ನಿಮ್ಮ ಕಣ್ಣಿನ ಮೇಲೆ ರೆಪ್ಪೆ ಅಥವಾ ಕೆಳಗಿನ ರೆಪ್ಪೆಗಳಲ್ಲಿ ಕಾಣಿಸುವ ನೋವುಯುಕ್ತ ಚರ್ಮದ ಊತವೇ (ಗುಳ್ಳೆಯೇ) ಸ್ಟೈ ಆಗಿರಬಹುದು
ಸ್ಟೈ ಎಂಬುದು ಸಾಮಾನ್ಯ ಕಣ್ಣು ರೆಪ್ಪೆಯ ಸೋಂಕು, ಇದು ಎಲ್ಲಾ ವಯಸ್ಸಿನ ಜನರನ್ನು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಅಥವಾ ಎರಡು ಬಾರಿ ಬಂದು ಹೋಗಿರುತ್ತದೆ. ಸ್ಟೈ ಎಂಬುದು ಹೆಚ್ಚಾದ ಕೊಬ್ಬು ಅಥವಾ ಸೂಕ್ಶ್ಮಾಣು ಜೀವಿಗಳಿಂದ ಕೊಬ್ಬಿನ ಗ್ರಂಥಿ ಅಥವಾ ಕೂದಲು ಹುಟ್ಟುವ ಜಾಗದ ಕಟ್ಟುವಿಕೆಯಿಂದ ಉಂಟಾಗುವ ಬಾವು. ಸುಮಾರು ೯೫% ಸ್ಟೈಗಳು ಸಾಮಾನ್ಯವಾಗಿ ಸ್ಟ್ಯಾಫಿಲೋಕೋಕಸ್ ಅಯುರೆಯಸ್ ಬ್ಯಾಕ್ಟೀರಿಯಾದಿಂದ ಉಂಟಾಗುತ್ತವೆ, ಸ್ಟೈ ಸಣ್ಣ ಕಿರಿಕಿರಿಯಾಗಿದ್ದರು, ಇದು ತುಂಬಾ ನೋವು ಮತ್ತು ಅನಾನುಕೂಲವನ್ನುಂಟು ಮಾಡುತ್ತದೆ.
ಸ್ಟೈ ಎಂಬುದು ಮೇಲಿನ ಅಥವಾ ಕೆಳಗಿನ ಕಣ್ಣು ರೆಪ್ಪೆಯ ( ಬಾಹ್ಯ / ಹೊರಗಿನ ಸ್ಟೈ) ಹೊರಭಾಗದಲ್ಲಿ, ಹಾಗೆಯೇ ಒಳಭಾಗದಲ್ಲಿ, ರೆಪ್ಪೆಗೂದಲು ಬೆಳೆಯುವ ರೆಪ್ಪೆಯ ಅಂಚಿನ ಬಳಿ ಸಂಭವಿಸಬಹುದು. ಬಾಹ್ಯ (ಹೊರಗಿನ) ಶೈಲಿಯವು ಹೆಚ್ಚು ಸಾಮಾನ್ಯವಾಗಿದೆ, ಮೇಲೆಯೇ ಕಾಣಿಸಿಕೊಳುತ್ತದೆ ಮತ್ತು ತ್ವರಿತವಾಗಿ ಗುಣವಾಗುತ್ತವೆ ಮತ್ತು ಒಳಗಿನ ಸ್ಟೈಗಳು ತೀರಾ ಸಾಮಾನ್ಯವಲ್ಲ ಹಾಗೂ ಹೆಚ್ಚು ಉಪದ್ರವಿಯಾಗಿದೆ.
