ಶಿವನ ಜನ್ಮ ರಹಸ್ಯ! ಶಿವನಿಗೂ ಆದಿ ಪರಶಕ್ತಿಗೂ ಏನು ಸಂಬಂಧ!

Written by Anand raj

Published on:

ಶಿವ,ಈಶ,ಈಶ್ವರ,ಮಹೇಶ್ವರ, ಮಹಾದೇವ ಶ್ರೀಕಂಠ ಹೀಗೆ ವೈವಿದ್ಯಾಮಾಯ ಹೆಸರುಗಳಿಂದ ಕರೆಸಿಕೊಳ್ಳುವ ಶಿವನ ಜನ್ಮ ರಹಸ್ಯ ಬಗ್ಗೆ ನಮ್ಮ ಹಿಂದೂ ಪುರಾಣದಲ್ಲಿ ವಿವಿಧ ರೀತಿಯಲ್ಲಿ ಹೇಳಲಾಗಿದೆ.ಸೃಷ್ಟಿಗೆ ಆದಿಯು ಆತನೇ ಮತ್ತು ಅಂತ್ಯ ಕೂಡ ಆತನೇ. ಶಿವ ಪಾರಾತ್ಮನ ಆಜ್ಞೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಆಲುಗಾಡುವುದಿಲ್ಲ. ಪರಮಾತ್ಮನಲ್ಲಿ ಐಕ್ಯ ಆಗಲು ಸಾಕಷ್ಟು ಋಷಿ ಮುನಿಗಳು, ಅಘೋರಿಗಳು ರಾತ್ರಿ ಹಗಲು ತಪಾಸ್ಸನ್ನು ಮಾಡುತ್ತಾರೆ. ಶಿವನ ಕೃಪೆಗೆ ಪಾತ್ರರಾಗಲು ನಮ್ಮ ಹಿಂದೂಗಳು ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೆ. ಆದರೂ ಶಿವನ ಜನ್ಮ ರಹಸ್ಯ ಕೂಡ ಯಾರಿಗೂ ಸಹ ಗೊತ್ತಾಗಿಲ್ಲ.

ಕೆಲವರ ಅನಿಸಿಕೆ ಪ್ರಕಾರ ಪರಮೇಶ್ವರನು ಹುಟ್ಟು ಸಾವು ಇಲ್ಲದವನ್ನು. ಮೃತ್ಯುವನ್ನು ನೋಡದ ಮೃತ್ಯುಂಜಯ, ಹಾದಿನು ಅವನೇ ಅಂತ್ಯನು ಕೂಡ ಅವನೇ. ಹೀಗಾಗಿ ಆತನನ್ನು ಸದಾಶಿವ ಎಂದು ಕರೆಯುವುದುಂಟು. ಪುರಾಣದ ಪ್ರಕಾರ ಬ್ರಹ್ಮ ವಿಷ್ಣು ಮಹೇಶ್ವರ ಈ ತ್ರಿಮೂರ್ತಿಗಳ ಪರಶಕ್ತಿ ಆ ಮಾತೇ ತನ್ನ ಮಂತ್ರ ಶಕ್ತಿ ಬಲಗಳಿಂದ ಹುಟ್ಟಿಸಿದಳು ಎಂದು ಹೇಳಲಾಗುತ್ತದೆ. ತ್ರಿಮೂರ್ತಿಗಳು ಮೂವರು ಹುಟ್ಟಿದ ನಂತರ ಮೂವರಲ್ಲಿ ಒಬ್ಬರು ತನ್ನನ್ನು ಮದುವೆ ಆಗುವಂತೆ ಆದಿಪರಶಕ್ತಿ ಕೇಳಿಕೊಂಡಳಂತೆ.

ಇದಕ್ಕೆ ತ್ರಿಮೂರ್ತಿಗಳು ಮೂರು ಜನರು ಸಹ ವ್ಯಕ್ತಿಕ್ತಾವನ್ನು ವ್ಯಕ್ತಪಡಿಸಿದರಂತೆ. ಇದರಿಂದ ಕೋಪಗೊಂಡ ಆದಿಪರಶಕ್ತಿ ತ್ರಿಮೂರ್ತಿಗಳನ್ನು ಸುಟ್ಟು ಭಸ್ಮ ಮಾಡಲು ಮುಂದಾದಳು. ಆಗ ಪರಮೇಶ್ವರನು ಜಾಣ್ಮೆಯಿಂದ ನಿನ್ನ ಮೂರನೇ ಕಣ್ಣನ್ನು ನನಗೆ ನೀಡಿದರೆ ನಾನು ನಿನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿದನಂತೆ. ಆ ಪ್ರಸ್ತಾಪಕ್ಕೆ ಆದಿ ಪರಶಕ್ತಿ ಒಪ್ಪಿಗೆ ನೀಡಿ ತನ್ನ ಮೂರನೇ ಕಣ್ಣನ್ನು ಶಿವನಿಗೆ ಕೊಡುತ್ತಾರೆ. ಮೂರನೇ ಕಣ್ಣು ಪಡೆದ ಶಿವ ಅದೇ ಕಣ್ಣಿನಿಂದ ಆಕೆಯನ್ನು ಭಸ್ಮ ಮಾಡಿದನಂತೆ.

ಅವಳನ್ನು ಭಸ್ಮ ಮಾಡಿದ ನಂತರ ಬಂದ ಭಸ್ಮವನ್ನು ಮೂರು ಭಾಗ ಮಾಡಿ. ಒಂದು ಭಾಗವಾಗಿ ಪಾರ್ವತಿ ದೇವಿಯನ್ನು ಇನ್ನೊಂದು ಭಾಗ ಸರಸ್ವತಿ ದೇವಿಯನ್ನು ಹಾಗು ಮೂರನೇ ಭಾಗವನ್ನು ಲಕ್ಷ್ಮಿ ಹಾಗೆ ಜನಿಸುವಂತೆ ಆದೇಶ ಮಾಡಿದನಂತೆ. ಹೀಗೆ ಶಿವನ ಜಾಣ್ಮೆಯಿಂದ ತ್ರಿಮೂರ್ತಿ ಪತ್ನಿಯರನ್ನಾಗಿ ಮಾಡಿದನಂತೆ. ಪುರಾಣದ ಪ್ರಕಾರ ಶಿವ ಪ್ರಕೃತಿ ಪ್ರಿಯ. ಸ್ವತಃ ಪರಮೇಶ್ವರನೆ ಸೃಷ್ಟಿಸಿರುವನು ಎಂದು ಆತನ ಅಲಂಕಾರವೆ ಸಾಕ್ಷಿಯಾಗಿದೆ.

Related Post

Leave a Comment