ನಿಮ್ಮ ಕೈ ಬೆರಳುಗಳಿಂದ ನಿಮ್ಮ ಜಾತಕ ತಿಳಿಯುವುದು!

Written by Anand raj

Published on:

ಅಂಗೈ ಹಾಗೂ ಕೈ ಬೆರಳುಗಳು ಮನುಷ್ಯನ ಅಗತ್ಯ ಕೆಲಸಗಳಿಗೆ ಸಹಾಯ ಮಾಡುವ ಅಂಗ. ಕೈಬೆರಳುಗಳು ಸರಿಯಾಗಿ ಇಲ್ಲದೆ ಹೋದರೆ ನಿತ್ಯದ ಕೆಲಸಗಳನ್ನು ಮಾಡಲು ಸಾಕಷ್ಟು ಕಷ್ಟಪಡಬೇಕಾಗುವುದು. ಕೈಬೆರಳುಗಳು ಹಾಗೂ ಅಂಗೈ ಎನ್ನುವುದು ಮನುಷ್ಯನಿಗೆ ಅತ್ಯಗತ್ಯವಾದ ಅಂಗ. ಇದು ವ್ಯಕ್ತಿಯ ಅಗತ್ಯತೆಯ ಜೊತೆಗೆ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಬ್ಬರ ಕೈ ಬೆರಳು ವಿಭಿನ್ನ ಬಗೆಯಲ್ಲಿ ಇರುತ್ತವೆ. ಕೈಬೆರಳಿನ ಉದ್ದ, ಅಗಲ ಹಾಗೂ ಕೈಬೆರಳ ಕೆಳಭಾಗದಲ್ಲಿ ಇರುವ ಪರ್ವಗಳು ವಿವಿಧ ಬಗೆಯ ಭವಿಷ್ಯವನ್ನು ಸೂಚಿಸುತ್ತವೆ ಎಂದು ಹಸ್ತಮುದ್ರಿಕೆಯ ಜ್ಯೋತಿಷ್ಯ ತಿಳಿಸುವುದು. ವ್ಯಕ್ತಿಯ ಕೈಬೆರಳನ್ನು ನೋಡುವುದರ ಮೂಲಕ ಅವರ ವ್ಯಕ್ತಿತ್ವ ಹಾಗೂ ಸ್ವಭಾವವನ್ನು ಸುಲಭವಾಗಿ ತಿಳಿಯಬಹುದು.

ಚಿಕ್ಕ ಬೆರಳು

ಕೈಬೆರಳುಗಳು ಉದ್ದದಲ್ಲಿ ಚಿಕ್ಕದಾಗಿದ್ದರೆ ಅಂತಹವರು ತಾಳ್ಮೆ, ಪ್ರಚೋದನೆ ಹಾಗೂ ಕ್ರಿಯಾತ್ಮಕ ಆಸಕ್ತಿ ಹೊಂದಿದವರಾಗಿರುತ್ತಾರೆ. ಇವರು ಯಾವುದೇ ವಿಷಯದ ಬಗ್ಗೆ ಹೆಚ್ಚು ಕಾಯಲು ಇಷ್ಟಪಡುವುದಿಲ್ಲ. ಎಲ್ಲವೂ ಶೀಘ್ರದಲ್ಲಿಯೇ ನಡೆಯಬೇಕು ಎಂದು ಬಯಸುವರು. ಯಾವುದೇ ವಿವರಣೆಯನ್ನು ಪಡೆಯುವುದರಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ. ಇವರು ದೊಡ್ಡ ಚಿಂತಕರಾಗಿರುತ್ತಾರೆ. ಯಾವುದೇ ವಿಷಯದಲ್ಲಿ ಸಿಲುಕಿಕೊಳ್ಳಲು ಬಯಸದ ವ್ಯಕ್ತಿಗಳಾಗಿರುತ್ತಾರೆ.

