ಭಾನುವಾರ ಹುಟ್ಟಿದವರ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲದ ಹಲವು ಅದ್ಭುತ ರಹಸ್ಯಗಳು.

ಭಾನುವಾರದಂದು ಹುಟ್ಟಿದವರು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ವಹಿಸುತ್ತಾರೆ.ಇವರಿಗೆ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಕೆಲಸವನ್ನು ಮಾಡಬೇಕಾದರೆ ಆತ್ಮ ಧೈರ್ಯದಿಂದ ಮಾಡುತ್ತಾರೆ ಮತ್ತು ಜಯವನ್ನು ಗಳಿಸುತ್ತಾರೆ.ಇವರು ಎಲ್ಲರಜೊತೆ ಪ್ರೀತಿ ಸ್ನೇಹದಿಂದ ಇರುತ್ತಾರೆ.ಇವರ ಕೈಯಲ್ಲಿ ಆದಷ್ಟು ಸಹಾಯವನ್ನು ಎಲ್ಲರಿಗೂ ಮಾಡುತ್ತಾರೆ.ಇವರು ಸುಳ್ಳನ್ನು ಹೇಳಲು ಇಷ್ಟಪಡುವುದಿಲ್ಲ.ಇವರಿಗೆ ಶತ್ರುಗಳು ತುಂಬಾ ಹೆಚ್ಚಾಗುತ್ತಾ ಇರುತ್ತಾರೆ. ಇವರಿಗೆ ಲೋಕಜ್ಞಾನ ಹೆಚ್ಚಾಗಿರುತ್ತದೆ.ಈ ದಿನದಂದು ಹುಟ್ಟಿದವರು ಸ್ವಯಂ ಕೃಷಿಯಿಂದ ಎತ್ತರದ ಸ್ಥಾನಕ್ಕೆ ತಲುಪುತ್ತಾರೆ.ಇವರು ಜೀವನದಿಂದ ಹಿಂದೆ ಸರಿಯಲು ಯಾವತ್ತೂ ಯೋಚನೆ ಮಾಡುವುದಿಲ್ಲ ಧೈರ್ಯವಾಗಿ ಇರುತ್ತಾರೆ. ಇವರು ಗೆಲುವು ಮತ್ತು ಸೋಲನ್ನು ಸಮವಾಗಿ ನೋಡುತ್ತಾರೆ.

ಇವರು ಯಾವುದೇ ಕೆಲಸವನ್ನು ಶುರು ಮಾಡಿದ ನಂತರ ಮುಗಿಯುವವರೆಗೂ ಬೇರೆಯವರಿಗೆ ಹೇಳುವುದಿಲ್ಲ.ಇವರು ತಂದೆತಾಯಿಗೆ ಹೆಚ್ಚಾಗಿ ಗೌರವಿಸುತ್ತಾರೆ. ವಯಸ್ಸು ಹೆಚ್ಚಾದಂತೆ ಜೀವನದಲ್ಲಿ ಉತ್ತಮ ಸ್ಥಾನವನ್ನು ತಲುಪುತ್ತಾರೆ.ಇವರಿಗೆ ಪ್ರಾಣ ಕೊಡುವಂತ ಸ್ನೇಹಿತರು ಹೆಚ್ಚಾಗಿ ಇರುತ್ತಾರೆ.ಇವರಿಗೆ ವ್ಯವಸಾಯ ಮತ್ತು ರಾಜಕೀಯ ಕ್ಷೇತ್ರ ತುಂಬಾನೆ ಕೂಡಿಬರುತ್ತದೆ.ಇವರಿಗೆ ಕಬ್ಬಿಣದ ವ್ಯಾಪಾರ ಹೆಚ್ಚಾಗಿ ಕೂಡಿಬರುತ್ತದೆ.ಭಾನುವಾರ ಹುಟ್ಟಿದವರಿಗೆ ಅಧಿಪತಿ ಸೂರ್ಯದೇವ ಆಗಿರುವುದರಿಂದ ನೀವು ಹೆಚ್ಚಾಗಿ ಸೂರ್ಯನನ್ನ ಪೂಜಿಸಿ…

