ಮಕರ ಸಂಕ್ರಾಂತಿ ಹಬ್ಬದಲ್ಲಿ ಈ 5 ವಸ್ತುಗಳ ಸೇವನೆಯನ್ನು ಮಾಡಲೇಬೇಕು. ತಾಯಿ ಲಕ್ಷ್ಮೀದೇವಿ ನಿಮ್ಮ ಮೇಲೆ ಹಣದ ಮಳೆಯನ್ನು ಸುರಿಸುತ್ತಾರೆ.15 ಜನವರಿ 2024 ರಂದು ಶುಕ್ರವಾರ ದಿನ ಮಕರ ಸಂಕ್ರಾಂತಿ ಎಂಬ ಪವಿತ್ರವಾದ ಹಬ್ಬವನ್ನು ಎಲ್ಲಾರು ಆಚರಿಸುತ್ತಾರೇ.ಪ್ರತಿ ವರ್ಷ ಈ ಹಬ್ಬವು ಔಷ ಮಾಸದಲ್ಲಿ ಅಂದರೆ ಸೂರ್ಯನು ಮಕರ ರಾಶಿಯಲ್ಲಿ ಘೋಚರಿಸುವ ದಿನ ಆಗಿದೆ. ಹಿಂದೂ ಸಂಪ್ರದಾಯದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ತುಂಬಾನೇ ವಿಶೇಷವಾದ ಮಹತ್ವ ಕೂಡ ಇದೆ. ಧಾರ್ಮಿಕ ಮಾಹಿತಿ ಅನುಸಾರವಾಗಿ ಈ ಶುಭ ಸಮಯದಲ್ಲಿ ದಾನ ಧರ್ಮಗಳನ್ನು ಮಾಡುವುದು ಪವಿತ್ರವಾದ ನದಿಗಳಲ್ಲಿ ಸ್ನಾನ ಮಾಡಲಾಗುತ್ತದೆ.
ಈ ರೀತಿ ದಾನ ಧರ್ಮ ಪುಣ್ಯ ಕರ್ಮಗಳನ್ನು ಮಾಡಿದರೆ ನಿಮ್ಮ ಎಲ್ಲಾ ಮನಸಿಚ್ಛೆ ಗಳು ಇಲ್ಲಿ ಪೂರ್ತಿ ಆಗುತ್ತವೆ.ಈ ಹಬ್ಬದ ದಿನ ಜನರು ಧನ ಸಂಪತ್ತು ಆಗಲಿ ಸುಖಸಮೃದ್ಧಿ ಆಗಲಿ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಹಲವಾರು ರೀತಿಯ ಉಪಾಯಗಳನ್ನು ಸಹ ಮಾಡುತ್ತಾರೆ. ಒಂದು ವೇಳೆ ಮಕರ ಸಂಕ್ರಾಂತಿ ಹಬ್ಬದ ದಿನ ಈ ಒಂದು ಉಪಾಯವನ್ನು ಮಾಡಿದರೆ ಸುಖ-ಶಾಂತಿ-ನೆಮ್ಮದಿ ತಾಯಿ ಲಕ್ಷ್ಮೀದೇವಿಯಾ ಆಶೀರ್ವಾದ ಕೂಡ ಸಿಗುತ್ತದೆ.ಹಾಗಾಗಿ ಮಕರ ಸಂಕ್ರಾಂತಿ ಹಬ್ಬದ ದಿನ ಈ 5 ವಸ್ತುಗಳನ್ನು ತಪ್ಪದೇ ತಿನ್ನಿರಿ. ಇಡೀ ವರ್ಷ ದವಸ ಧಾನ್ಯದ ಕೊರತೆ ಆಗುವುದಿಲ್ಲ. ಜೊತೆಗೆ ಮನೆಯಲ್ಲಿ ಧನಸಂಪತ್ತು ಸುಖ-ಶಾಂತಿ ನೆಮ್ಮದಿಯು ಸಹ ಉಳಿಯುತ್ತದೆ.
