ಗರುಡ ಪುರಾಣದಲ್ಲಿ ಮತ್ತು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವಿವಾಹಿತ ಮಹಿಳೆ ಯಾವೆಲ್ಲಾ ವಸ್ತುಗಳನ್ನು ದಾನ ಮಾಡುವುದರಿಂದ ಆಕೆಯ ಪತಿ ದೀರ್ಘಾಯುಷ್ಯವನ್ನು, ಅದೃಷ್ಟವನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗಿದೆ. ವಿವಾಹಿತ ಮಹಿಳೆ ಯಾವ ವಸ್ತುಗಳನ್ನು ದಾನ ಮಾಡಿದರೆ ಆಕೆಯ ಪತಿಯ ಆಯಸ್ಸು ಹೆಚ್ಚಾಗುತ್ತದೆ.? ವಿವಾಹಿತ ಮಹಿಳೆಯರು ಇವುಗಳನ್ನು ದಾನ ಮಾಡಬೇಕು.
ಹಿಂದೂ ಧರ್ಮದಲ್ಲಿ ನಾವು ನೋಡಲಾಗುವ ಅನೇಕ ಪುರಾಣಗಳಲ್ಲಿ ಗರುಡ ಪುರಾಣವೂ ಒಂದು. ಇದು ಹಿಂದೂ ಧರ್ಮದದ ಪ್ರಮುಖ ಗ್ರಂಥಗಳಲ್ಲಿ ಒಂದಾಗಿದೆ. ಈ ಪುರಾಣದಲ್ಲಿ ನಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳ ಕುರಿತು ಹೇಳಲಾಗಿದೆ. ಗರುಡ ಪುರಾಣದಲ್ಲಿ ದಾನದ ಕುರಿತು ಹೇಳಲಾಗಿದೆ. ಗರುಡ ಪುರಾಣದಲ್ಲಿ ಮಾತ್ರವಲ್ಲ, ವಾಸ್ತು ಶಾಸ್ತ್ರ ಸೇರಿದಂತೆ ಇನ್ನು ಅನೇಕ ಧಾರ್ಮಿಕ ಗ್ರಂಥಗಳಲ್ಲಿ ದಾನದ ಮಹತ್ವವನ್ನು ತಿಳಿಸಲಾಗಿದೆ. ಇವುಗಳಲ್ಲಿ ದಾನವನ್ನು ಅತ್ಯಂತ ಮಂಗಳಕರ ಕಾರ್ಯವೆಂದು ವರ್ಣಿಸಲಾಗಿದೆ.
ದಾನ ಮಾಡುವಾಗ ನಾವು ಕೆಲವೊಂದು ವಸ್ತುಗಳನ್ನು ದಾನ ಮಾಡುವುದು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಈ 3 ವಸ್ತುಗಳನ್ನು ದಾನ ಮಾಡಬೇಕೆಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ವಿವಾಹಿತ ಸ್ತ್ರೀಯಾದವಳು ಇವುಗಳನ್ನು ದಾನ ಮಾಡುವುದರಿಂದ ಆಕೆಯ ಪತಿಯು ಹೆಚ್ಚಿನ ಆಯಸ್ಸನ್ನು ಪಡೆದುಕೊಳ್ಳುತ್ತಾನೆ. ಹಾಗಾದರೆ, ವಿವಾಹಿತ ಮಹಿಳೆ ಯಾವೆಲ್ಲಾ ವಸ್ತುಗಳನ್ನು ದಾನ ಮಾಡಬೇಕು.?
ಕೆಂಪು ಮೆಣಸಿನಕಾಯಿ:ಒಬ್ಬ ವ್ಯಕ್ತಿಯು ಶತ್ರುಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದರೆ, ಆತನ ಪತ್ನಿ ಮಂಗಳವಾರದ ದಿನದಂದು ಕೆಂಪು ಮೆಣಸಿನಕಾಯಿಯನ್ನು ದಾನ ಮಾಡಬೇಕು. ಇದನ್ನು ಆಕೆ ದಾನ ಮಾಡುವಾಗ ದಕ್ಷಿಣಾಭಿಮುಖವಾಗಿ ದಾನ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ಆಕೆಯ ಪತಿಯು ಶತ್ರುಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಉಪ್ಪು:ಗರುಡ ಪುರಾಣದ ಪ್ರಕಾರ, ಮಹಿಳೆಯು ಮಾಡಬೇಕಾದ ಎರಡನೇ ದಾನವೆಂದರೆ ಅದುವೇ ಉಪ್ಪಿನ ದಾನ. ಉಪ್ಪು ಮಂಗಳಕರ ವಸ್ತುವಾಗಿದ್ದು, ಇದನ್ನು ದಾನ ಮಾಡುವುದರಿಂದ ನಿಮ್ಮ ಪತಿಯ ಅದೃಷ್ಟ ಹೊಳೆಯಲು ಪ್ರಾರಂಭವಾಗುತ್ತದೆ. ಈ ಕಾರಣಕ್ಕಾಗಿ ವಿವಾಹಿತ ಮಹಿಳೆಯು ಸ್ವತಃ ತನ್ನ ಕೈಯಿಂದ ಉಪ್ಪನ್ನು ದಾನ ಮಾಡಬೇಕು. ಇದು ಕೇವಲ ಅದೃಷ್ಟವನ್ನು ಬೆಳಗಿಸುವುದು ಮಾತ್ರವಲ್ಲ. ಎಲ್ಲಾ ಕಾರ್ಯದಲ್ಲೂ ಯಶಸ್ಸನ್ನು ತರುತ್ತದೆ. ಆದರೆ, ಎಂದಿಗೂ ನೀವು ಉಪ್ಪನ್ನು ಮುಸ್ಸಂಜೆ ಸಮಯದಲ್ಲಿ ದಾನ ಮಾಡಬಾರದು.
ಹಾಲು, ಅಕ್ಕಿ ಮತ್ತು ಸಕ್ಕರೆ:ಧಾರ್ಮಿಕ ನಂಬಿಕೆಗಳ ಪ್ರಕಾರ, ವಿವಾಹಿತ ಮಹಿಳೆಯು ಹಾಲು, ಅಕ್ಕಿ ಮತ್ತು ಸಕ್ಕರೆ ಈ ಮೂರು ವಸ್ತುಗಳನ್ನು ಸೋಮವಾರದ ದಿನದಂದು ದೇವಸ್ಥಾನದಲ್ಲಿ ದಾನ ಮಾಡುವುದರಿಂದ ಆಕೆಯ ಪತಿಯು ದೀರ್ಘಾಯುಷ್ಯವನ್ನು ಪಡೆದುಕೊಳ್ಳುತ್ತಾನೆ. ಹಾಗೂ ಇದನ್ನು ವಿವಾಹಿತ ಸ್ತ್ರೀ ಮಾಡುವುದರಿಂದ ಆಕೆಯ ಪತಿ ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಅದೃಷ್ಟ ನೆಲೆಯಾಗುತ್ತದೆ.