ಹಾಲು
ಹಾಲಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು.ಇದರಲ್ಲಿ ಕ್ಯಾಲ್ಷಿಯಂ, ಸೋಡಿಯಂ , ಪ್ರೊಟೀನ್ , ವಿಟಮಿನ್ ಎ , ವಿಟಮಿನ್ ಕೆ ಮತ್ತು ಬಿ-12 , ಅಮೈನೊ ಆಮ್ಲಗಳು , ನಾರಿನ ಅಂಶ , ಆ್ಯಂಟಿ ಆಕ್ಸಿಡೆಂಟ್ಗಳು ಇವೆ.ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಆದರೆ ಹಾಲಿ ನಿಂದ ಸಂಪೂರ್ಣ ಲಾಭವನ್ನು ಪಡೆಯಲು ಸರಿಯಾದ ರೀತಿಯಲ್ಲಿ ಹಾಲನ್ನು ಕುಡಿಯುವುದು ಕೂಡ ತುಂಬಾನೇ ಮುಖ್ಯ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ನಮ್ಮಲ್ಲಿ ಹಲವರು ಪ್ರತಿದಿನ ಹಾಲು ಕುಡಿಯುತ್ತಾರೆ ಆದರೆ ಅವರಿಗೆ ಹಾಲಿನಿಂದ ಯಾವುದೇ ರೀತಿಯ ಲಾಭ ದೊರೆಯುತ್ತಿಲ್ಲ ಕಾರಣ ಹಾಲನ್ನು ಕುಡಿಯುವಾಗ ಮಾಡುವ ತಪ್ಪು.ಇದರಿಂದಲೇ ಹಾಲಿನಿಂದ ಸರಿಯಾದ ಪೋಷಕಾಂಶ ಅವರಿಗೆ ದೊರೆಯುತ್ತಿಲ್ಲ ಬದಲಾಗಿ ಮೊಡವೆ , ವಾಂತಿ , ಹೊಟ್ಟೆ ಉಬ್ಬರ , ಹೊಟ್ಟೆ ನೋವು , ತೂಕದಲ್ಲಿ ಹೆಚ್ಚಳ , ಜೀರ್ಣಕ್ರಿಯೆ ತೊಂದರೆ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಹಾಗಾದರೆ ಹಾಲನ್ನು ಕುಡಿಯುವ ಸರಿಯಾದ ವಿಧಾನದ ಬಗ್ಗೆ ತಿಳಿಯೋಣ ಬನ್ನಿ.
ಆಹಾರ ಸೇವಿಸಿದ ತಕ್ಷಣ ಹಾಲನ್ನು ಸೇವಿಸುವುದು ಕೆಲವರು ಹಾಲನ್ನು ಬೆಳಗಿನ ಉಪಾಹಾರ ಸೇವಿಸಿದ ತಕ್ಷಣ ಸೇವಿಸುತ್ತಾರೆ ಅಥವಾ ರಾತ್ರಿ ಊಟವಾದ ತಕ್ಷಣ ಕುಡಿಯುತ್ತಾರೆ.ಇದು ತಪ್ಪು ,ಹಾಲನ್ನು ಒಂದು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ.ಇದು ಜೀರ್ಣವಾಗಲು ತುಂಬಾನೇ ಸಮಯ ಬೇಕಾಗುತ್ತದೆ.ನೀವು ಆಹಾರ ಸೇವಿಸಿದ ತಕ್ಷಣ ಹಾಲನ್ನು ಕುಡಿದರೆ ಇದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ ಇದರಿಂದ ಹಾಲು ಮತ್ತು ಆಹಾರ ಸರಿಯಾಗಿ ಪಚನವಾಗದೆ ಯಾವುದೇ ರೀತಿಯ ಪೋಷಕಾಂಶಗಳು ಸೇವಿಸಿದ ಆಹಾರದಿಂದಾಗಲಿ , ಹಾಲಿನಿಂದಾಗಲಿ ದೊರೆಯುವುದಿಲ್ಲ ಆದ್ದರಿಂದ ಊಟ ಸೇವಿಸಿದ ನಂತರ ಹಾಲು ಸೇವಿಸಲು 2 ಗಂಟೆಯ ಅಂತರವಿರಲೇಬೇಕು.ಇದರಿಂದ ಹಾಲಿನಲ್ಲಿರುವ ಪೋಷಕಾಂಶ ಸರಿಯಾದ ರೀತಿಯಲ್ಲಿ ನಮ್ಮ ದೇಹಕ್ಕೆ ಒದಗುತ್ತದೆ.