ಶುಕ್ರವಾರ ರೋಹಿಣಿ ನಕ್ಷತ್ರದಲ್ಲಿ ವಿಶೇಷವಾದ ಸಂಯೋಗ ಒಂದು ನಡೆಯಲಿದೆ. ಜನವರಿ 15 ಮಕರ ಸಂಕ್ರಾಂತಿ ಹಬ್ಬದ ದಿನ ಈ ರೋಹಿಣಿ ನಕ್ಷತ್ರವು ಸಾಯಂಕಾಲ 8:20ನಿಮಿಷದವರೆಗೆ ಇರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ರೋಹಿಣಿ ನಕ್ಷತ್ರವನ್ನು ತುಂಬಾನೇ ಶುಭ ಎಂದು ತಿಳಿಸಿದ್ದಾರೆ.ಈ ದಿನ ದಾನ ಧರ್ಮ ಪುಣ್ಯ ಸ್ನಾನಗಳನ್ನು ಮಾಡಿದರೆ ನಿಮಗೆ ತುಂಬಾನೇ ವಿಶೇಷವಾದ ಫಲಗಳು ಕೂಡ ಸಿಗುತ್ತವೆ.ಒಂದು ವೇಳೆ ಈ ದಿನ ಚಿನ್ನ ಬೆಳ್ಳಿ ಖರೀದಿ ಮಾಡಿದರೆ ಹೆಚ್ಚಿನ ಲಾಭ ಕೂಡ ಸಿಗುತ್ತದೆ.ವಿಶೇಷವಾಗಿ ಲಕ್ಷ್ಮೀದೇವಿಯ ಪಾದ ಚಿಹ್ನೆಯನ್ನು ಮನೆಗೆ ತನ್ನಿ. ಸಾಧ್ಯವಾದರೆ ಕಮಲದ ಮಾಲೆಗಳನ್ನು ಸಹ ತೆಗೆದುಕೊಂಡು ಬರಬೇಕು. ತಾಯಿ ಲಕ್ಷ್ಮೀದೇವಿಗೆ ಕೆಂಪು ಬಟ್ಟೆಯನ್ನು ಅರ್ಪಿಸಿ ಎಳ್ಳಕ್ಕಿ ಪಾನುಗಳನ್ನು ಅರ್ಪಿಸಿ. ಈ ದಿನ ನಿಮ್ಮ ಮನೆಯಲ್ಲಿ ಸಿಹಿ ತಿನಿಸುಗಳನ್ನು ತಯಾರಿಸಬೇಕು. ಇವುಗಳನ್ನು ನೈವೇದ್ಯ ರೂಪದಲ್ಲಿ ತಾಯಿ ಲಕ್ಷ್ಮಿ ದೇವಿಗೆ ಅರ್ಪಿಸಬೇಕು.
1,ಎಳ್ಳು ಬೆಲ್ಲ–ಮಕರ ಸಂಕ್ರಾಂತಿ ಹಬ್ಬದ ದಿನ ಎಳ್ಳು ಬೆಲ್ಲ ಉಂಡೆಯನ್ನು ತಯಾರಿಸುತ್ತಾರೆ.ಇವುಗಳನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸುತ್ತಾರೆ.ನಂತರ ಎಲ್ಲರೊಂದಿಗೆ ಹಂಚಿಕೊಂಡು ತಿನ್ನುತ್ತಾರೆ. ಹಾಗಾಗಿ ಎಳ್ಳು-ಬೆಲ್ಲದ ಉಂಡೆಯನ್ನು ಲಕ್ಷ್ಮಿದೇವಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಬೇಕು. ನಂತರ ಈ ಪ್ರಸಾದವನ್ನು ಕುಟುಂಬದವರು ಸೇವನೆ ಮಾಡುವುದರಿಂದ ಪುಣ್ಯ ಫಲಗಳು ನಿಮಗೆ ಸಿಗುತ್ತದೆ. ಈ ದಿನ ಎಳ್ಳು ಬೆಲ್ಲ ಸೇವನೆ ಮಾಡಿದರೆ ಅಥವಾ ದಾನಮಾಡಿದರೆ ಇದು ಎಲ್ಲಕ್ಕಿಂತ ಶುಭ ಆಗಿರುತ್ತದೆ.
