ದಾಂಪತ್ಯದಲ್ಲಿ ಇರುವ ಕಲಹವನ್ನು ಪರಿಹಾರ ಮಾಡಿಕೊಳ್ಳೋದು ಹೇಗೆ ತಿಳಿದುಕೊಳ್ಳಿ!

Written by Anand raj

Published on:

ಪ್ರತಿಯೊಬ್ಬ ವ್ಯಕ್ತಿಯ ಜೀವನದ ಹಂತಗಳಲ್ಲಿ ದಾಂಪತ್ಯ ಜೀವನವು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ, ದಾಂಪತ್ಯ ಜೀವನ ಆರಂಭವಾದ ನಂತರ ಆ ವ್ಯಕ್ತಿಯ ಅಂತ್ಯದವರೆಗೂ ಕೂಡ ಆ ಒಂದು ಸಂಬಂಧ ಚೆನ್ನಾಗಿ ಇದ್ದಾಗ ಮಾತ್ರ ವ್ಯಕ್ತಿಯು ಎಲ್ಲಾ ರೀತಿಯಿಂದಲೂ ಚೆನ್ನಾಗಿ ಇರುತ್ತಾನೆ, ಒಂದು ವೇಳೆ ಇಂತಹ ದಾಂಪತ್ಯ ಜೀವನ ಹದಗೆಟ್ಟಾಗ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಅವನು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾನೆ, ಇಂತಹ ಸಂದರ್ಭದಲ್ಲಿ ಎಲ್ಲಾ ವಿಷಯದಲ್ಲೂ ಕೂಡ ಸಮಸ್ಯೆಗಳು ಎದುರಾಗುತ್ತವೆ.

ಈ ರೀತಿ ದಾಂಪತ್ಯ ಜೀವನದ ಸಮಸ್ಯೆಗಳು ಹೆಚ್ಚಾದಾಗ ಸಮಸ್ಯೆಗಳು ದೂರವಾಗಬೇಕು ನಮ್ಮ ದಾಂಪತ್ಯ ಜೀವನ ಚೆನ್ನಾಗಿರಬೇಕು ಗಂಡ ಹೆಂಡತಿ ಅನ್ಯೋನ್ಯತೆಯಿಂದ ಬದುಕಬೇಕು ಎಂದರೆ ತಪ್ಪದೇ ಈ ಕೆಲವು ಪರಿಹಾರಗಳನ್ನು ಮಾಡಿಕೊಳ್ಳಬೇಕು, ಈ ಒಂದು ಪರಿಣಾಮಕಾರಿ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಗಂಡ ಹೆಂಡತಿಯ ನಡುವಿನ ಅನ್ಯೋನ್ಯತೆ ಹೆಚ್ಚಾಗುತ್ತದೆ, ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ, ಹಾಗಾದರೆ ನಂಬಿಕೆಗಳು ನಡೆದಿರುವ ಸಮಸ್ಯೆಗಳು ನಿವಾರಣೆಯಾಗಬೇಕು ದಾಂಪತ್ಯ ಜೀವನ ಸುಖಮಯವಾಗಿ ಇರಬೇಕು ಎಂದರೆ ಯಾವ ಪರಿಹಾರ ಮಾಡಿಕೊಳ್ಳಬೇಕು ಎಂದು ನೋಡೋಣ.

ಮೊದಲನೆಯದಾಗಿ ಗಂಡ ಹೆಂಡತಿ ಮಲಗುವಂತಹ ಕೋಣೆಯಲ್ಲಿ ರಾತ್ರಿಯ ಸಮಯದಲ್ಲಿ ಕರ್ಪೂರವನ್ನು ಬೆಳಗಿಸಬೇಕು, ಹೀಗೆ ಬೆಳಗಿಸುವುದರಿಂದ ಕೋಣೆಯಲ್ಲಿರುವ ಋಣಾತ್ಮಕ ಅಂಶಗಳು ದೂರವಾಗುತ್ತವೆ ಹಾಗೂ ಮೂರು ಅಥವಾ ಐದು ಶುಕ್ರವಾರದ ದಿನಗಳಲ್ಲಿ ಕರ್ಪೂರವನ್ನು ಹರಿಯುವ ನೀರಿಗೆ ಬಿಡುವುದರಿಂದ ದಾಂಪತ್ಯದ ಕಲಹಗಳು ದೂರವಾಗುತ್ತದೆ. ಇನ್ನು ಮನೆಯ ದೇವರ ಕೋಣೆಯಲ್ಲಿ ಪಾದರಸದ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪ್ರತಿದಿನ ಬೆಳಿಗ್ಗೆ ಕಪ್ಪು ಎಳ್ಳು ಮತ್ತು ದೇಸಿ ತುಪ್ಪದಿಂದ ಅಭಿಷೇಕ ಮಾಡುತ್ತಾ ‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಪಠಿಸಬೇಕು, ಹೀಗೆ ಮಾಡುವುದರಿಂದ ಕೂಡ ಗಂಡ ಹೆಂಡತಿಯ ನಡುವೆ ಸಮಸ್ಯೆಗಳು ದೂರವಾಗುತ್ತವೆ ಇಬ್ಬರ ನಡುವೆ ಭಾಂದವ್ಯ ಹೆಚ್ಚಾಗುತ್ತದೆ, ಇದೊಂದು ಪೂಜೆಯನ್ನು ನೀವು 77 ದಿನಗಳವರೆಗೆ ಮಾಡಬೇಕು. ಬಾಳೆ ಗಿಡದಲ್ಲಿ ಮಹಾ ವಿಷ್ಣುವಿನ ವಾಸಸ್ಥಳ ಇರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಪ್ರತಿ ಗುರುವಾರ ಬಾಳೆಗಿಡಗಳನ್ನು ಹಾಕಿ ದೀಪವನ್ನ ಬೆಳಗಿಸುವುದರಿಂದ ಗಂಡ ಹೆಂಡತಿಯ ನಡುವೆ ಅನ್ಯೋನ್ಯತೆ ಹೆಚ್ಚಾಗುತ್ತದೆ, ದಂಪತಿ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದಿಲ್ಲ. ಮಲಗುವ ಕೋಣೆಯ ನೈಋತ್ಯ ಗೋಡೆಗೆ ಗಂಡ ಹೆಂಡತಿಯ ಫೋಟೋವನ್ನು ಹಾಕಬೇಕು, ಹೀಗೆ ಮಾಡುವುದರಿಂದ

ಗಂಡ ಹೆಂಡತಿಯ ನಡುವಿನ ಸಂಬಂಧ ಚೆನ್ನಾಗಿರುತ್ತದೆ. ಇದರ ಜೊತೆಗೆ ಕೋಪವನ್ನು ನಿಯಂತ್ರಣದಲ್ಲಿಡಿ ತಾಳ್ಮೆ ಯಾವಾಗಲೂ ಇರಬೇಕು, ಇಬ್ಬರ ನಡುವೆ ಒಬ್ಬರಿಗೆ ಒಬ್ಬರ ನಡುವೆ ಗೌರವ ಪ್ರೀತಿ ವಿಶ್ವಾಸ ಇರಬೇಕು, ಒಬ್ಬರನ್ನೊಬ್ಬರು ಬಿಟ್ಟು ಕೊಡುವ ಮನೋಭಾವ ಇರಬಾರದು, ಇವುಗಳನ್ನು ಪಾಲಿಸಿದರೆ ದಾಂಪತ್ಯ ಜೀವನ ಯಾವಾಗಲೂ ಸುಖಮಯವಾಗಿರುತ್ತದೆ. 

Related Post

Leave a Comment