​ಮಧ್ಯಮ ಉದ್ದದ ಬೆರಳು

ಕೆಲವರು ಅತೀ ಚಿಕ್ಕ ಬೆರಳನ್ನು ಅಥವಾ ಅತೀ ಉದ್ದದ ಬೆರಳನ್ನೂ ಸಹ ಹೊಂದಿರುವುದಿಲ್ಲ. ಮಧ್ಯಮ ಉದ್ದದ ಬೆರಳನ್ನು ಹೊಂದಿರುತ್ತಾರೆ. ಇದು ನೋಡಲು ಸುಂದರವಾಗಿ ಕಾಣುವುದು. ಈ ರೀತಿಯ ಬೆರಳನ್ನು ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಬುದ್ಧಿವಂತರಾಗಿರುತ್ತಾರೆ. ಪರಿಸ್ಥಿತಿಗಳಿಗೆ ಸೂಕ್ತವಾದ ರೀತಿಯಲ್ಲಿಯೇ ವರ್ತನೆ ಹಾಗೂ ಪ್ರತಿಕ್ರಿಯೆಯನ್ನು ತೋರುವರು. ಕೆಲಸದ ಬಗ್ಗೆ ಗಮನವನ್ನು ಹೆಚ್ಚು ಕೇಂದ್ರೀಕರಿಸುವ ಹಾಗೂ ಆನಂದಿಸುವ ಸ್ವಭಾವವನ್ನು ಹೊಂದಿರುತ್ತಾರೆ.
​ಉದ್ದನೆಯ ಬೆರಳುಗಳು

ವ್ಯಕ್ತಿಯ ಕೈ ಬೆರಳುಗಳು ಉದ್ದವಾಗಿದ್ದರೆ ಅವರು ದೀರ್ಘಕಾಲದ ಆಟ ಹಾಗೂ ಯೋಜನೆಯನ್ನು ಹೊಂದಲು ಹೆಚ್ಚು ಆನಂದವನ್ನು ವ್ಯಕ್ತಪಡಿಸುವರು. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆಯನ್ನು ತೋರುವರು. ಇವರು ಕೈಗೊಳ್ಳುವ ಕೆಲಸದ ಬಗ್ಗೆ ಇತರರು ಪ್ರಶ್ನೆ ಮಾಡುವುದನ್ನು ಇಷ್ಟ ಪಡುವುದಿಲ್ಲ. ಆತ್ಮ ಶಕ್ತಿಯನ್ನು ಹೊಂದಿರುವ ಇವರು ಹೊಸ ಹೊಸ ಆವಿಷ್ಕಾರ ಮತ್ತು ಉತ್ತರವನ್ನು ಹುಡುಕಲು ಇಷ್ಟಪಡುವರು. ಇವರು ತೆಗೆದುಕೊಂಡ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವರು.

​ಹಸ್ತ ಮುದ್ರಿಕೆಯಲ್ಲಿ ಗ್ರಹಗಳು ಮತ್ತು ಬೆರಳುಗಳು

ಹಸ್ತ ಮುದ್ರಿಕೆಯ ಪ್ರಕಾರ ಅಂಗೈ ಹಾಗೂ ಬೆರಳುಗಳ ಬುಡದಲ್ಲಿ ಗ್ರಹಗಳು ಇರುತ್ತವೆ. ಈ ಗ್ರಹಗಳ ಸ್ಥಳವನ್ನು ಗ್ರಹಗಳ ಪರ್ವ ಎಂದು ಸಹ ಕರೆಯಲಾಗುವುದು. ಗ್ರಹಗಳ ಪರ್ವ ಯಾವ ರೀತಿಯಲ್ಲಿ ಇರುತ್ತವೆ ಎನ್ನುವುದರ ಆಧಾರದ ಮೇಲೂ ಸಹ ವ್ಯಕ್ತಿಯ ಭವಿಷ್ಯ ಹಾಗೂ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎಂದು ಹೇಳಲಾಗುವುದು. ಅಂತೆಯೇ ನಮ್ಮ ಬೆರಳುಗಳನ್ನು ಸಹ ಕೆಲವು ಗ್ರಹಗಳನ್ನು ಸೂಚಿಸುವ ಬೆರಳುಗಳು ಎಂದು ಪರಿಗಣಿಸಲಾಗಿವೆ.