2,ಕಿಚಡಿ—ಮಕರ ಸಂಕ್ರಾಂತಿ ಹಬ್ಬದಲ್ಲಿ ಅಕ್ಕಿ ಮತ್ತು ಬೆಳೆಗಳನ್ನು ಸೇರಿಸಿ ಕಿಚಡಿ ತಯಾರಿಸುತ್ತಾರೆ.ಈ ದಿನ ಕಿಚಡಿ ದಾನ ಮಾಡಿದರೆ ಪುಣ್ಯ ಕೂಡ ಸಿಗುತ್ತದೆ.ಕಿಚಡಿಯನ್ನು ನೈವೈದ್ಯ ರೂಪದಲ್ಲಿ ಸೂರ್ಯ ದೇವರಿಗೂ ಸಹ ಅರ್ಪಿಸಬೇಕು. ನಂತರ ಬಡವರಿಗೆ ಈ ಕಿಚಡಿಯನ್ನು ಹಂಚಬೇಕು.ಈ ಕಿಚಡಿ ಶುಭ ಮತ್ತು ತುಂಬಾ ಲಾಭದಾಯಕ ಆಗಿರುತ್ತದೆ. ಹಬ್ಬದ ದಿನ ಕಿಚಡಿ ತಿಂದರೆ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿ ಆಗುತ್ತದೆ.ಇಲ್ಲಿ ತಾಯಿ ಲಕ್ಷ್ಮಿ ದೇವಿ ಬೇಗಾ ಒಲಿಯುತ್ತಾಳೆ.
3,ಬಾಳೆಹಣ್ಣು ಮತ್ತು ದ್ರಾಕ್ಷಿ—ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಬೇಕು ಎಂದರೆ ದೇವಿಗೆ ಬಾಳೆಹಣ್ಣು ಮತ್ತು ದ್ರಾಕ್ಷಿಯನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿರಿ. ಪ್ರಸಾದದ ರೂಪದಲ್ಲಿ ಇವುಗಳನ್ನು ನೀವು ಸೇವಿಸಬೇಕು.ಅಂದರೆ ಕುಟುಂಬದವರೊಂದಿಗೆ ಹಂಚಿಕೊಂಡು ತಿನ್ನಬೇಕು.ಈ ದಿನ ಹಿರಿಯರ ಹೆಸರಿನಲ್ಲಿ ಬಾಳೆ ಹಣ್ಣನ್ನು ಖಂಡಿತ ಅರ್ಪಿಸಬೇಕು.ಈ ರೀತಿ ಮಾಡಿದರೆ ಹಿರಿಯರ ಆಶೀರ್ವಾದ ಖಂಡಿತ ಸಿಗುತ್ತದೆ.
4, ಉಪ್ಪು–ಸಾಮಾನ್ಯವಾಗಿ ಅಕ್ಕಿ ಮತ್ತು ಉದ್ದಿನ ಬೇಳೆಯಲ್ಲಿ ಅಥವಾ ತುಪ್ಪದಲ್ಲಿ ಉಪ್ಪಿನ ಬಳಕೆಯನ್ನು ಮಾಡಿರುತ್ತೀರಾ. ಆದರೆ ಮಕರ ಸಂಕ್ರಾಂತಿ ಹಬ್ಬದ ದಿನ ಅಬ್ಬಜಿತ್ ಮುಹೂರ್ತದಲ್ಲಿ ನೀವು ಚಿಟಿಕೆ ಉಪ್ಪನ್ನಾದರೂ ತಿನ್ನಬೇಕು. ಇದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ.ಮನೆಯಲ್ಲಿ ಧನ ಸಂಪತ್ತಿನ ಕೊರತೆ ಆಗುವುದಿಲ್ಲ.ಒಳ್ಳೆಯ ನೌಕರಿ ಕೂಡ ಸಿಗುತ್ತದೆ.
