ಫಾಲ್ಗುಣ ಮಾಸದ ಅಮಾವಾಸ್ಯೆಯನ್ನು ಫಾಲ್ಗುಣಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಸಾಂಪ್ರದಾಯಿಕ ಪುರಾತನ ನಂಬಿಕೆಗಳ ಪ್ರಕಾರ, ಈ ದಿನ ತುಂಬಾ ಬಹಳ ಮಹತ್ವದ್ದಾಗಿದೆ. ಫಾಲ್ಗುಣಿ ಅಮಾವಾಸ್ಯೆಯಂದು ಪೂರ್ವಜರಿಗೆ ಗೌರವ ಸಲ್ಲಿಸಲಾಗುತ್ತದೆ. ಪೂರ್ವಜರ ಹೆಸರಿನಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ಈ ವರ್ಷ ಫಾಲ್ಗುಣಿ ಅಮವಾಸ್ಯೆಯನ್ನು ಮಾರ್ಚ್ 10ರಂದ ಆಚರಣೆ ಮಾಡಲಾಗುತ್ತದೆ. ಈ ಬಾರಿ ಫಾಲ್ಗುಣಿ ಅಮವಾಸ್ಯೆ ಭಾನುವಾರ ಬಂದಿರುವ ಕಾರಣ ಹೆಚ್ಚು ಮಹತ್ವವನ್ನು ಪಡದುಕೊಂಡಿದೆ. ಮಾರ್ಚ್ 9ರ ಸಂಜೆ 6.17ಕ್ಕೆ ಅಮವಾಸ್ಯೆಯ ತಿಥಿ ಆರಂಭವಾಗಿದೆ.
ಶನಿವಾರ ಸಂಜೆ ಆರಂಭವಾಗಿರುವ ಫಾಲ್ಗುಣಿ ಅಮವಾಸ್ಯೆ ತಿಥಿ ಭಾನುವಾರ ಅಂದ್ರೆ ಮಾರ್ಚ್ 10ರಂದು ಮಧ್ಯಾಹ್ನ 2.19ಕ್ಕೆ ಮುಕ್ತಾಯವಾಗಲಿದೆ. ಅಂದ್ರೆ ಭಾನುವಾರ ಮಧ್ಯಾಹ್ನದವರೆಗೆ 2.29ರವರೆಗೆ ಅಮವಾಸ್ಯೆಯ ತಿಥಿ ಇರಲಿದೆ.
ಫಾಲ್ಗುಣಿ ಅಮವಾಸ್ಯೆ ತಿಥಿಯಂದು ಬೆಳಗ್ಗೆ ಬೇಗ ಎದ್ದು ಗಂಗಾಸ್ನಾನ ಮಾಡಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ನೀವು ವಾಸಿಸುವ ಸ್ಥಳದ ಸಮೀಪ ಯಾವುದೇ ನದಿ ಇದ್ರೂ ತೆರಳಿ ಸ್ನಾನ ಮಾಡಬೇಕು ಎಂದು ಪುರಾಣದಲ್ಲಿ ಹೇಳಲಾಗುತ್ತದೆ. ಒಂದು ವೇಳೆ ನಗರದಲ್ಲಿ ನೀವು ವಾಸವಾಗಿದ್ರೆ ಕ್ರಮಬದ್ಧವಾಗಿ ಸ್ನಾನ ಮಾಡಬೇಕು. ಆದರೂ ಈ ಅಮವಾಸ್ಯೆಯಂದು ನದಿ ಸ್ನಾನಕ್ಕೆ ಮೊದಲ ಪ್ರಾಮುಖ್ಯತೆ ನೀಡಲಾಗುತ್ತದೆ.
ಫಾಲ್ಗುಣಿ ಅಮವಾಸ್ಯೆಯ ದಿನದ ತಿಥಿಯೊಳಗೆ ಪೂರ್ವಿಕರಿಗಾಗಿ ಯಜ್ಞವನ್ನು ಮಾಡುತ್ತಾರೆ ಈ ದಿನ ಯಜ್ಞ ಮಾಡುವದರಿಂದ ಪಿತ್ರ ದೋಷ ನಿವಾರಣೆಯಾಗುತ್ತೆ ಎಂಬ ನಂಬಿಕೆ ಇದೆ. ಪಿತ್ರ ದೋಷ ನಿವಾರಣೆಗಾಗಿ ಈ ದಿನದಂದು ಯಜ್ಞ ಮಾಡಲಾಗುತ್ತದೆ.
ಫಾಲ್ಗುಣಿ ಅಮವಾಸ್ಯೆ ತಿಥಿಯಂದು ಬಡವರಿಗೆ ಅನ್ನ, ವಸ್ತ್ರಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನಿಮ್ಮ ಆರ್ಥಿಕ ಶಕ್ತಿಗನುಸಾರವಾಗಿ ದಾನ ಮಾಡೋದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.
ಫಾಲ್ಗುಣಿ ಅಮವಾಸ್ಯೆಯಂದು ಗ್ರಂಥಗಳ ಅಮೃತಪಾಠವನ್ನು ಪಠಿಸಿ. ಇದು ಪುಣ್ಯವನ್ನು ಪಡೆಯಲು ದಾರಿ ಮಾಡಿಕೊಡುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಪುರಾಣ ಪಠಣದಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಅಥವಾ ಮನೆಯ ಒಬ್ಬ ಸದಸ್ಯರು ಎಲ್ಲರಿಗೂ ಕೇಳುವಂತೆ ಪುರಾಣದ ಕತೆ ಹೇಳುವುದನ್ನು ಮಾಡಬೇಕು. ಶ್ಲೋಕಗಳನ್ನು ಸಹ ಪಠಿಸಬಹುದು.
ಪಿತೃದೋಷ ನಿವಾರಣೆಗಾಗಿ ಯಜ್ಞದ ಜೊತೆಯಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಗಾಯತ್ರಿ ಮಂತ್ರವನ್ನು ಹೇಳುವದರಿಂದ ಕಾರಾತ್ಮಕ ಶಕ್ತಿಗಳ ದುಷ್ಪರಿಣಾಮ ತಡೆಯಲು ಸಹಾಯವಾಗುತ್ತದೆ. ಮನೆಯಲ್ಲಿ ಈ ಮಂತ್ರ ಪಠಣೆಯಿಂದ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಬಹುದು.