ಬೆಳ್ಳುಳ್ಳಿಯಲ್ಲಿ ಹೇರಳವಾದ ಔಷಧೀಯ ಗುಣವಿದೆ ಆದರೆ ಇದನ್ನು ಸೇವಿಸಲು ಅಷ್ಟಾಗಿ ಯಾರೂ ಇಷ್ಟಪಡುವುದಿಲ್ಲ.
ಊಟದ ಸಮಯದಲ್ಲಿ ಸಾಂಬಾರು, ಪಲ್ಯದಲ್ಲಿ ಸಿಕ್ಕಿದರೆ ಬದಿಗಿಟ್ಟು ಊಟ ಮಾಡುವವರೇ ಹೆಚ್ಚು.ಇನ್ನೂ ಇದನ್ನು ಆಹಾರಕ್ಕಿಂತಲೂ ಹೆಚ್ಚಾಗಿ ಔಷಧಿ ರೂಪದಲ್ಲಿ ಆಯುರ್ವೇದದಲ್ಲಿ ಬಳಸಲಾಗುತ್ತದೆ.ಬೆಳ್ಳುಳ್ಳಿ ಆಹಾರದ ಮೂಲಕ ಸೇವಿಸುವುದರಿಂದ ಆಹಾರದಲ್ಲಿ ರುಚಿಯ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ.ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಬಹುದು ಅಥವಾ ಹುರಿದು , ಅರೆದು ಅಥವಾ ಒಗ್ಗರಣೆಯೊಂದಿಗೆ ಸಾರು ಪಲ್ಯಗಳಲ್ಲಿ ಉಪಯೋಗಿಸಬಹುದು .
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಇನ್ನು ಬೆಳ್ಳುಳ್ಳಿ ಹಲವಾರು ವಿಧದ ಕಾಯಿಲೆಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ.ವಿಶೇಷವಾಗಿ ಜೀರ್ಣಕ್ರಿಯೆ ಮತ್ತು ಬಾಯಿಯ ತೊಂದರೆಗಳಿಗೆ ಬೆಳ್ಳುಳ್ಳಿ ಉತ್ತಮ ಪರಿಹಾರವಾಗಿದೆ.ಇದರ ರುಚಿಯನ್ನು ಹೆಚ್ಚಿನವರು ಇಷ್ಟ ಪಡದೇ ಇದ್ದರೂ ಹೃದಯಕ್ಕೆ ಇದು ಮಾಡುವ ಉಪಕಾರವನ್ನು ಮಾತ್ರ ಮೆಚ್ಚಲೇಬೇಕು.ಇನ್ನು ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ,ವಿಟಮಿನ್ ಸಿ , ವಿಟಮಿನ್ ಬಿ6 ಹಾಗೂ ಕರಗುವ ನಾರು ಇದೆ.ಇದರ ಹೊರತಾಗಿ ಚಿಕ್ಕ ಪ್ರಮಾಣದಲ್ಲಿ ಪೊಟ್ಯಾಷಿಯಂ ,ಗಂಧಕ ,ಕಬ್ಬಿಣ ,ತಾಮ್ರ ,ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ1 ಕೂಡ ಇದೆ.ಇವೆಲ್ಲವೂ ಆರೋಗ್ಯವನ್ನು ವೃದ್ಧಿಸಲು ನೆರವಾಗುತ್ತದೆ.