ಅವು ಬಹಳ ಬೇಗನೆ ಅಭಿವೃದ್ಧಿ ಹೊಂದಿದ್ದರೂ, ಸ್ಟೈಗಳು ಸಾಮಾನ್ಯವಾಗಿ ತೊಂದರೆಯುಂಟು ಮಾಡುವುದಿಲ್ಲ ಮತ್ತು ಯಾವುದೇ ದೃಷ್ಟಿ ತೊಂದರೆಗಳಿಗೆ ಕಾರಣವಾಗುವುದಿಲ್ಲ, ಹೆಚ್ಚಿನ ಸ್ಟೈಗಳು ೫-೬ ದಿಗಳಲ್ಲಿ ಸರಳವಾದ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾದ ಕಣ್ಣಿಗೆ, ಮೃದುವಾದ ಮತ್ತು ಸ್ವಚ್ಛವಾದ ಬಟ್ಟೆಯನ್ನು ಬೆಚ್ಚಗಿನ ಬಿಸಿ ನೀರಿನಲ್ಲಿ ಅದ್ದಿ ಕಣ್ಣಿಗೆ ೫ರಿಂದ ೧೦ ನಿಮಿಷ ಕಾಲ ಸ್ಟೈನ ಮೇಲೆ ಶಾಖ ಕೊಡುವುದರಿಂದ ಇದನ್ನು ದಿನಕ್ಕೆ ೩-೪ ಬಾರಿ ಮಾಡಬೇಕಾಗುತ್ತದೆ. ಈ ಚಿಕಿತ್ಸೆ ಅನ್ವಯಿಸಿದರೂ ಸ್ಟೈ ಒಂದು ವಾರಕ್ಕಿಂತ ಹೆಚ್ಚು ಕಾಲ ಇದ್ದರೆ ಅಥವಾ ಕಣ್ಣು ರೆಪ್ಪೆಯ ಆಚೆಗಿನ ಊತ ಮತ್ತು ಅದು ಕೆಂಪು ಬಣ್ಣವನ್ನು ಹೊಂದಿದ್ದರೆ, ನೀವು ಗಮನಿಸಿದರೆ ತಕ್ಷಣ ಕಣ್ಣಿನ ವೈದ್ಯರನ್ನು ಭೇಟಿ ಮಾಡಿ.
ನಿಮ್ಮ ಕಣ್ಣುಗಳ ಮೇಲ್ಮೈಭಾಗದಲ್ಲಿ ಸಂಭವಿಸುತ್ತದೆ. ಹಾಗಾದಾಗ ಕಣ್ಣು ಕೆರೆದುಕೊಳ್ಳುವಂತೆ, ಉರಿ ಅಥವಾ ಕೆರೆದುಕೊಳ್ಳುವ ಸಂವೇದನೆಗೆ ಗುರಿಯಾಗಬಹುದು. ಇದು ಸಾಮಾನ್ಯವಾಗಿ ನಿಮ್ಮ ಕಣ್ಣಿಗೆ ಗಾಯವಾದಾಗ ಸಂಭವಿಸಬಹುದು. ಇಂತಹ ಪರಿಸ್ಥಿತಿಗೆ ಐ ಡ್ರಾಪ್ಸ್ (ಕಣ್ಣಿನ ಡ್ರಾಪ್ಸ್) ಹಾಕಿಕೊಳ್ಳುವ ಮೂಲಕ ಸುಲಭವಾಗಿ ಚಿಕಿತ್ಸೆ ನೀಡಬಹುದು.
ಕಣ್ಣುಗಳೊಳಗೆ ಇರಿಯುವ ಅಥವಾ ಹಿಂಸಾತ್ಮಕ ಅನುಭವಗಳಿಂದ ಕಾಣಬಹುದು. ಹೀಗಾದರೆ ತಕ್ಷಣ ನೀವು ಕಣ್ಣಿನ ವೈದ್ಯರನ್ನು ಕಾಣುವುದು ಅತ್ಯಂತ ಮುಖ್ಯ, ಏಕೆಂದರೆ ಕೆಲವು ಗಂಭೀರ ಸ್ಥಿತಿಯ ಕಾರಣಗಳಿಂದ ಕಕ್ಷೀಯ ನೋವು ಬಂದಿರುವ ಸಾಧ್ಯತೆ ಇರುತ್ತದೆ.
