ಕೆಟ್ಟ ಕೊಲೆಸ್ಟ್ರೇಲ್ ಕರಗಿಸಲು 3 ಬೆಸ್ಟ್ ಜ್ಯೂಸ್!

Written by Anand raj

Published on:

bad cholesterol:ಹತ್ತು ಹಲವರು ರೋಗಗಳು ಕೆಟ್ಟ ಕೊಲೆಸ್ಟ್ರೇಲ್ ಯಿಂದಾಗಿ ನಮ್ಮ ಶರೀರಕ್ಕೆ ಹೃದಯಕ್ಕೆ ಹೆಚ್ಚಾಗಿ ಸಂಭವಿಸುತ್ತವೆ. ಈ ಕೆಟ್ಟ ಕೊಬ್ಬು ಕಣ್ಣಿನ ನರ ನಾಡಿಗಳಲ್ಲಿ ತುಂಬಿಕೊಂಡಾಗ ಕಣ್ಣಿನಲ್ಲಿ ರೇಟಿನೋಪತಿ ಬರುತ್ತದೆ. ಇನ್ನು ಕ್ಯಾನ್ಸರ್ ಜೀವಕೋಶ ಬೆಳೆಯುವುದಕ್ಕೆ ಕೆಟ್ಟ ಕೊಬ್ಬು ಕಾರಣವಾಗುತ್ತದೆ.ಅಷ್ಟೇ ಅಲ್ಲದೆ ಸಕ್ಕರೆ ಕಾಯಿಲೆ ಸಮಸ್ಸೆಗೂ ಕಾರಣವಾಗುತ್ತದೆ. ಖರಿದ ಪದಾರ್ಥ, ಮಾಂಸಹಾರ, ಬೇಕರಿ ಪದಾರ್ಥ, ಚಹಾ, ಕಾಫಿ ಬಿಡಿ ಸಿಗರೇಟ್, ಸಾರಾಯಿಗಿಂತ ದುಷ್ಟ ಚಟಗಳಿಂದ ದೂರ ಇರಬೇಕು. ಇದಕ್ಕೆ 20ಗ್ರಾಂ ನೆಲ ನೆಲ್ಲಿಯನ್ನು ಜ್ಯೂಸ್ ರೀತಿ ಮಾಡಿಕೊಂಡು ಸೇವನೆ ಮಾಡಬಹುದು. ಇನ್ನು ಎರಡನೇಯದು 15 ಬಿಲ್ವ ಪತ್ರೆ ಎಲೆ ತೆಗೆದುಕೊಂಡು ಜ್ಯೂಸ್ ಮಾಡಿ ಕುಡಿಬೇಕು, ಇನ್ನು ಮೂರನೆಯದು ತುಳಸಿ ಮತ್ತು ಅಮೃತಬಳ್ಳಿ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.

ಬೇವಿನ ಎಲೆ ಜೊತೆ ಸ್ವಲ್ಪ ಅರಿಶಿನ ಮಿಕ್ಸ್ ಮಾಡಿಕೊಂಡು ಕುಡಿಯಬೇಕು. ಇದು ಶರೀರದಲ್ಲಿ ಇರುವ ಕೊಲೆಸ್ಟ್ರೇಲ್, LDL,VDL ಅನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ. ಇನ್ನು ಸರಿಯಾದ ರೀತಿಯಲ್ಲಿ ಆಹಾರ ಸೇವನೆ ಮಾಡುವುದರಿಂದ ಈ ಜ್ಯೂಸ್ ಗಳ ಲಾಭ ನಿಮಗೆ 100ಕ್ಕೆ 100 ಸಿಗುತ್ತದೆ. ಆದಷ್ಟು ಸಸ್ಯಹಾರವನ್ನು ಸೇವನೆ ಮಾಡುವುದು ಅರೋಗ್ಯಕ್ಕೆ ತುಂಬಾ ಒಳ್ಳೆಯದು.

ಕಿಡ್ನಿ ಸಮಸ್ಸೆ ಇರುವವರು ಈ ರೀತಿ ಜ್ಯೂಸ್ ಗಳನ್ನು ಹೆಚ್ಚಾಗಿ ಸೇವನೆ ಮಾಡುವಂತಿಲ್ಲ. ಇವರು ಕೂಡ ವೈದ್ಯರ ಸಲಹೆ ತೆಗೆದುಕೊಂಡು ಕುಡಿದರೆ ಬಹಳ ಒಳ್ಳೆಯದು. ಇನ್ನು ಕರುಳಿಗೆ ಸಂಬಂಧ ಪಟ್ಟ ಹೊಟ್ಟೆಗೆ ಸಂಬಂಧಪಟ್ಟ ಸರ್ಜರಿ ಮಾಡಿಸಿಕೊಂಡವರು,ಸ್ತನಪಾನ ಮಾಡುವ ಸ್ತ್ರೀಯರು ಸಹ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು.

Related Post

Leave a Comment