ಹಾಲನ್ನು ಬೇಕರಿ ತಿಂಡಿ ಅಥವಾ ಉಪ್ಪಿರುವ ಆಹಾರಗಳ ಜೊತೆ ಸೇವಿಸಬೇಡಿ -ಸಾಮಾನ್ಯವಾಗಿ ನಾವು ಈ ರೀತಿಯ ತಪ್ಪು ಮಾಡುತ್ತೇವೆ. ಹಾಲಿನ ಜೊತೆಗೆ ಮಿಕ್ಚರ್ , ಚಿಪ್ಸ್ ಗಳನ್ನು ಸೇವಿಸುತ್ತೇವೆ.ಸಾಕಷ್ಟು ಜನರು ಇದನ್ನು ಮಕ್ಕಳಿಗೂ ಕೊಡುತ್ತಾರೆ.ಅವರ ಉದ್ದೇಶ ಮಕ್ಕಳು ಹಾಲನ್ನು ಕುಡಿಯುವುದು ಅಷ್ಟೇ ಆಗಿರುತ್ತದೆ.ಎಷ್ಟೋ ಜನರು ತಿಳಿದುಕೊಳ್ಳುವುದು ಹಾಲು ಕುಡಿದರೆ ಸಾಕು ಪೋಷಕಾಂಶಗಳು ದೊರೆಯುತ್ತದೆ ಎಂದು.ಇದು ತಪ್ಪು , ಹಾಲು ಮತ್ತು ಉಪ್ಪು ವಿರುದ್ಧ ಗುಣವನ್ನು ಹೊಂದಿದೆ.ಇದನ್ನು ಯಾವುದೇ ಕಾರಣಕ್ಕೂ ಜೊತೆಗೆ ಸೇವಿಸಬಾರದು ಇದರಿಂದ ಹಾಲಿನಲ್ಲಿರುವ ಪೋಷಕಾಂಶಗಳು ನಷ್ಟವಾಗುವುದರ ಜೊತೆಗೆ ಮೊಡವೆ , ಸ್ಕಿನ್ ಅಲರ್ಜಿ , ಹೊಟ್ಟೆ ಕೆಡುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.
ಹಾಲಿಗೆ ಸಕ್ಕರೆಯನ್ನು ಬೆರೆಸಿ ಸೇವಿಸುವುದು -ಸಕ್ಕರೆಯನ್ನು ಸ್ಲೋ ಪಾಯ್ಸನ್ ಎಂದು ಕರೆಯಲಾಗುತ್ತದೆ.ಇಂತಹ ಸಕ್ಕರೆಯಿಂದ ದೂರವಿದ್ದರೆ ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು ಅದರಲ್ಲೂ ಹಾಲಿಗೆ ಸಕ್ಕರೆಯನ್ನು ಹಾಕಿದರೆ ಏನು ಲಾಭ ?ಇದರಿಂದ ಹಾಲಿನ ಪೋಷಕಾಂಶಗಳು ನಷ್ಟವಾಗುತ್ತದೆ.ಪೋಷಕಾಂಶ ರಹಿತ ಹಾಲನ್ನು ಕುಡಿದರೆ ಯಾವುದೇ ಲಾಭವಿಲ್ಲ.ದೇಹದ ತೂಕವು ಕೂಡ ಹೆಚ್ಚಾಗುತ್ತದೆ.ಅಷ್ಟಕ್ಕೂ ನಿಮಗೆ ಹಾಲಲ್ಲಿ ಸಿಹಿ ಅಂಶವನ್ನು ಸೇರಿಸಲೇ ಬೇಕೆಂದಿದ್ದರೆ ಜೇನು , ಬೆಲ್ಲ , ಒಣ ಖರ್ಜೂರ , ಕಲ್ಲು ಸಕ್ಕರೆಯನ್ನು ಸೇರಿಸಿ ಕುಡಿಯಿರಿ.