ವಾತಾವರಣದ ಧೂಳು ಅಥವ ಕೊಳಕು ನಿಮ್ಮ ಕಣ್ಣಿಗೆ ಬಿದ್ದಾಗ ಕೂಡ ಒಂದು ರೀತಿಯ ಸಾಮಾನ್ಯ ನೋವು ಕಾಣುತ್ತದೆ. ಹೀಗೆ ಧೂಳು ಅಥವ ಕಸ ಕಣ್ಣೊಳಗೆ ಹೋಗಿ ಸೇರಿಕೊಂಡಾಗ ಕಣ್ಣು ಕೆರಳುವುದು ಮತ್ತು ಕೆಂಪಾಗುವುದಕ್ಕೆ ಕಾರಣವಾಗಿ ಕಣ್ಣಿನಿಂದ ನೀರು ಸುರಿಯುದಕ್ಕೆ ಕಾರಣವಾಗುತ್ತದೆ.ಇಂತಹ ಸಂದರ್ಭದಲ್ಲಿ ಕೂಡಲೇ ವೈದ್ಯರ ಸಲಹೆ ಪಡೆದುಕೊಳ್ಳುವುದು ಸೂಕ್ತ.
ಮೇದಸ್ಸಿನ ಗ್ರಂಥಿಗಳ ತಡೆಯಿಂದ ಸಂಭವಿಸುವ ಕಣ್ಣಿನ ರೆಪ್ಪೆಯ ಮೇಲೆ ಕಂಡು ಬರುವ ಕೆಂಪು ಗುಳ್ಳೆಗೆ ಸ್ಟೈ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಕಣ್ಣು ರೆಪ್ಪೆಯ ಒಳಗಡೆ ಅಥವಾ ಕೊನೆಯಲ್ಲಿ ಕಾಣುತ್ತದೆ.ಈ ಪರಿಸ್ಥಿತಿ ಅಷ್ಟೊಂದು ತೀವ್ರವಲ್ಲ ಮತ್ತು ತಾನಾಗಿಯೇ ಕೆಲವು ದಿನಗಳಲ್ಲಿ ಕಡಿಮೆಯಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕಣ್ಣು ಅತ್ಯಂತ ಸೂಕ್ಷ್ಮವಾಗಿಬಿಡುತ್ತದೆ ಮತ್ತು ನೀವು ಸ್ವಲ್ಪ ನೋವನ್ನು ಕೂಡ ಅನುಭವಿಸಬಹುದು. ಹಾಗೆ ಕಣ್ಣುಗುಡ್ಡೆ ಕಾಣಿಸಿಕೊಂಡಾಗ ಕಣ್ಣನ್ನು ಆಗಾಗ್ಗೆ ಮುಟ್ಟಬಾರದು ಮತ್ತು ಅದು ತಾನಾಗಿಯೇ ಕಡಿಮೆಯಾಗಲು ಬಿಟ್ಟುಬಿಡಿ.
ನೀವು ಯಾವುದೇ ರೀತಿಯ ಕಿರಿಕಿರಿ ಅಥವಾ ಕಣ್ಣಿನಲ್ಲಿ ನೋವು ಅನುಭವಿಸಿದ ಪಕ್ಷದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ ಮತ್ತು ಕಣ್ಣುಗಳಿಗೆ ಆಯಾಸಮಾಡಬಾರದು. ಟೆಲಿವಿಷನ್ ನೋಡುವುದನ್ನು, ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಳಸುವುದನ್ನು ತಪ್ಪಿಸಬೇಕು, ಇಲ್ಲದಿದ್ದಲ್ಲಿ ನಿಮ್ಮ ಕಣ್ಣಿನ ಪರಿಸ್ಥಿತಿ ಮತ್ತಷ್ಟೂ ಹದಗೆಡುತ್ತದೆ.