ಆಂಜನೇಯ ಸ್ವಾಮಿಗೆ ಹೀಗೆ ಪೂಜೆ ಮಾಡಿದರೆ ಎಂತಹ ಸಮಸ್ಸೆ ಆದರೂ ತೋಲಗಿಹೋಗುವುದು 100% ಖಚಿತ!

Written by Anand raj

Published on:

ಹಿಂದೂ ಸಂಪ್ರದಾಯದಲ್ಲಿ ಒಂದೊಂದು ದಿನ ಒಂದೊಂದು ದೇವರಿಗೆ ಪೂಜೆಯನ್ನು ಮಾಡುವುದು ಆರಾಧನ ಮಾಡುವುದನ್ನು ನೋಡಿರುತ್ತೇವೆ. ಇನ್ನು ಮಂಗಳವಾರ ಭಕ್ತಿಯಿಂದ ಆಂಜನೇಯ ಸ್ವಾಮಿಯ ಪೂಜೆ ಮಾಡಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬುದು ಭಕ್ತರ ನಂಬಿಕೆ. ಅದೂ ಅಲ್ಲದೆ, ಮಂಗಳವಾರ ಮಾಡುವ ಕೆಲವೊಂದು ಪರಿಹಾರಗಳು ಬದುಕಿನಲ್ಲಿ ಒಳಿತಿಗೆ ಕಾರಣವಾಗುತ್ತವೆ ಎಂಬ ನಂಬಿಕೆ ಕೂಡಾ ಇದೆ.

ಕಷ್ಟಗಳು ಇಲ್ಲದ ಜನರಿಲ್ಲ. ಬದುಕಿನಲ್ಲಿ ಒಂದಲ್ಲ ಒಂದು ಕಷ್ಟಗಳು ಕಾಡುತ್ತಲೇ ಇರುತ್ತವೆ. ಜೀವನ ಎಂದರೇನೇ ಹಾಗೆ… ಸುಖ ಕಷ್ಟಗಳ ಸಮ್ಮಿಲನ. ಎಂತಹ ಸಿರಿವಂತನಾದರೂ ಅವರ ಮಟ್ಟದಲ್ಲಿ ಒಂದಲ್ಲ ಒಂದು ಕಷ್ಟಗಳು ಇದ್ದೇ ಇರುತ್ತವೆ. ಅಂತೆಯೇ, ಇಂತಹ ಸಂದರ್ಭದಲ್ಲಿ ದೇವತಾರಾಧನೆಯಿಂದ ಕೊಂಚ ಮನಸ್ಸಿಗೆ ಸಮಾಧಾನವಾಗುತ್ತದೆ. ಏಕ ಭಕ್ತಿಯಿಂದ ಪೂಜಿಸಿದರೆ ದೇವರು ನಮ್ಮ ಕಷ್ಟಗಳನ್ನೆಲ್ಲಾ ಪರಿಹರಿಸುತ್ತಾರೆ ಎಂಬುದು ಆಸ್ತಿಕರ ಬಲವಾದ ನಂಬಿಕೆ. ಅದಕ್ಕೆಂದೇ ವಾರದ ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸುವ ಮೂಲಕ ಜನರು ಮಾನಸಿಕ ಸಮಾಧಾನವನ್ನು ಕಾಣುತ್ತಾರೆ. ಅಂತೆಯೇ, ಮಂಗಳವಾರ ಏನೆಲ್ಲಾ ಮಾಡಬೇಕು ಎಂಬುದನ್ನು ಇಲ್ಲಿ ನೋಡೋಣ.

ಪವನ ಪುತ್ರ ಹನುಮಂತನ ಪೂಜೆಗೆ ನಮ್ಮಲ್ಲಿ ಬಲು ಮಹತ್ವವಿದೆ. ಸಂಕಟ ಮೋಚನ ಎಂದೇ ಆಂಜನೇಯ ಸ್ವಾಮಿಗೆ ಹೆಸರು. ಶ್ರೀರಾಮ ಭಕ್ತ ಹನುಮಂತ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ ಎಂಬುದು ಆಸ್ತಿಕರ ಬಲವಾದ ನಂಬಿಕೆ. ವಾರದ ಪ್ರತಿದಿನ ಒಂದೊಂದು ದೇವರನ್ನು ಪೂಜಿಸುತ್ತಾ ಭಕ್ತರು ಮಾನಸಿಕ ನೆಮ್ಮದಿ ಕಾಣುತ್ತಾರೆ. ಅಂತೆಯೇ, ಮಂಗಳವಾರ ಮತ್ತು ಶನಿವಾರ ಹನುಮಂತ ದೇವರ ಪೂಜೆಗೆ ಮೀಸಲು. ಈ ದಿನ ಆಂಜನೇಯಸ್ವಾಮಿಯನ್ನು ಏಕಚಿತ್ತದಿಂದ ಪೂಜಿಸಿದರೆ ಬಂದಂತಹ ಕಷ್ಟಗಳು ಮತ್ತು ಬರುವಂತಹ ಕಷ್ಟಗಳು ದೂರವಾಗುತ್ತವೆ, ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಯಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಆಂಜನೇಯ ಸ್ವಾಮಿಯ ಆಶೀರ್ವಾದವಿದ್ದರೆ ಯಾವ ಕಷ್ಟವೂ ಹತ್ತಿರಕ್ಕೆ ಸುಳಿಯಲು ಎಂಬ ನಂಬಿಕೆ ಕೂಡಾ ನಮ್ಮಲ್ಲಿದೆ.

ನಿಮ್ಮ ಜಾತಕದಲ್ಲಿ ಶನಿಯ ಅಶುಭ ದೃಷ್ಟಿ ಇದ್ದರೆ ಮಂಗಳವಾರ ಆಂಜನೇಯಸ್ವಾಮಿಯ ಪೂಜೆ ಮಾಡಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಇದಕ್ಕಾಗಿ 108 ತುಳಸಿ ಎಲೆಗಳ ಮೇಲೆ ಶ್ರೀಗಂಧದಿಂದ ಶ್ರೀರಾಮನ ಹೆಸರನ್ನು ಬರೆದು ಆಂಜನೇಯ ಸ್ವಾಮಿಗೆ ಅರ್ಪಿಸಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಅದೂ ಅಲ್ಲದೆ, ಹೀಗೆ ಮಾಡುವುದರಿಂದ ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆಯುವ ಜತೆಗೆ ಮಂಗಳ, ಶನಿ ಮತ್ತು ರಾಹುವಿಗೆ ಸಂಬಂಧಿಸಿದ ಎಲ್ಲಾ ದೋಷಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.

Related Post

Leave a Comment