ಇದೆ ಕಾರಣಕ್ಕೆ ಕೈ ಕಾಲುಗಳಲ್ಲಿ ಮರಗಟ್ಟುವ ಸಮಸ್ಸೆ ಕಂಡುಬರಬಹುದು!

Written by Anand raj

Updated on:

ಕೈಗಳು ಮತ್ತು ಕಾಲುಗಳ ಮರಗಟ್ಟುವಿಕೆ ದೈಹಿಕ ಸಮಸ್ಯೆಗಳು ನರಗಳ ಮೇಲಿನ ಒತ್ತಡದ ಪರಿಣಾಮದಿಂದಲೂ ಉಂಟಾಗಿರುವ ಸಾಧ್ಯತೆ ಹೆಚ್ಚು. ಇದು ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಉಂಟಾಗುವ ಸಾಧ್ಯತೆ ಇದೆ. ಇದು ರಕ್ತನಾಳಗಳಲ್ಲಿ ಸರಿಯಾಗಿ ಹರಿಯುವಿಕೆ ತಡೆಯುಂಟಾದಾಗ ಹೀಗೆ ಆಗುತ್ತದೆ.

ನಿದ್ದೆ ಮಾಡುವಾಗ ಕೈಗಳು ಮತ್ತು ಕಾಲುಗಳು ಹಾಗೂ ಬೆರಳು ತುದಿಗಳ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಸಾಮಾನ್ಯವಾಗಿ ನೋವು ರಹಿತವಾಗಿರುತ್ತವೆ. ಆದರೆ ಇದು ಸಂಭವಿಸಿದಾಗ, ಕೈ ಮತ್ತು ಕಾಲುಗಳಲ್ಲಿ ಅನೇಕ ಇರುವೆಗಳು ಹರಿದಾಡಿದಂತಾಗುತ್ತದೆ. ಯಾರೋ ಸೂಜಿ ಅಥವಾ ಪಿನ್ ಅನ್ನು ಚುಚ್ಚುತ್ತಿದ್ದಾರೆ ಎಂಬ ಫೀಲ್ ಉಂಟಾಗುತ್ತದೆ. ಬೆನ್ನುನೋವಿನ ಸಮಸ್ಯೆ ಅಥವಾ ಸುತ್ತಮುತ್ತಲಿನ ಅಂಗಾಂಶ ದಪ್ಪವಾಗುವುದು ಮುಂತಾದ ದೈಹಿಕ ಸಮಸ್ಯೆಗಳು ನರಗಳ ಮೇಲಿನ ಒತ್ತಡದ ಪರಿಣಾಮದಿಂದಲೂ ಉಂಟಾಗಿರುವ ಸಾಧ್ಯತೆ ಹೆಚ್ಚು. ಇದು ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಉಂಟಾಗುವ ಸಾಧ್ಯತೆ ಇರುತ್ತದೆ.

NIH ಪ್ರಕಾರ, ಈ ಪಿನ್ನುಗಳು ಮತ್ತು ಸೂಜಿಗಳ ಸಂವೇದನೆ ವೈದ್ಯಕೀಯವಾಗಿ ಪ್ಯಾರೆಸ್ಟೇಷಿಯಾ ಎಂದು ಕರೆಯಲ್ಪಡುತ್ತದೆ. ಹೆಚ್ಚಾಗಿ ಕಾರಣ ಸರಳವಾಗಿದೆ. ನೀವು ನಿಮ್ಮ ತೋಳಿನ ಮೇಲೆ ಮಲಗಿದರೆ ಅಥವಾ ಅದರ ಮೇಲೆ ಒತ್ತಡ ಹೆಚ್ಚು ಹಾಕಿದರೆ ಈ ರೀತಿಯ ಸಮಸ್ಯೆ ಸಂಭವಿಸುತ್ತದೆ.

ಇದು ರಕ್ತನಾಳಗಳಲ್ಲಿ ಸರಿಯಾಗಿ ಹರಿಯುವಿಕೆ ತಡೆಯುಂಟಾದಾಗ ಹೀಗೆ ಆಗುತ್ತದೆ. ಇದು ಇದರದ್ದೇ ಪರಿಣಾಮ ಆಗಿದೆ. ಕೈಗಳು ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಅಸಾಮಾನ್ಯ ಭಾವನೆ ಅಲ್ಲ. ಹೆಚ್ಚಿನ ಜನರು ಅದನ್ನು ಒಂದು ಹಂತದಲ್ಲಿ ಅನುಭವಿಸುತ್ತಾರೆ.

ಆದರೆ ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಸಂವೇದನೆಯು ಅನಿರೀಕ್ಷಿತ ಅವಧಿಯವರೆಗೆ ಉಳಿಯಬಹುದು. ಅಥವಾ ಇತರ ರೋಗ ಲಕ್ಷಣಗಳು ಇರುತ್ತದೆ. ಇದು ಸಂಭವಿಸಿದರೆ, ನೀವು ನಿಮ್ಮ ವೈದ್ಯರನ್ನು ಸಂಪರ್ಕ ಮಾಡಬಹುದು. ಈ ಸಂವೇದನೆಯು ದೇಹದಲ್ಲಿ ಆಂತರಿಕವಾಗಿ ಬೆಳೆಯುತ್ತಿರುವ ಕೆಲವು ಕಾಯಿಲೆಗಳ ಸಂಕೇತ ಆಗಿರಬಹುದು.