​ಗುರು ಬೆರಳು

ತೋರು ಬೆರಳನ್ನು ಗುರು ಬೆರಳು ಎಂದು ಕರೆಯಲಾಗುವುದು. ಈ ಬೆರಳು ನಮ್ಮ ನಾಯಕತ್ವದ ಸ್ವಭಾವ, ಅಹಂ ಮತ್ತು ನಮ್ಮ ಸ್ವಭಾವವನ್ನು ಪ್ರತಿನಿಧಿಸುತ್ತವೆ. ಮಧ್ಯ ಬೆರಳಿಗಿಂತ ಸ್ವಲ್ಪ ಚಿಕ್ಕದಾಗಿದ್ದು, ಮಧ್ಯಮ ಉದ್ದವನ್ನು ಹೊಂದಿರುವ ತೋರುಬೆರಳನ್ನು ಹೊಂದಿದ್ದರೆ ಅಂತಹವರು ಇತರರ ಮೇಲೆ ಪ್ರಾಬಲ್ಯವನ್ನು ಪ್ರತಿಪಾದಿಸುವರು. ಇವರು ಸಾಮಾನ್ಯವಾಗಿ ಸ್ವಯಂ ಪ್ರಜ್ಞೆ ಹಾಗೂ ನಾಚಿಕೆ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ಎಂತಹ ವಿಷಯದಲ್ಲಾದರೂ ನಾಯಕತ್ವದ ಪಾತ್ರ ಸ್ವೀಕರಿಸಲು ಬಯಸುವುದಿಲ್ಲ.

​ಶನಿ ಬೆರಳು

ಮಧ್ಯಮ ಬೆರಳನ್ನು ಶನಿ ಬೆರಳು ಎಂದು ಕರೆಯಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ನಮ್ಮ ಜವಾಬ್ದಾರಿ, ಕರ್ಮ ಹಾಗೂ ಶಿಸ್ತನ್ನು ನೆನಪಿಸುವ ಗ್ರಹ. ಹಾಗಾಗಿ ಮಧ್ಯದ ಬೆರಳು ನಮ್ಮ ವಿಶ್ವಾಸಾರ್ಹತೆ, ಭಾವನೆ ಮತ್ತು ಜವಾಬ್ದಾರಿಯ ಬಗ್ಗೆ ತಿಳಿಸುತ್ತದೆ. ಯಾರಿಗೆ ಮಧ್ಯದ ಬೆರಳು ಉದ್ದದಲ್ಲಿ ಚಿಕ್ಕದಾಗಿರುತ್ತದೆ. ಅಂತಹವರು ಸ್ವಯಂ ಪ್ರೇರಿತರಾಗಿರುತ್ತಾರೆ. ಆದರೆ ಯಾವುದೇ ಹೊಣೆಗಾರಿಕೆಯನ್ನು ಕೈಗೊಳ್ಳಲು ಬಯಸುವುದಿಲ್ಲ. ಸಾಮಾನ್ಯಕ್ಕಿಂತ ಉದ್ದವಾದ ಮಧ್ಯ ಬೆರಳು ವ್ಯಕ್ತಿ ಹೆಚ್ಚು ಬಲವನ್ನು ಹೊಂದಿರುವುದು ಸೂಚಿಸುವುದು. ಸಾಮಾನ್ಯ ಅಥವಾ ಅದಕ್ಕೂ ಚಿಕ್ಕದಾದ ಮಧ್ಯದ ಬೆರಳು ಹೊಂದಿದವರು ಜೀವನವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವರು. ಅತ್ಯಂತ ಉದ್ದವಾದ ಬೆರಳನ್ನು ಹೊಂದಿದವರು ಪ್ರತ್ಯೇಕತೆ ಮತ್ತು ಏಕಾಂಗಿಯಾಗಿ ಇರಲು ಬಯಸುವರು ಎನ್ನುವುದನ್ನು ಸೂಚಿಸುತ್ತದೆ.

