ಕೂಡ ಹಾಕಬಹುದು ಹಾಗೂ 3,5 ರೀತಿಯ ಎಣ್ಣೆಗಳನ್ನು ಸಹ ಹಾಕಬಹುದು.ದೀಪರಾಧನೆಗೆ ತುಪ್ಪ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ವೊಗ್ಗೆ ಎಣ್ಣೆ ಮತ್ತು ಶ್ರೀಗಂಧದ ಎಣ್ಣೆಯನ್ನು ಉಪಯೋಗಿಸಬಹುದು.9 ದಿನಗಳ ಕಾಲ ದೀಪರಾಧನೆ ಮಾಡುವುದಾದರೆ 1ಅರ್ಧ ಲೀಟರ್ 5 ರೀತಿಯ ಎಣ್ಣೆಯನ್ನು ಸಮವಾಗಿ ತೆಗೆದುಕೊಳ್ಳಬೇಕು.
ತುಪ್ಪವನ್ನು ಹಾಕಿ ದೀಪವನ್ನು ಹಚ್ಚುವುದರಿಂದ ಸಂಕಲ್ಪ ಬೇಗ ಸಿದ್ಧಿಯಾಗುತ್ತದೆ ಮತ್ತು ದೈವ ಶಕ್ತಿ ಮತ್ತು ಲಕ್ಷ್ಮಿ ಕಟಾಕ್ಷ ಹೆಚ್ಚಾಗುತ್ತದೆ. ಕುಜ ದೋಷ ಇರುವವರು ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪವನ್ನು ಹಚ್ಚುವುದರಿಂದ ದೋಷ ನಿವಾರಣೆಯಾಗುತ್ತದೆ. ಸಂತಾನಭಾಗ್ಯ ಆಗಬೇಕು ಎಂದು ಅಂದುಕೊಂಡವರು ಮಂಗಳವಾರದ ದಿನ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ ಕೊಬ್ಬರಿ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಶೀಘ್ರ ಫಲ ಸಿಗುತ್ತದೆ.
ಎಳ್ಳೆಣ್ಣೆಯನ್ನು ಉಪಯೋಗಿಸುವುದರಿಂದ ಕಷ್ಟಗಳು ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ.ದೇಹದ ಆರೋಗ್ಯ ಕೂಡ ಕಡಿಮೆಯಾಗುತ್ತದೆ.ವೊಂಗೆ ಎಣ್ಣೆ ಹಚ್ಚುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಸರಸ್ವತಿ ಪೂಜೆ ಮಾಡುವಾಗ ವೊಂಗೆ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಲಕ್ಷ್ಮಿಯ ದೇವಸ್ಥಾನಕ್ಕೆ ಹೋಗಿ ವೊಂಗೆ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಸಾಲದ ತಿರುತ್ತದೆ.
ಶ್ರೀಗಂಧದ ಎಣ್ಣೆಯನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಸಾಲದ ಬಾಧೆ ಇರುವುದಿಲ್ಲ. ಮನೆಯಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೆಚ್ಚಾಗುತ್ತ ಹೋಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ಹೆಚ್ಚಾಗುತ್ತ ಹೋಗುತ್ತವೆ. ಈ ಐದು ರೀತಿಯ ಎಣ್ಣೆಯಲ್ಲಿ ಒಂದೊಂದು ರೀತಿಯ ಗುಣ ಇರುತ್ತದೆ.
ನವರಾತ್ರಿಯಲ್ಲಿ ಕಳಸದ ಪ್ರತಿಷ್ಠಾಪನೆಯನ್ನು ಮಾಡಿಕೊಳ್ಳಬೇಕು. ಕಳಸದ ಬಲಭಾಗದಲ್ಲಿ ದೀಪವನ್ನು ಹಚ್ಚಿ ಆಖಂಡ ದೀಪರಾಧನೆ ಮಾಡಬೇಕಾಗುತ್ತದೆ. ಅಖಂಡ ದೀಪಾರಾಧನೆ ಮಾಡುವ ಮೊದಲು ಅಕ್ಕಿಹಿಟ್ಟಿನಿಂದ ರಂಗೋಲಿ ಹಾಕಬೇಕು. ಒಂದು ಪ್ಲೇಟ್ ನಲ್ಲಿ ಅಕ್ಕಿ, ಎರಡು ವೇಳೆದೆಲೆ ಮೇಲೆ ಶ್ರೀ ಎಂದು ಬರೆಯಬೇಕು.ನಂತರ ಅಕ್ಷತೆ ಹಾಕಿ ಪ್ಲೇಟ್ ಇಡಬೇಕು ಮತ್ತು ಪ್ಲೇಟ್ ಒಳಗೆ ದೀಪವನ್ನು ಇಡಬೇಕು.ನಂತರ 5 ರೀತಿಯ ಎಣ್ಣೆಯನ್ನು ಹಾಕಬೇಕು ಮತ್ತು ತುಂಬಾ ಉದ್ದವಾದ ಬತ್ತಿಯನ್ನು ಹಾಕಬೇಕು.ನಂತರ ಹೂವನ್ನು ಮೂಡಿಸಬೇಕು. ಆದಷ್ಟು ದೀಪದ ಹತ್ತಿರ ಹೂವನ್ನು ಇಡುವಾಗ ಕಡಿಮೆ ಪ್ರಮಾಣದಲ್ಲಿ ಇಟ್ಟರೆ ಒಳ್ಳೆಯದು.ನಂತರ ಊದುಬತ್ತಿಯಿಂದ ದೀಪರಾಧನೆ ಮಾಡಬಹುದು. ಇದನ್ನು ಕಳಸ ಪ್ರತಿಷ್ಟಪನೆ ಮಾಡುವ ಸಮಯದಲ್ಲಿ ದೀಪರಾಧನೆ ಮಾಡಬೇಕು.