ಬೆಳ್ಳುಳ್ಳಿ ಸೇವಿಸುವುದರಿಂದ ದೇಹಕ್ಕೆ ಸಿಗುವ ಲಾಭಗಳು
ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.ಬೆಳ್ಳುಳ್ಳಿಯನ್ನು ತಿನ್ನುವುದರಿಂದ ರಕ್ತ ಸಂಚಾರ ಸರಾಗವಾಗಿ ನಡೆಯುತ್ತದೆ ಇದರಿಂದ ಹೃದಯದ ಆರೋಗ್ಯ ಹೆಚ್ಚುತ್ತದೆ.ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಉತ್ತಮ. ಬೆಳ್ಳುಳ್ಳಿ ತಿನ್ನುವುದರಿಂದ ಇದರಲ್ಲಿರುವ ಪೋಷಕಾಂಶಗಳು ಕೂದಲನ್ನು ಆಂತರಿಕವಾಗಿ ಪೋಷಿಸುತ್ತದೆ.ಇನ್ನು ಹುಳಕಡ್ಡಿಯಂತಹ ಚರ್ಮದ ಸಮಸ್ಯೆ ಇದ್ದರೆ ಬೆಳ್ಳುಳ್ಳಿ ರಸ ಹಚ್ಚಿದರೆ ಅದು ಕಡಿಮೆಯಾಗುತ್ತದೆ.ಕ್ಯಾನ್ಸರ್ ಅನ್ನು ದೂರವಿಡುತ್ತದೆ.ಬೆಳ್ಳುಳ್ಳಿಯಲ್ಲಿ ಪ್ಲಮನಾಯ್ಡ್ ಅಂಶ ಇದ್ದು ಇದು ಡಿಎನ್ಎಗೆ ಹಾನಿಯಾಗದಂತೆ ಕಾಪಾಡುತ್ತದೆ.ಇದರಿಂದ ಕ್ಯಾನ್ಸರ್ ಕಣಗಳು ಉಂಟಾಗುವುದನ್ನು ತಡೆಯುತ್ತದೆ.ಮಾನಸಿಕ ಒತ್ತಡವನ್ನು ನಿಯಂತ್ರಿಸುವ ಗುಣ ಬೆಳ್ಳುಳ್ಳಿಯಲ್ಲಿ ಇದೆ.ಮಾನಸಿಕ ಒತ್ತಡದಿಂದಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.ಬೆಳ್ಳುಳ್ಳಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಹೆಚ್ಚಾಗಿದ್ದು ಇದು ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರ ಹಾಕುವ ಪ್ರಯತ್ನವನ್ನು ಮಾಡುತ್ತದೆ ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ .
ಕೊಲೆಸ್ಟ್ರಾಲನ್ನು ನಿಯಂತ್ರಿಸುತ್ತದೆ.ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ತಮ್ಮ ಆಹಾರಕ್ರಮದಲ್ಲಿ ಬೆಳ್ಳುಳ್ಳಿಯನ್ನು ಬಳಸುವುದು ತುಂಬಾ ಒಳ್ಳೆಯದು.ಇನ್ನು ದಿನ ಬೆಳಗ್ಗೆ ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕೊಲೆಸ್ಟ್ರಾಲನ್ನು ನಿಯಂತ್ರಣದಲ್ಲಿಡಬಹುದು.ಬೊಜ್ಜು ಕರಗಿಸುತ್ತದೆ. ಮೈತೂಕ ಹೆಚ್ಚಾಗಬಾರದು ಹೊಟ್ಟೆ ಭಾಗದಲ್ಲಿ ಬೊಜ್ಜು ಬರಬಾರದು ಎಂದರೆ ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಎಸಳು ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು .ದಿನ ಅರ್ಧ ಗಂಟೆ ವ್ಯಾಯಾಮ ಹಾಗೂ ಬೆಳಗ್ಗೆ ಎರಡು ಎಸಳು ಬೆಳ್ಳುಳ್ಳಿಯನ್ನು ತಿಂದು ನೋಡಿ ಬೇಗನೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.ಸಾಂಕ್ರಾಮಿಕ ರೋಗವನ್ನು ತಡೆಗಟ್ಟುತ್ತದೆ. ಬೆಳ್ಳುಳ್ಳಿ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಸಾಂಕ್ರಾಮಿಕ ಜ್ವರ ಮತ್ತು ಉಸಿರಾಟದ ತೊಂದರೆಯನ್ನು ದೂರವಾಗಿಸಬಹುದು.ರಕ್ತವನ್ನು ಶುದ್ಧೀಕರಿಸುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರ ಹಾಕುವುದರಿಂದ ರಕ್ತ ಶುದ್ಧವಾಗುತ್ತದೆ.