ಹಾಲನ್ನು ಯಾವುದೇ ಕಾರಣಕ್ಕೂ ಹಣ್ಣಿನ ಜೊತೆ ಸೇವಿಸಬಾರದು-ಅದರಲ್ಲೂ ನಿಂಬೆ ಹಣ್ಣು , ಕಿತ್ತಳೆ ಹಣ್ಣು ಮೊದಲಾದ ಹಣ್ಣುಗಳ ಸೇವನೆ ಮಾಡಿದ ನಂತರ ಅಥವಾ ಇವುಗಳನ್ನು ಸೇವಿಸಿದ ತಕ್ಷಣವೇ ಹಾಲನ್ನು ಕುಡಿಯಬೇಡಿ.ಇವೆರಡೂ ವಿರುದ್ಧ ಗುಣವನ್ನು ಹೊಂದಿದೆ,ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆ ಯಾವುದೇ ಹಣ್ಣು ಸೇವಿಸಿದ ತಕ್ಷಣ ಹಾಲು ಕುಡಿಯಬೇಡಿ.ಹಣ್ಣು ಸೇವಿಸಿದ ಒಂದು ಗಂಟೆಯ ನಂತರ ಹಾಲಿನ ಸೇವನೆ ಮಾಡಿದರೆ ಉತ್ತಮ.
ಬಹಳ ದಿನ ಸಂಸ್ಕರಿಸಬಹುದಾದ ಹಾಲನ್ನು ಕುಡಿಯಬೇಡಿ
ಟೆಟ್ರಾ ಪ್ಯಾಕ್ ಗಳಲ್ಲಿ ಮಾರಾಟವಾಗುವ ಹಾಲನ್ನು ಸೇವಿಸಬೇಡಿ.ಇದರಲ್ಲಿ ಸಾಕಷ್ಟು ಕೆಮಿಕಲ್ಸ್ ಗಳಿವೆ ಇದರಿಂದ ಯಾವುದೇ ರೀತಿಯ ಪೋಷಕಾಂಶ ದೊರೆಯುವುದಿಲ್ಲ.ಇದು ಕೆಮಿಕಲ್ ಗಳನ್ನು ಹೊಂದಿರುವ ಹಾಲು ಅಷ್ಟೇ. ಇಂತಹ ಹಾಲಿನಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು.
ಫ್ಲೇವರ್ಡ್ ಹಾಲನ್ನು ಕುಡಿಯಬೇಡಿ ಸಾಕಷ್ಟು ಜನರಿಗೆ ಸುವಾಸಿತ ಹಾಲನ್ನು ಕುಡಿಯುವ ಅಭ್ಯಾಸವಿರುತ್ತದೆ
ಅದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ಫ್ಲೇವರ್ಡ್ ಹಾಲನ್ನು ಹೆಚ್ಚಾಗಿ ಕುಡಿಯುತ್ತಾರೆ.ಇಂತಹ ಹಾಲಿನಲ್ಲಿ ಇರುವುದು ಕೆಮಿಕಲ್ಸ್ ಗಳು ಹಾಗೂ ಸಾಕಷ್ಟು ಸಕ್ಕರೆ ಆದ್ದರಿಂದ ಇಂತಹ ಹಾಲನ್ನು ಸೇವಿಸಬೇಡಿ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ ಇದರಿಂದ ತೂಕ ಅತಿಯಾಗಿ ಹೆಚ್ಚಾಗುತ್ತದೆ.
ಹಾಲನ್ನು ತಣ್ಣಗಾದ ಮೇಲೆ ಕುಡಿಯುವುದು ಹಾಲನ್ನು ಪೂರ್ತಿ ತಣ್ಣಗಾದ ಮೇಲೆ ಕುಡಿಯಲೇ ಬೇಡಿ.ಈ ರೀತಿ ಕುಡಿದರೆ ಕಫದ ಸಮಸ್ಯೆ ಉಂಟಾಗುವುದರ ಜೊತೆಗೆ ಇದು ಜೀರ್ಣವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಹಾಲನ್ನು ಉಗುರು ಬೆಚ್ಚಗಿರುವಾಗ ಕುಡಿದರೆ ಉತ್ತಮ.
ಇನ್ನು ಹಾಲಿನ ಜೊತೆ ಈ ಆಹಾರಗಳನ್ನು ಸೇವಿಸಲೇಬಾರದು.
ನಿಮ್ಮ ಆರೋಗ್ಯ ನೀವು ತಿನ್ನುವ ಆಹಾರಶೈಲಿಯಂತೆ ಇರುತ್ತದೆ ಎಂಬ ಮಾತಿದೆ.ನೀವು ಆರೋಗ್ಯವಾಗಿದ್ದನ್ನು ತಿಂದರೆ ಆರೋಗ್ಯ ಹೆಚ್ಚುವುದು, ಅನಾರೋಗ್ಯಕರ ಆಹಾರ ತಿಂದರೆ ಕಾಯಿಲೆಗಳು ಒಂದೊಂದೇ ಶುರುವಾಗುವುದು.ಇನ್ನು ಆರೋಗ್ಯಕರ ಆಹಾರಗಳನ್ನು ಕೂಡ ತಿನ್ನಲು ವಿಧಾನವಿದೆ.ಉದಾಹರಣೆಗೆ ಹಾಲು ಮತ್ತು ಮೊಸರು ಎರಡೂ ಆರೋಗ್ಯಕರ ಆಹಾರ ಆದರೆ ಜೊತೆಗೆ ಸೇವಿಸುವಂತಿಲ್ಲ. ಅದೇ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು, ಆದರೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ಹಾಲಿನ ಜೊತೆ ಸೇವಿಸುವುದು ಒಳ್ಳೆಯ ಆಯ್ಕೆ ಅಲ್ಲ.ಇಲ್ಲಿ ನಾವು ಹಾಲಿನ ಜೊತೆ ಯಾವ ಕಾಂಬಿನೇಷನ್ ಒಳ್ಳೆಯದಲ್ಲ ಎಂದು ತಿಳಿಸಲಿದ್ದೇವೆ.
ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ದಿನಕ್ಕೆ ಒಂದು ಅಥವಾ ಎರಡು ಲೋಟ ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಪ್ರಯೋಜನಗಳು ದೊರೆಯುತ್ತವೆ.ಮಕ್ಕಳಿಗೆ ದಿನದಲ್ಲಿ ಎರಡು ಲೋಟ ಹಾಲು ಕೊಡುವುದರಿಂದ ಅವರ ದೇಹಕ್ಕೆ ಅವಶ್ಯಕವಾದ ಪ್ರೊಟೀನ್ ಹಾಗೂ ಕ್ಯಾಲ್ಷಿಯಂ ದೊರೆಯುತ್ತದೆ.ಇನ್ನು ವಯಸ್ಸಾದಂತೆ ಕ್ಯಾಲ್ಷಿಯಂ ಕೊರತೆ ಉಂಟಾಗುತ್ತದೆ, ಇದರಿಂದ ಮೂಳೆ ಸವೆಯುವುದು, ಕೈ, ಕಾಲುಗಳಲ್ಲಿ ನೋವು ಮುಂತಾದ ಸಮಸ್ಯೆ ಕಂಡು ಬರುವುದು. ಆದ್ದರಿಂದ ವಯಸ್ಸು 50 ದಾಟಿದ ಬಳಿಕ ಕೂಡ ದಿನದಲ್ಲಿ 2 ಲೋಟ ಹಾಲು ತೆಗೆದುಕೊಳ್ಳುವುದು ಒಳ್ಳೆಯದು.ಆದರೆ ಹಾಲನ್ನು ತೆಗೆದುಕೊಳ್ಳುವಾಗ ಕೆಲವೊಂದು ಆಹಾರಗಳನ್ನು ಜೊತೆಗೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ.ಇನ್ನು ಯಾವ ಆಹಾರಗಳನ್ನು ಹಾಲಿನ ಜೊತೆ ತೆಗೆದುಕೊಳ್ಳಬಾರದು ಎಂದು ತಿಳಿಯೋಣ ಬನ್ನಿ.
ಹಾಲು ಮತ್ತು ಮೊಸರು ಒಟ್ಟಿಗೆ ತೆಗೆದುಕೊಳ್ಳಬೇಡಿ.
ಹಾಲಿನಿಂದಲೇ ಮೊಸರು ಮಾಡುವುದಾದರೂ ಹಾಲು ಹಾಗೂ ಮೊಸರನ್ನು ಜೊತೆಗೆ ತೆಗೆದುಕೊಳ್ಳಬಾರದು.ಹಾಲು ಮೊಸರು ಜೊತೆಗೆ ಸೇವಿಸಿದರೆ ಹೊಟ್ಟೆ ನೋವು, ಅಸಿಡಿಟಿ, ವಾಂತಿ ಮುಂತಾದ ಸಮಸ್ಯೆ ಕಂಡು ಬರಬಹುದು. ಆದ್ದರಿಂದ ಹಾಲು ಸೇವಿಸಿ ಕನಿಷ್ಠ 2 ಗಂಟೆಗಳಾದ ಬಳಿಕ ಮೊಸರನ್ನು ಸೇವಿಸಿ.ಆಯುರ್ವೇದದ ತಜ್ಞರು ವಿವರಿಸಿರುವ ಪ್ರಕಾರ, ಮೊಸರು ಹುಳಿ, ಭಾರ ಮತ್ತು ದೇಹದಲ್ಲಿ ಇರುವಂತಹ ಗ್ರಂಥಿಗಳಲ್ಲಿ ಸ್ರವಿಸುವಿಕೆಯನ್ನು ಅದು ಹೆಚ್ಚು ಮಾಡುವುದು. ಮೊಸರಿನಲ್ಲಿ ಇರುವಂತಹ ಈ ಗುಣಗಳು ಹಾಲಿನಲ್ಲಿ ಇರುವಂತಹ ಗುಣಗಳಿಗೆ ತುಂಬಾ ತದ್ವಿರುದ್ಧ ಆಗಿರುವುದು. ಇದರಿಂದಾಗಿ ಎರಡನ್ನು ಜತೆಯಾಗಿ ಸೇವನೆ ಮಾಡಬಾರದು ಎಂದು ಆಯುರ್ವೇದವು ಹೇಳುತ್ತದೆ.ಹುದುಗು ಬರುವಂತಹ ಯಾವುದೇ ಆಹಾರವನ್ನು ಹಾಲಿನೊಂದಿಗೆ ಸೇವನೆ ಮಾಡಬಾರದು ಎಂದು ಅವರು ತಿಳಿಸಿದ್ದಾರೆ. ಯಾಕೆಂದರೆ ಇದರಿಂದ ಇದು ದೇಹದಲ್ಲಿ ಕೋಶಗಳನ್ನು ಬ್ಲಾಕ್ ಮಾಡುವ ಮೂಲಕವಾಗಿ ಸೋಂಕು, ಹೊಟ್ಟೆಯ ಸಮಸ್ಯೆ ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು.
ಹಾಲಿನ ಜೊತೆ ಮತ್ತೊಂದು ಪ್ರೊಟೀನ್ ಆಹಾರ ಬೆರೆಸಿ ಸೇವಿಸಬೇಡಿ.
ನಾವೆಲ್ಲಾ ಸಾಮಾನ್ಯವಾಗಿ ಹಾಲಿನ ಜೊತೆ ಇತರ ಪ್ರೊಟೀನ್ ಪುಡಿ ಬೆರೆಸಿ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತೇವೆ. ಆದರೆ ನ್ಯೂಟ್ರಿಷಿಯನ್ ತಜ್ಞರು ಹಾಲಿನ ಜೊತೆ ಪ್ರೊಟೀನ್ ಪುಡಿ ಬೆರೆಸಿ ಕುಡಿಯುವುದು ಉತ್ತಮ ಆಯ್ಕೆಯಲ್ಲ ಎನ್ನುತ್ತಾರೆ.
ಆದರೆ ಯಾರು ಮೈ ತೂಕ ಹೆಚ್ಚಿಸಿಕೊಳ್ಳಬೇಕೆಂದು ಬಯಸುತ್ತಾರೋ ಅವರು ಹಾಲಿನ ಜೊತೆ ಪ್ರೊಟೀನ್ ಪುಡಿ ಬೆರೆಸಿ ಕುಡಿಯುವುದು ಒಳ್ಳೆಯದು.
ಆದರೆ ಎರಡು ಪ್ರೋಟಿನ್ ಒಟ್ಟಿಗೆ ಸೇವಿಸುವುದರಿಂಸ ಅಜೀರ್ಣ ಸಮಸ್ಯೆಯೂ ಕಾಡಬಹುದು.ಕೆಲವರಿಗೆ ಹಾಲಿನ ಜೊತೆ ಪ್ರೊಟೀನ್ ಪುಡಿ ಬೆರೆಸಿ ಕುಡಿದರೆ ಅಜೀರ್ಣ ಸಮಸ್ಯೆ ಕಾಡಬಹುದು, ಅಂಥವರು ಪ್ರೊಟೀನ್ ಪುಡಿಯನ್ನು ನೀರಿನಲ್ಲಿ ಕಲೆಸಿ ಕುಡಿಯಿರಿ, ಹಾಲು ಹಾಗೂ ಪ್ರೊಟೀನ್ ಆಹಾರ ತೆಗೆದುಕೊಳ್ಳುವಾಗ ಕನಿಷ್ಠ ಎರಡು ಗಂಟೆ ಅಂತರವಿರಲಿ.
ಮೀನು ತಿಂದ ಮೇಲೆ ಹಾಲು ಕುಡಿಯಬೇಡಿ
ಮೀನು ತಿಂದ ಮೇಲೆ ಹಾಲು ಕುಡಿಯದೇ ಇದ್ದರೆ ಒಳ್ಳೆಯದು. ಕುಡಿಯುವುದಾದರೂ ತುಂಬಾ ಹೊತ್ತು ಕಳೆದ ಮೇಲೆ ಕುಡಿಯಿರಿ, ಇಲ್ಲದಿದ್ದರೆ ಅಜೀರ್ಣ ಸಮಸ್ಯೆ ಉಂಟಾಗಿ ವಾಂತಿ, ಬೇಧಿ ಮುಂತಾದ ಸಮಸ್ಯೆ ಉಂಟಾಗಬಹುದು. ಮೀನು ಮತ್ತು ಮೊಸರು ಸೇವಿಸಬಹುದು .
ಹಾಲು ಕುಡಿದ ಬಳಿಕ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಡಿ.
ಹಾಲು ಕುಡಿದ ಬಳಿಕ ಸಿಟ್ರಸ್ ಹಣ್ಣುಗಳನ್ನು ತಿನ್ನಬೇಡಿ.ಹಾಲು ತಿಂದ ತಕ್ಷಣ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ ಪಾನಕ ಮುಂತಾದವುಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಹಾಲು ಒಡೆದು ಹುಳಿಯಾಗಿ ಅಸಿಡಿಟಿ ಸಮಸ್ಯೆ ಉಂಟಾಗುವುದು.ಆಯುರ್ವೇದ ಕೂಡ ಹಾಲು ಹಾಗೂ ಹಣ್ಣುಗಳನ್ನು ಪ್ರತ್ಯೇಕವಾಗಿ ಸೇವಿಸಲು ಸಲಹೆ ನೀಡುತ್ತದೆ. ಆದರೆ ಕೆಲವೊಂದು ಸಿಹಿ ಹಣ್ಣುಗಳಾದ ಮಾವಿನಹಣ್ಣು, ಬೆಣ್ಣೆಹಣ್ಣು, ಅಂಜೂರ, ಖರ್ಜೂರ ಈ ರೀತಿಯ ಹಣ್ಣುಗಳನ್ನು ಹಾಲಿನ ಜೊತೆ ಸೇವಿಸಬಹುದು.
ಇನ್ನು ಹಾಲು ಜೊತೆಗೆ ಅದಕ್ಕೆ ಹೊಂದದ ಆಹಾರ ವಸ್ತುಗಳನ್ನು ಸೇವಿಸುವುದರಿಂದ ಶೀತ, ಕೆಮ್ಮು, ತುರಿಕೆ, ಅಲರ್ಜಿ ಮುಂತಾದ ಸಮಸ್ಯೆ ಕೂಡ ಉಂಟಾಗಬಹುದು.ಆದ್ದರಿಂದ ಹಾಲಿನ ಜೊತೆ ಇತರ ಪ್ರೊಟೀನ್ ಹಾಗೂ ಹುಳಿ , ಮೀನಿನ ಆಹಾರವನ್ನು ಸೇವಿಸಬೇಡಿ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಧನ್ಯವಾದಗಳು.