ವರಮಹಾಲಕ್ಷ್ಮಿ ಹಬ್ಬದ ದಿನ ಕಳಸವನ್ನು ಪ್ರತಿಷ್ಠಾಪನೆ ಮಾಡುವಾಗ ಯಾವ ಯಾವ ತಪ್ಪುಗಳನ್ನು ಮಾಡಬಾರದು ಜೊತೆಗೆ ಯಾವ ರೀತಿ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು ಮತ್ತು ಯಾವ ರೀತಿ ಕಳಸವನ್ನು ಇಡಬಾರದು ಎಂದು ತಿಳಿಸಿಕೊಡುತ್ತೇವೆ.
ವರಮಹಾಲಕ್ಷ್ಮಿ ಹಬ್ಬ ಅಥವಾ ವರಮಹಾಲಕ್ಷ್ಮಿ ವ್ರತದಲ್ಲಿ ಮುಖ್ಯವಾದ ಪಾತ್ರ ಎಂದರೆ ಅದು ಕಳಸ. ಕಳಸದ ಒಳಗೆ ಹಾಕುವ ವಸ್ತು ಮತ್ತು ಪ್ರತಿಷ್ಟಾಪನೆ ಮಾಡುವ ಕಳಸಕ್ಕೆ ತುಂಬಾನೇ ಮಹತ್ವವಿದೆ. ಆದಷ್ಟು ಕಳಸವನ್ನು ಯಾವುದೋ ಲೋಹದಿಂದ ಮಾಡಿದ ಕಳಸವನ್ನು ಇಡಬಾರದು. ಪ್ಲಾಸ್ಟಿಕ್, ಸ್ಟೀಲ್ ಅನ್ನು ಕಳಸ ಪ್ರತಿಷ್ಟಾಪನೆ ಗೆ ಬಳಸಬಾರದು. ಕಳಸ ಸ್ಥಾಪನೆಗೆ ತುಂಬಾ ಶ್ರೇಷ್ಠ ಎಂದರೆ ತಾಮ್ರದ ಚೊಂಬು ಅಥವಾ ಬೆಳ್ಳಿ ಚೊಂಬು. ಹಿತ್ತಾಳೆ ಬಳಸಿದರು ತೊಂದರೆ ಇಲ್ಲಾ. ಅದರೆ ಯಾವುದೇ ಕಾರಣಕ್ಕೂ ಸ್ಟೀಲ್ ಅನ್ನು ಬಳಸಬಾರದು.
ಒಂದೇ ಬಿಂದಿಗೆ ಇಟ್ಟು ಕಳಸವನ್ನು ಪ್ರತಿಷ್ಟಾಪನೆ ಮಾಡಬೇಕು. ಪೀಠದ ಮೇಲೆ ಅಷ್ಟದಳ ಪದ್ಮ ರಂಗೋಲಿ ಹಾಕಿ ಎಲೆ ಅಥವಾ ತಟ್ಟೆ ಇಟ್ಟು ಅಕ್ಕಿ ಹಾಕಿ ರಂಗೋಲಿ ಬರೆದು ಕಳಸವನ್ನು ಇಟ್ಟು ಕಳಸಕ್ಕೆ ನೀರು ಹಾಕಬೇಕು. ಇದರ ಒಳಗೆ ಹಾಕುವ ವಸ್ತುಗಳನ್ನು ಹಾಕಿ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು.
ಇನ್ನು ಪೂಜೆ ಹಿಂದಿನ ದಿನ ಎಲ್ಲವನ್ನು ತಯಾರು ಮಾಡಿ ಇಡಬೇಡಿ. ವರಮಹಾಲಕ್ಷ್ಮಿ ಹಬ್ಬದ ದಿನ ಹಬ್ಬವನ್ನು ಮಾಡಬೇಕು. ಹಿಂದಿನ ದಿನ ಮಾಡಿದರೆ ಏನು ಉಪಯೋಗ ಇಲ್ಲಾ. ಆದಷ್ಟು ಶುಕ್ರವಾರದ ದಿನಾ ಬ್ರಾಹ್ಮೀ ಮುಹೂರ್ತದಲ್ಲಿ ಕಳಸಕ್ಕೆ ಹಾಕುವ ವಸ್ತುವನ್ನು ಹಾಕಿ ಕಳಸವನ್ನು ಪ್ರತಿಷ್ಟಪಾನೇ ಮಾಡಿದರೆ ಅದು ಶ್ರೇಷ್ಠ ಅನಿಸಿಕೊಳ್ಳುತ್ತದೆ.