ದೀಪವಾಳಿ ಇನ್ನೇನು ಹತ್ತಿರದಲ್ಲಿ ಇದೆ. ಇನ್ನು ದೀಪ ಹಚ್ಚಿದ ಮೇಲೆ ಅದನ್ನು ತೊಳೆಯುವುದಕ್ಕೆ ತುಂಬಾನೇ ಕಷ್ಟ ಪಡುತ್ತೀವಿ.ಹಣತೆಯಲ್ಲಿ ಎಣ್ಣೆ ಹಾಗೆ ಇರುತ್ತದೆ. ಸಾಮಾನ್ಯವಾಗಿ ಸೋಪ್ ಹಾಕಿ ತೊಳೆದರೂ ಸಹ ಎಣ್ಣೆ ಜಿಡ್ಡು ಹೋಗುವುದಿಲ್ಲ. ಎಣ್ಣೆ ಜಿಡ್ಡು ಆಗಿರುವ ದೀಪಗಳನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಹಾಕಿ ನೀರು ಹಾಕಬೇಕು. ಇದನ್ನು ಗ್ಯಾಸ್ ಮೇಲೆ ಇಟ್ಟು ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ನೀರು ಚೆಲ್ಲಬೇಕು. ನಂತರ ಪಾತ್ರೆಯಲ್ಲಿ ಮತ್ತೊಮ್ಮೆ ನೀರು ಹಾಕಬೇಕು. ಇದಕ್ಕೆ ಸೋಪ್ ಪೌಡರ್ ಹಾಗು ಅಡುಗೆ ಸೋಡಾವನ್ನು ಹಾಕಿಕೊಳ್ಳಬೇಕು.
ಇದನ್ನು ಗ್ಯಾಸ್ ಮೇಲೆ ಇಟ್ಟು ಮತ್ತೊಮ್ಮೆ ಕುದಿಸಬೇಕು. ಸೋಪ್ ಪೌಡರ್ ಹಾಕಿರುವುದರಿಂದ ಎಣ್ಣೆ ಜಿಡ್ಡು ಪೂರ್ತಿಯಾಗಿ ಹೋಗುತ್ತದೆ. ನಂತರ ನೀರಿನಿಂದ ದೀಪವನ್ನು ತೆಗೆದು ನೋಡಿ ನಿಮಗೆ ತಿಳಿಯುತ್ತದೆ ದೀಪ ಎಷ್ಟು ಕ್ಲೀನ್ ಆಗಿದೆ ಅಂತಾ..