ಶಿರಸಿ ಮಾರಿಕಾಂಬಾ ದೇವಾಲಯ-ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಸೀಮೆಯ ತಾಲೂಕು ಕೇಂದ್ರ ಶಿರಸಿ.ಪ್ರಶಾಂತ ಪರಿಸರ ಹಚ್ಚ ಹಸಿರಿನ ಬನಸಿರಿಗೇ ಹೆಸರಾದ ಈ ಊರು ಜಗದ್ವಿಖ್ಯಾತವಾದ ಮಾರಿಕಾಂಬೆ ನೆಲೆಸಿರುವ ಊರು ಹೌದು.ಶಿರಸಿ ಮಾರಿಕಾಂಬಾ ಜಾತ್ರೆ ಬಹುಶಹ ಕರ್ನಾಟಕದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ವಾಗಿದೆ.ಮಹಾಭಾರತ ಕಾಲದಲ್ಲಿ ವಿರಾಟ ನಗರವಾಗಿದ್ದ ಹಾನಗಲ್ಲಿನಲ್ಲಿ ಧರ್ಮರಾಯ ನಿಂದ ಪೂಜೆ ಗೊಂಡಿದ್ದ ದೇವಿ ಇದೆ ಮಾರಿಕಾಂಬ ದೇವಿ ಎನ್ನುವುದು ಐತಿಹ್ಯ.ಕಳ್ಳರು ಅಪಹರಿಸಿದ ಪೆಟ್ಟಿಗೆಯಲ್ಲಿದ್ದ ದೇವಿ ವಿಗ್ರಹವು ಇಲ್ಲಿನ ಕೆರೆಯನ್ನು ಸೇರಿತ್ತು.ಬಸವ ಎನ್ನುವ ಭಕ್ತನೊಬ್ಬನ ಬಯಕೆ ಎನ್ನುವಂತೆ ಇಲ್ಲಿ ನೆಲೆ ನಿಂತಳು ಎನ್ನಲಾಗಿದೆ.ಕ್ರಿಸ್ತಶಕ 1689ರಲ್ಲಿ ಅಂದಿನ ಸಂಸ್ಥಾನದ ಅರಸರ ಸಮ್ಮತಿಯೊಂದಿಗೆ ಶ್ರೀ ನಂದಿಕೇಶ್ವರ ಸ್ವಾಮಿಗಳು ಇಲ್ಲಿ ಶ್ರೀ ಮಾರಿಕಾಂಬೆ ಯನ್ನು ಪ್ರತಿಷ್ಠಾಪನೆ ಮಾಡಿದರು

8 ಅಡಿ ಎತ್ತರದ ಅಷ್ಟ ಭುಜಗಳುಳ್ಳ ಕೆಂಪು ಬಣ್ಣ ಹೊಂದಿದ ವಿಗ್ರಹವು ನಿಜಕ್ಕೂ ಕಲಾಪೂರ್ಣವಾಗಿದೆ.ಇನ್ನೂ ದೇವಾಲಯ ಗೋಡೆಗಳ ಮೇಲೆ ಕಾವ್ಯ ಸುಂದರ ಚಿತ್ರಗಳನ್ನು ನಾವು ಕಾಣಬಹುದಾಗಿದೆ.ಸಮುದ್ರಮಟ್ಟದಿಂದ 2500 ಅಡಿಗಳಷ್ಟು ಎತ್ತರದಲ್ಲಿರುವ ಈ ದೇವಾಲಯ,ಬೆಂಗಳೂರಿನಿಂದ 405 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆಯಿಂದ ಉತ್ತಮ ರಸ್ತೆ ಸಂಪರ್ಕವಿದೆ. ಪ್ರವಾಸಿಗರು ತಂಗಲು ಉತ್ತಮ ವಸತಿ ವ್ಯವಸ್ಥೆ, ಹೋಟೆಲ್ ಸೌಲಭ್ಯ ಲಭ್ಯವಿದೆ.

Leave A Reply

Your email address will not be published.