ಮಾರ್ಚ್ 8 ನೇ ತಾರೀಕು ಮಹಾ ಶಿವರಾತ್ರಿ ಬರುತ್ತಿದೇ.ಶಿವರಾತ್ರಿ ದಿನ ಬೆಳಗ್ಗೆ ಸ್ನಾನವನ್ನು ಮಾಡಿಕೊಂಡು ದೇವರ ಪೂಜೆಯನ್ನು ಮಾಡಬೇಕು. ದೇವಸ್ಥಾನಕ್ಕೆ ಹೋಗಿ ಅಭಿಷೇಕಗಳನ್ನು ಮಾಡಿಸಬಹುದು.1111 ಬಾರಿ ಓಂ ನಮಃ ಶಿವಾಯ ಎಂದು ಜಪ ಮಾಡಬೇಕಾಗುತ್ತದೆ.ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ವಿಚಾರದಲ್ಲಿ ಸಮಸ್ಸೆ ಇದ್ದರು ಸಹ ಕಡಿಮೆ ಆಗುತ್ತದೆ.
ಇನ್ನು ಮಹಾ ಶಿವರಾತ್ರಿ ದಿನ ಈ ಒಂದು ತಪ್ಪುಗಳನ್ನು ಮಾಡಬಾರದು.
1, ಯಾವುದೇ ಕಾರಣಕ್ಕೂ ಮಾಂಸ ಆಹಾರವನ್ನು ಮತ್ತು ಮಧ್ಯಾಪನ ಸೇವನೆ ಮಾಡಬಾರದು.
2, ಉಪಾವಾಸ ಇರುವುದಾದರೆ ಬೆಳೆ ಅಥವಾ ಅಕ್ಕಿಯ ಪದಾರ್ಥವನ್ನು ಸೇವನೆ ಮಾಡಬೇಡಿ.ಆದಷ್ಟು ಹಣ್ಣು ಸೇವನೆ ಮಾಡುವುದು ತುಂಬಾ ಒಳ್ಳೆಯದು.ವ್ರತ ಮಾಡುವುದಾದರೆ ಹಾಲನ್ನು ಸಹ ಕುಡಿಯಬಾರದು ಹಣ್ಣು ಮಾತ್ರ ಸೇವನೆ ಮಾಡಬೇಕು.
3, ಶಿವರಾತ್ರಿ ದಿನದಂದು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬಾರದು. ಶಿವರಾತ್ರಿ ದಿನದಂದು ಕೆಂಪು ಬಣ್ಣ ಅಥವಾ ಅರೆಂಜ್ ಬಣ್ಣದ ಬಟ್ಟೆಯನ್ನು ಧರಿಸಿದರೆ ಒಳ್ಳೆಯದು.
4, ಈ ದಿನ ವಿಶೇಷವಾಗಿ ಗಂಡ ಹೆಂಡತಿಯರು ಶರೀರಿಕ ಸಂಬಂಧವನ್ನು ಇಟ್ಟುಕೊಳ್ಳಬಾರದು ಎಂದು ಹೇಳಲಾಗುತ್ತದೆ.ಈ ದಿನ ಶಿವನ ಆರಾಧನೆ ಮಾಡುವ ದಿನ ಆಗಿದೆ. ನಿಮಗೆ ಕೈಲಾದಷ್ಟು ಧಾನವನ್ನು ಮಾಡಿದರೆ ಸಾಕಷ್ಟು ಒಳ್ಳೆಯದಾಗುತ್ತದೆ.
5, ಶಿವರಾತ್ರಿ ದಿನ ತುಳಸಿ ಎಲೆಯನ್ನು ಶಿವನಿಗೆ ಅರ್ಪಿಸಬಾರದು.
6, ಶಿವನಿಗೆ ಅಭಿಷೇಕ ಮಾಡುವಾಗ ಕುಂಕುಮವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಹಾಕಬಾರದು.
7,ಇನ್ನು ತೆಂಗಿನಕಾಯಿ ನೀರನ್ನು ಶಿವನ ಅಭಿಷೇಕ ಸಮಯದಲ್ಲಿ ಹಾಕಬಾರದು.
8, ಅಭಿಷೇಕ ಸಮಯದಲ್ಲಿ ಯಾವುದೇ ಕಾರಣಕ್ಕೂ ಶಂಖದಿಂದ ನೀರನ್ನು ಹಾಕಬಾರದು.ಇದು ಕೂಡ ಸಾಕಷ್ಟು ಅಶುಭ ಎಂದು ಹೇಳಲಾಗುತ್ತದೆ.
9, ದೇವರಿಗೆ ನುಚ್ಚು ಅಕ್ಕಿಯನ್ನು ಕೂಡ ಬಳಸಬಾರದು. ಇದು ಕೂಡ ದೊಡ್ಡ ಪಾಪ ಆಗಿದೆ.ಆದಷ್ಟು ಒಳ್ಳೆಯ ಅಕ್ಕಿಯನ್ನು ಬಳಸುವುದು ಒಳ್ಳೆಯದು.
ಇನ್ನು ಈ ವಸ್ತುಗಳನ್ನು ಶಿವನಿಗೆ ಅರ್ಪಿಸಿದರೆ ನಿಮಗೆ ಒಳ್ಳೆಯದಾಗುತ್ತದೆ.
1,ಅಭಿಷೇಕ ಮಾಡುವಾಗ ಗಂಗಜಲವನ್ನು ಶಿವನಿಗೆ ಅರ್ಪಿಸಿದರೆ ನಿಮಗೆ ಬಹಳ ಒಳ್ಳೆಯದು ಆಗುತ್ತದೆ.
2, ಅಭಿಷೇಕ ಮಾಡುವಾಗ ಕಬ್ಬಿನ ಹಾಲು ಕೂಡ ತುಂಬಾ ಶ್ರೇಯಸ್ ಎಂದು ಹೇಳಬಹುದು.ಇದು ಶಿವನಿಗೆ ಬಹಳ ಇಷ್ಟ.
3, ಇನ್ನು 3 ಎಲೆ ಇರುವ ಬಿಲ್ವ ಪತ್ರೆ ಎಲೆಯನ್ನು ತೆಗೆದುಕೊಂಡು ಶಿವ ಲಿಂಗಕ್ಕೆ ಅಭಿಷೇಕ ಮಾಡಿದರೆ ಸಾಕಷ್ಟು ಒಳ್ಳೆಯದಾಗುತ್ತದೆ.ಈ ರೀತಿ ಮಾಡಿದರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ.
4, ಶಿವರಾತ್ರಿ ದಿನ 1 ರೂಪಾಯಿ ನಾಣ್ಯ ತೆಗೆದುಕೊಂಡು ಗಂಧದಿಂದ ಓಂ ಎಂದು ಬರೆದುಕೊಳ್ಳಬೇಕಾಗುತ್ತದೆ.ಇದನ್ನು ಪೂಜೆ ಮಾಡುವ ಸ್ಥಳದಲ್ಲಿ ಇಡಬೇಕು.ಇನ್ನು 1111 ಶಿವನ ಜಪ ಮಾಡಿ ಈ ಕಾಯಿನ್ ಅನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.