​ಅಪೊಲೊ /ಉಂಗುರ ಬೆರಳು

ಉಂಗುರ ಬೆರಳು ವ್ಯಕ್ತಿಯ ಸೃಜನಶೀಲತೆ, ಕಲಾತ್ಮಕ ಪ್ರತಿಭೆ ಮತ್ತು ಜೀವನದಲ್ಲಿ ತಮ್ಮನ್ನು ತಾವು ಹೆಸರಿಸಿಕೊಳ್ಳುವುದರ ಬಗ್ಗೆ ಸೂಚಿಸುವುದು. ಉಂಗುರ ಬೆರಳು ತೋರು ಬೆರಳಿಗಿಂದ ಉದ್ದವಾಗಿದ್ದರೆ, ಅಂತಹವರು ಸೃಜನಶೀಲ ಸ್ವಭಾವ ಮತ್ತು ಜೀವನದಲ್ಲಿ ಅಪಾಯವನ್ನು ಎದುರಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಚಿಕ್ಕದಾದ ಉಂಗುರ ಬೆರಳನ್ನು ಹೊಂದಿದವರು ಸೃಜನ ಶೀಲತೆ, ಆಸಕ್ತಿ ಹಾಗೂ ಶಕ್ತಿಯನ್ನು ಹೊಂದಿರುವುದಿಲ್ಲ. ಯಾವುದೇ ವಿಷಯದಲ್ಲೂ ಸಹ ಹೆಚ್ಚು ಉತ್ಸಾಹವನ್ನು ತೋರುವುದಿಲ್ಲ. ತಮ್ಮ ಭಾವನೆಗಳನ್ನು ಸಹ ಅಷ್ಟು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ ಎಂದು ಹೇಳಲಾಗುವುದು. ಉಂಗುರ ಬೆರಳು ವ್ಯಕ್ತಿಯ ಪ್ರಣಯ ಪ್ರವೃತ್ತಿಯ ಬಗ್ಗೆಯೂ ಪ್ರತಿನಿಧಿಸುತ್ತದೆ ಎಂದು ಹೇಳಲಾಗುವುದು. ಚಿಕ್ಕದಾದ ಉಂಗುರ ಬೆರಳು ಹೊಂದಿದವರು ಕಡಿಮೆ ಆಸಕ್ತಿಯನ್ನು, ಸಾಮಾನ್ಯ ಉದ್ದವಾದ ಉಂಗುರ ಬೆರಳಿನವರು ಹೆಚ್ಚು ಪ್ರಣಯ ಸ್ವಭಾವವನ್ನು ಮತ್ತು ಮೋಜಿನ ಸಂಗತಿಯಲ್ಲಿ ಆಸಕ್ತಿ ಹೊಂದಿದವರು ಆಗಿರುತ್ತಾರೆ. ಅತಿಯಾಗಿ ಉದ್ದವಾದ ಉಂಗುರ ಬೆರಳಿನ ವ್ಯಕ್ತಿಗಳು ಜೂಜಾಟದಲ್ಲಿ ಆಸಕ್ತಿ ಹಾಗೂ ಅಜಾಗರೂಕತೆಯ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹಸ್ತಮುದ್ರಿಕೆಯ ಶಾಸ್ತ್ರ ತಿಳಿಸುವುದು.

​ಬುಧ ಬೆರಳು

ಕಿರು ಬೆರಳನ್ನು ಬುಧ ಬೆರಳು ಎಂದು ಕರೆಯುವರು. ಮಿಥುನ ಹಾಗೂ ಕನ್ಯಾ ರಾಶಿಯನ್ನು ಆಳುವ ಗ್ರಹ ಬುಧ. ಇದು ವ್ಯಕ್ತಿಯ ಕಿರು ಬೆರಳನ್ನು ಪ್ರತಿನಿಧಿಸುವುದು. ಕಿರು ಬೆರಳು ಸ್ವಲ್ಪ ಉದ್ದವಾಗಿ ಮತ್ತು ಗಟ್ಟಿಯಾಗಿ ಇರುವಂತೆ ಇದ್ದರೆ ಅಂತಹ ವ್ಯಕ್ತಿಗಳು ಸಾಮಾನ್ಯವಾಗಿ ಭಾಷಣಕಾರರು, ಬರಹಗಾರರು, ನರತ್ಯಗಾರರು, ರಾಜಕಾರಣಿಗಳು ಸಹ ಆಗಿರುತ್ತಾರೆ ಎಂದು ಹೇಳಲಾಗುವುದು. ಉಂಗುರ ಬೆರಳಿಗಿಂತ ಚಿಕ್ಕದಾದ ಕಿರು ಬೆರಳನ್ನು ಹೊಂದಿದವರು ಕೆಲವೊಮ್ಮೆ ತಮ್ಮನ್ನು ತಾವು ತೋರಿಸಿಕೊಳ್ಳಲು ಅಥವಾ ವ್ಯಕ್ತಪಡಿಸಿಕೊಳ್ಳಲು ಕಷ್ಟಪಡುವರು. ಅಂತಹವರಲ್ಲಿ ಕರಕುಶಲತೆಯ ಸ್ವಭಾವವು ಉತ್ತಮವಾಗಿ ಇರುತ್ತದೆ ಎಂದು ಹೇಳಲಾಗುವುದು.

​ಹೆಬ್ಬೆರಳು

ಹೆಬ್ಬೆರಳಲ್ಲಿ ಸಾಮಾನ್ಯವಾಗಿ ಎರಡು ಅಡ್ಡ ರೇಖೆಗಳು ಗಾಢವಾಗಿ ಇರುತ್ತವೆ. ರೇಖೆಗಳು ಗಾಢವಾಗಿ ಇದ್ದರೆ ಅದು ಉನ್ನತ ಶಕ್ತಿಯನ್ನು ಹಾಗೂ ಅದೃಷ್ಟವನ್ನು ಪ್ರತಿನಿಧಿಸುತ್ತದೆ ಎನ್ನಲಾಗುವುದು. ಹೆಬ್ಬೆರಳು ಸಾಮಾನ್ಯವಾಗಿ ತರ್ಕ, ಪ್ರೀತಿ, ಉತ್ಸಾಹ ಹಾಗೂ ಇಂದ್ರೀಯಗಳನ್ನು ಪ್ರತಿನಿಧಿಸುವುದು. ಉದ್ದವಾದ ಹೆಬ್ಬೆರಳನ್ನು ಹೊಂದಿರುವ ವ್ಯಕ್ತಿಗಳು ಜೀವನದಲ್ಲಿ ದೊಡ್ಡ ಯಶಸ್ಸನ್ನು ಕಂಡುಕೊಳ್ಳುವರು. ಜೊತೆಗೆ ಕಡಿಮೆ ಇಚ್ಛಾಶಕ್ತಿಯನ್ನು ಹೊಂದಿರುತ್ತಾರೆ. ಹೆಬ್ಬೆರಳು ಮಧ್ಯಮ ಉದ್ದವನ್ನು ಹೊಂದಿರುವ ವ್ಯಕ್ತಿಗಳು ಆಸೆ, ಬಯಕೆ ಹಾಗೂ ತರ್ಕಗಳನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವರು. ಜೊತೆಗೆ ಉತ್ತಮ ಪರಿಸ್ಥಿತಿಯನ್ನು ಸದಾ ಎದುರಿಸುವರು. ಉದ್ದವಾದ ಹೆಬ್ಬೆರಳಿನ ತುದಿ ಹೊಂದಿದವರು ಜೀವನದಲ್ಲಿ ಸಾಕಷ್ಟು ತಪ್ಪನ್ನು ಮಾಡುವರು. ಬಹಳಷ್ಟು ಆಲೋಚನೆಗಳನ್ನು ಸಹ ನಡೆಸುವರು.

Related Post

Leave a Comment