5, ಕಲ್ಲು ಸಕ್ಕರೆ—ಮಕರ ಸಂಕ್ರಾಂತಿ ದಿನದಂದು ತಾಯಿ ಲಕ್ಷ್ಮೀದೇವಿಗೆ ಕಲ್ಲು ಸಕ್ಕರೆಯನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಬೇಕು ಮತ್ತು ಮನೆಯವರೊಂದಿಗೆ ಹಂಚಿಕೊಂಡು ತಿನ್ನಬೇಕು. ಈ ರೀತಿ ಮಾಡಿದಾಗ ಮನೆಯಲ್ಲಿ ಯಾವತ್ತಿಗೂ ಸುಖ-ಶಾಂತಿ-ನೆಮ್ಮದಿಯು ನೆಲೆಸುತ್ತದೆ.ಮಕರ ಸಂಕ್ರಾಂತಿ ಹಬ್ಬದ ದಿನ ನೀವು ನಿಮ್ಮ ಮನೆಯ ಮುಖ್ಯದ್ವಾರದ ಮುಂದೆ ದೀಪವನ್ನು ಖಂಡಿತ ಉರಿಸಬೇಕು.ಮಹಿಳೆಯರು ಮಕರ ಸಂಕ್ರಾಂತಿ ಹಬ್ಬದ ದಿನ ತಲೆಕೂದಲನ್ನು ತೊಳೆಯಬಾರದು.ಈ ದಿನ ಮನೆಯ ಒಳಗಡೆ ಅಥವಾ ಆಚೆ ಮರಗಿಡಗಳನ್ನು ಸಸ್ಯಗಳನ್ನು ಕತ್ತರಿಸುವ ಕೆಲಸ ಮಾಡಬಾರದು.
ಈ ದಿನ ಮಾಡಿದ ದಾನ ಪುಣ್ಯಕರ್ಮಗಳು ವ್ಯರ್ಥವಾಗಿ ಹೋಗುವುದಿಲ್ಲ. ಹಾಗಾಗಿ ಈ ದಿನ ಸಾಧ್ಯವಾದರೆ ದಾನ ಪುಣ್ಯವನ್ನು ಮಾಡಿ. ಬಡವರಿಗೆ ಸ್ವಲ್ಪ ಆದರೂ ದಾನವನ್ನು ಮಾಡಿ. ಈ ರೀತಿ ಮಾಡಿದಾಗ ಖಂಡಿತ ತಾಯಿ ಲಕ್ಷ್ಮೀದೇವಿಯಾ ಆಶೀರ್ವಾದ ಕೃಪೆ ಸಿಗುತ್ತದೆ. ಈ ದಿನ ಯಾರಾದರೂ ಸಾಧು ಸಂತರು ಬಂದರೆ ಅವರನ್ನು ಖಾಲಿ ಕೈಯಲ್ಲಿ ಮನೆಯಿಂದ ಕಳುಹಿಸಬೇಡಿ. ನಿಮ್ಮ ಅನುಕೂಲತೆ ಇದ್ದಷ್ಟು ಅವರಿಗೆ ನೀಡಿ ಕಳಿಸಿರಿ. ಬಡವರಿಗೆ ಈ ದಿನ ಊಟ ಮಾಡಿಸುವುದು ಕೂಡ ತುಂಬಾ ಶುಭವಾಗಿದೆ. ಗೋಮಾತೆ ಸೇವೆ ಮಾಡಿದರೆ ಎಲ್ಲ ಪಾಪ ಅಂತ್ಯವಾಗುತ್ತದೆ.