ವಿಟಮಿನ್ ಬಿ ಕೊರತೆಯಿಂದ ಕೈಗಳು ಮತ್ತು ಕಾಲು ಮರಗಟ್ಟುತ್ತದೆ

ಎನ್‌ಸಿಬಿಐನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿಟಮಿನ್ ಬಿ ಕೊರತೆ ದೇಹದಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆಗೆ ಕಾರಣ ಆಗುತ್ತದೆ. ಅನೇಕ ವಿಧದ B ಜೀವಸತ್ವಗಳಿವೆ. ಮತ್ತು ಇವೆಲ್ಲವೂ ಜೀವಕೋಶದ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ನಿಮ್ಮನ್ನು ಶಕ್ತಿಯುತ ಆಗಿರಿಸಲು ಸಹಾಯ ಮಾಡುತ್ತದೆ.

ಅನೇಕ ಜನರು ತಮ್ಮ ಆಹಾರದ ಮೂಲಕ ಸಾಕಷ್ಟು B ಜೀವಸತ್ವ ಪಡೆಯಬೇಕು. ಕೆಲವರು ಶಿಫಾರಸು ಮಾಡಿದ ದೈನಂದಿನ ಪ್ರಮಾಣ ಪೂರೈಸಲು ಪೂರಕಗಳ ಸೇವನೆ ಮಾಡಬಹುದು.

ದೇಹದಲ್ಲಿ ನೀರಿನ ಅಂಶ ಹೆಚ್ಚಿರಬೇಕು

ಅಧಿಕ ಉಪ್ಪು ಸೇವನೆ ಮತ್ತು ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಮಟ್ಟದಲ್ಲಿ ಏರುಪೇರಾಗುವುದು ಸೇರಿದಂತೆ ಹಲವು ಅಂಶಗಳು ದೇಹದಲ್ಲಿ ನೀರಿನ ಶೇಖರಣೆ ಉಂಟು ಮಾಡುತ್ತದೆ. ಇದು ದೇಹದ ಊತಕ್ಕೆ ಕಾರಣವಾಗುತ್ತದೆ.

ಅಥವಾ ದೇಹದ ಕೆಲವು ಭಾಗಗಳಲ್ಲಿ ಕೂಡ ಶೇಖರಣೆ ಆಗಬಹುದು. ಇದು ಕೆಲವೊಮ್ಮೆ ಊತವು ರಕ್ತ ಪರಿಚಲನೆಗೆ ಅಡ್ಡಿ ಉಂಟು ಮಾಡಬಹುದು. ಮತ್ತು ಪೀಡಿತ ಪ್ರದೇಶದಲ್ಲಿ ಜುಮ್ಮೆನಿಸುವಿಕೆ ಸಂವೇದನೆ ಉಂಟು ಮಾಡುತ್ತದೆ.

ಕಾರ್ಪಲ್ ಟನಲ್ ಸಿಂಡ್ರೋಮ್

ಕಾರ್ಪಲ್ ಟನಲ್ ಸಿಂಡ್ರೋಮ್ ಕೈಗಳು ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆಗೆ ಕಾರಣ ಆಗಬಹುದು. ಮಧ್ಯದ ನರವನ್ನು ಸಂಕುಚಿತಗೊಳಿಸಿದಾಗ ಅಥವಾ ಸೆಟೆದುದಾಗ ಇದು ಸಂಭವಿಸುತ್ತದೆ. ಕೀಬೋರ್ಡ್‌ನಲ್ಲಿ ಟೈಪ್ ಮಾಡುವುದು ಅಥವಾ ಯಂತ್ರೋಪಕರಣ ಜೊತೆ ಕೆಲಸ ಮಾಡುವ ಒಂದೇ ಚಲನೆ ಮತ್ತೆ ಮತ್ತೆ ನಿರ್ವಹಿಸುವುದು ಅದನ್ನು ಪ್ರಚೋದಿಸಬಹುದು.

ಬಾಹ್ಯ ನರ ರೋಗ ಸಮಸ್ಯೆ

ನೀವು ಮಧುಮೇಹ ಹೊಂದಿದ್ದರೆ ಮತ್ತು ನಿಯಮಿತವಾಗಿ ಪ್ಯಾರೆಸ್ಟೇಷಿಯಾ ಅನುಭವಿಸುತ್ತಿದ್ದರೆ, ಇದು ನರಗಳ ಹಾನಿಯ ಕಾರಣದಿಂದ ಆಗಿರಬಹುದು. ಈ ಹಾನಿಯನ್ನು ಬಾಹ್ಯ ನರ ರೋಗ ಎಂದು ಕರೆಯುತ್ತಾರೆ. ಮತ್ತು ನಿರಂತರವಾಗಿ ಅಧಿಕ ರಕ್ತದ ಸಕ್ಕರೆಯಿಂದ ಸಮಸ್ಯೆ ಉಂಟಾಗುತ್ತದೆ.

ನರಮಂಡಲದಲ್ಲಿ ಅಡಚಣೆಯ ಸಂಕೇತಗಳು

ಮಲ್ಟಿಪಲ್ ಸ್ಕ್ಲೆರೋಸಿಸ್ ಮತ್ತು ಸ್ಟ್ರೋಕ್‌ನಂತಹ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುವ ಪರಿಸ್ಥಿತಿಗಳು ಸಹ ಪ್ಯಾರೆಸ್ಟೇಷಿಯಾ ಉಂಟು ಮಾಡಬಹುದು. ಮೆದುಳು ಅಥವಾ ಬೆನ್ನುಮೂಳೆಯಲ್ಲಿರುವ ಗಡ್ಡೆಗಳು ಪ್ರಚೋದಿಸಬಹುದು.

Related Post

Leave a Comment