ಇನ್ನು ಬೆಳ್ಳುಳ್ಳಿಯಲ್ಲಿರುವ ರಾಸಾಯನಿಕ ದೇಹದೊಳಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.ಇದರಿಂದ ಹೃದಯದ ಆರೋಗ್ಯವೂ ಹೆಚ್ಚಾಗುತ್ತದೆ.ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ.ಇದರಿಂದ ನಿಶ್ಶಕ್ತಿ ಉಂಟಾಗುತ್ತದೆ.ರಕ್ತಹೀನತೆ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಅಗತ್ಯ ಅದರ ಜೊತೆಗೆ ಒಂದು ಎಸಳು ಬೆಳ್ಳುಳ್ಳಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ರಕ್ತಹೀನತೆ ಸಮಸ್ಯೆ ಬೇಗನೆ ಕಡಿಮೆಯಾಗುತ್ತದೆ.ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.ಪ್ರತಿದಿನ ಬೆಳ್ಳುಳ್ಳಿಯ ಒಂದು ಸಣ್ಣ ಎಸಳನ್ನು ಜಗಿಯುವುದರಿಂದ ಪಚನಕ್ರಿಯೆ ಚೆನ್ನಾಗಿ ನಡೆದು ಜೀರ್ಣಕ್ರಿಯೆಯೂ ಉತ್ತಮವಾಗಿರುತ್ತದೆ.ಇದರಿಂದ ಹಸಿವು ಹೆಚ್ಚಾಗುತ್ತದೆ.ಅಜೀರ್ಣ ಸಮಸ್ಯೆ ಇರುವವರು ಬೆಳ್ಳುಳ್ಳಿ ತಿಂದರೆ ಸಮಸ್ಯೆ ಇಲ್ಲವಾಗುತ್ತದೆ.
ಬೆಳ್ಳುಳ್ಳಿಯನ್ನು ಹೇಗೆ ತಿಂದರೆ ಹೆಚ್ಚು ಆರೋಗ್ಯಕರ
ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿ ತಿಂದರೆ ಹೆಚ್ಚು ಆರೋಗ್ಯಕರ ಬೆಳ್ಳುಳ್ಳಿಯನ್ನು ಬೇಯಿಸುವುದರಿಂದ ಅದರಲ್ಲಿರುವ ಅಲ್ಲಿಸಿನ್ ಎಂಬ ಅಂಶವು ಕಡಿಮೆಯಾಗುತ್ತದೆ. ಹಸಿ ಬೆಳ್ಳುಳ್ಳಿಯನ್ನು ಹಾಗೇ ತಿನ್ನಲು ಕಷ್ಟವಾದರೆ ಸಲಾಡ್ ಅಥವಾ ಚಟ್ನಿಯಲ್ಲಿ ಬಳಸಬಹುದು.
ಬೆಳ್ಳುಳ್ಳಿಯನ್ನು ಈ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಬಹುದು
ನೆಗಡಿ ಜ್ವರ ಹೋಗಲಾಡಿಸಲು ಬೆಳ್ಳುಳ್ಳಿಯನ್ನು ಹೀಗೆ ಬಳಸಿ. ಸಣ್ಣ ಪುಟ್ಟ ಶೀತ ಕೆಮ್ಮು ಸಾಮಾನ್ಯ ಜ್ವರಗಳಿಗೆ ಮನೆಯಲ್ಲಿ ಸಿಗುವ ಬೆಳ್ಳುಳ್ಳಿಯನ್ನು ಬಳಸಬಹುದು.ಮನೆ ಮದ್ದು ತಯಾರಿಸುವ ವಿಧಾನ :ಎರಡು ಲೋಟ ನೀರನ್ನು ಕುದಿಸಿ ಅದಕ್ಕೆ ಅರ್ಧ ಈರುಳ್ಳಿಯನ್ನು ಹಾಕಿ , 4 ಎಸಳು ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಕುದಿಸಿ ,ಇಳಿಸಿದ ಬಳಿಕ ಅದಕ್ಕೆ ಅರ್ಧ ಹೋಳು ನಿಂಬೆ ರಸವನ್ನು ಸೇರಿಸಿ.ಈ ಮನೆ ಮದ್ದನ್ನು ಬೆಳಗ್ಗೆ ಉಪಹಾರ ಮಾಡಿದ ನಂತರ ಹಾಗೂ ರಾತ್ರಿ ಊಟದ ನಂತರ ಸೇವಿಸಿ ಇದರಿಂದ ಬೇಗನೆ ಜ್ವರ ಮತ್ತು ನೆಗಡಿ ಕಡಿಮೆಯಾಗುತ್ತದೆ.
