ಕೈಲಾಸ ಪರ್ವತದ ಪೌರಾಣಿಕ ಹಿನ್ನೆಲೆಯ ಬಗ್ಗೆ ಗೊತ್ತಿರುತ್ತದೆ ಆದರೆ ಇಂದಿನ ನಮ್ಮ ಲೇಖನದಲ್ಲಿ ಈ ಪರ್ವತದ ವೈಜ್ಞಾನಿಕ ಹಾಗೂ ವಿಸ್ಮಯಕಾರಿ ಅಂಶಗಳ ಬಗ್ಗೆ ತಿಳಿಸಲಿದ್ದೇವೆ.
ಇನ್ನು ಈ ಬಗ್ಗೆ ಪಾಶ್ಚಿಮಾತ್ಯ ಸಂಶೋಧಕರು ಅನೇಕ ಸಂಶೋಧನೆಗಳನ್ನು ನಡೆಸಿದ ಮೇಲೆ ಈ ಪರ್ವತದ ವಿಸ್ಮಯಕಾರಿ ಅಂಶಗಳ ಬಗ್ಗೆ ಜಗತ್ತಿನ ಮುಂದೆ ಹೇಳುತ್ತಿದ್ದಾರೆ. ಹಾಗಾದರೆ ಅಲ್ಲಿರುವ ಅದ್ಭುತ ಏನು ತಿಳಿಯೋಣ ಬನ್ನಿ..
ಮೌಂಟ್ ಕೈಲಾಶ್ , ಮೌಂಟ್ ಮೇರು ಸುಮೇರು , ಕೈಲಾಸ ಪರ್ವತ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುತ್ತಿವುದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ,ಅದರಲ್ಲೂ ಈ ಪರ್ವತ ಭೂಮಿಯ ಮಧ್ಯ ಭಾಗದಲ್ಲಿದೆ ