ಆಧುನಿಕ ಜೀವನ ಶೈಲಿಯಲ್ಲಿ ನಿದ್ರಾಹೀನತೆಯಿಂದಾಗಿ ಅನೇಕರು ಬಳಲುತ್ತಿದ್ದಾರೆ. ಮನುಷ್ಯನ ದೇಹಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ವಿಶ್ರಾಂತಿಯ ಅಗತ್ಯವಿದೆ. ಆದರೆ ನಿದ್ರಾಹೀನತೆಯಿಂದ ಬಳಲುತ್ತಿರುವವರು ಇಷ್ಟು ನಿದ್ರೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅನೇಕರು ಗಂಭೀರ ಆರೋಗ್ಯ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ನೀವು ಕೂಡಾ ಇಂತಹವರಲ್ಲಿ ಒಬ್ಬರಾಗಿದ್ದರೆ, ಈ ಸಲಹೆಗಳು ನಿಮಗೆ ನಿದ್ರೆ ಬರುವಂತೆ ಸಹಾಯ ಮಾಡುತ್ತವೆ.
1. ಅರಿಶಿನದ ಹಾಲು: ಈ ಹಾಲು ಆರೋಗ್ಯಕರ ಪೋಷಕಾಂಶಗಳಿಂದ ತುಂಬಿದ್ದು ಇದು ಸ್ನಾಯುಗಳನ್ನು ಗುಣಪಡಿಸಲು, ಬೆಳೆಯಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೆಚ್ಚಗಿನ ಹಾಲಿನಲ್ಲಿ ಟ್ರಿಪ್ಟೊಫಾನ್, ಅಮಿನೋ ಆಮ್ಲಗಳಿದ್ದು ಇವು ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ನಿಮಗೆ ಒಳ್ಳೆಯ ನಿದ್ರೆ ಬರುವಂತೆ ಮಾಡುತ್ತದೆ.
2. ಬಾದಾಮಿ ಹಾಲು: ಹಾಲು ಸಿರೊಟೋನಿನ್ನ್ನು ಉತ್ಪಾದಿಸಲು ಸಹಾಯ ಮಾಡುವುದರಿಂದ ಇದು ಆತಂಕ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಹಾಲಿಗೆ ಸ್ವಲ್ಪ ಬಾದಾಮಿ ಸೇರಿಸುವುದರಿಂದ ನಿಮ್ಮ ಮೆದುಳು ಮತ್ತು ದೇಹವನ್ನು ವಿಶ್ರಾಂತ ಸ್ಥಿತಿಗೆ ಕೊಂಡೊಯ್ಯಲು ಇದು ಸಹಾಯ ಮಾಡುತ್ತದೆ.
3. ಅಶ್ವಗಂಧ ಚಹಾ: ಅಶ್ವಗಂಧವು ಟ್ರೈಮಿಥಿಲೀನ್ ಗ್ಲೈಕೋಲ್ನ್ನು ಹೊಂದಿದ್ದು, ಇದು ನಿಮ್ಮ ದೇಹದ ಆಯಾಸವನ್ನು ನಿಯಂತ್ರಿಸಿ ನಿಮ್ಮ ನಿದ್ರೆಯನ್ನು ಉತ್ತೇಜಿಸುತ್ತದೆ. ಜನರು ರಾತ್ರಿಯಲ್ಲಿ ಚಹಾ ಅಥವಾ ಹಾಲಿನ ಜತೆಗೆ ಸ್ವಲ್ಪ ಪ್ರಮಾಣದ ಅಶ್ವಗಂಧದ ಪುಡಿಯನ್ನು ಸೇವಿಸುವುದನ್ನು ಹೆಚ್ಚಾಗಿ ಕಾಣಬಹುದಾಗಿದೆ.
4. ಕೇಸರಿ ನೀರು: ಪ್ರಪಂಚದ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಕೇಸರಿ ಕೂಡ ಒಂದು. ಇದರ ಒಂದು ಅಥವಾ ಎರಡು ಕೇಸರಿನ ಎಳೆಗಳು ನಿಮಗೆ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಒಂದು ಲೋಟ ನೀರಿನಲ್ಲಿ ಕೇಸರಿಯ ಕೆಲವು ಎಳೆಗಳನ್ನು ಸೇರಿಸಿ ಕುಡಿದರೆ ನಿದ್ರಾಹೀನತೆಗೆ ಇದು ಚಿಕಿತ್ಸೆಯನ್ನು ನೀಡುವುದರ ಜತೆಗೆ ನಿದ್ರೆಯ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ.
5. ಜಾಯಿಕಾಯಿ ನೀರು: ಆಯುರ್ವೇದದ ಪ್ರಕಾರ ಜಾಯಿಕಾಯಿ ನಿದ್ರೆಯನ್ನು ಉಂಟುಮಾಡಲು ಮತ್ತು ಒತ್ತಡವನ್ನು ನಿವಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಚಿಟಿಕೆ ಜಾಯಿಕಾಯಿ ಪುಡಿಯನ್ನು ಸೇರಿಸಿ ಕುಡಿದರೆ ಉತ್ತಮ ನಿದ್ರೆ ಬರುತ್ತದೆ. ಕೆಲವರು ಇದನ್ನು ಬೆಚ್ಚಗಿನ ಹಾಲಿಗೆ ಸೇರಿಸಿ ಮಲಗುವ ಮುನ್ನ ಕುಡಿಯುತ್ತಾರೆ.
ಮೇಲೆ ತಿಳಿಸಿದ ಪ್ರತಿಯೊಂದು ಪಾನೀಯವು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಅವುಗಳನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ನಕಾರಾತ್ಮಕ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು. ಆದ್ದರಿಂದ, ನೀವು ತಜ್ಞರನ್ನು ಸಂಪರ್ಕಿಸಿ ಮತ್ತು ವಿಶ್ರಾಂತಿ ಪಡೆಯಲು ಮತ್ತು ರಾತ್ರಿಯ ನಿದ್ರೆಯನ್ನು ಹೊಂದಲು ಈ ಪಾನೀಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವಂತೆ ಸಲಹೆ ನೀಡುತ್ತೇವೆ.