ತೂಕ ಇಳಿಕೆಗೆ ಈ ರೀತಿಯಾಗಿ ಬಳಸಿ
1 ) ಬೆಳಗ್ಗೆ 2 ರಿಂದ 3 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಹತ್ತು ನಿಮಿಷ ಹಾಗೇ ಇಟ್ಟು ನಂತರ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ ,
ಒಂದು ಲೋಟ ಬಿಸಿನೀರು ಕುಡಿಯಿರಿ.2 ) 2 ರಿಂದ 3 ಎಸಳು ಬೆಳ್ಳುಳ್ಳಿಯನ್ನು ಜಜ್ಜಿಒಂದು ಚಮಚ ಜೇನು ತುಪ್ಪದ ಜೊತೆಗೆ ಮಿಶ್ರ ಮಾಡಿ ಸೇವಿಸಿ.ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು .
ಈ ಎರಡು ಟಿಪ್ಸ್ ಗಳಲ್ಲಿ ನೀವು ಯಾವುದಾದರೂ ಒಂದು ವಿಧಾನವನ್ನು ಬಳಸಿ.ಇದರಿಂದ ಮೈ ತೂಕ ಕಡಿಮೆಯಾಗುತ್ತದೆ.ನೆನಪಿಡಿ 2 ರಿಂದ 3 ಎಸಳು ಬೆಳ್ಳುಳ್ಳಿಯನ್ನು ಅಷ್ಟೇ ಸೇವಿಸಿ ಅದಕ್ಕಿಂತ ಹೆಚ್ಚು ಬೇಡ.ಹಲ್ಲಿನ ನೋವಿಗೆ ಮನೆ ಮದ್ದು ಹಲ್ಲು ನೋವಿನ ತಾತ್ಕಾಲಿಕ ಶಮನಕ್ಕಾಗಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ನುಣ್ಣಗೆ ಅರೆದು ಅದನ್ನು ಪೇಸ್ಟ್ ರೀತಿ ಮಾಡಿಕೊಳ್ಳಿ .ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿದರೆ ಒಳ್ಳೆಯದು, ನೋವಿರುವ ಜಾಗಕ್ಕೆ ಹಚ್ಚಿ.ಹೀಗೆ ಮಾಡುವಾಗ ಬಾಯಿಯಲ್ಲಿ ಉರಿ ಉಂಟಾದರೂ ಆ ಉರಿ ಸ್ವಲ್ಪ ಸಮಯದ ನಂತರ ಕಡಿಮೆಯಾಗುತ್ತದೆ ಹಾಗೂ ಹಲ್ಲು ನೋವು ಕೂಡ ಕಡಿಮೆಯಾಗುತ್ತದೆ. ಇನ್ನು ಅತಿಯಾದರೆ ಯಾವುದೂ ಒಳ್ಳೆಯದಲ್ಲ ಆದ್ದರಿಂದ ಉತ್ತಮವಾದ ಆರೋಗ್ಯಕ್ಕೆ ದಿನದಲ್ಲಿ 2 ರಿಂದ 3 ಎಸಳು ಬೆಳ್ಳುಳ್ಳಿಯನ್ನು ಸೇವಿಸಿ ಅದಕ್ಕಿಂತ ಹೆಚ್ಚಿನ ಸೇವನೆ ಬೇಡ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಧನ್ಯವಾದಗಳು.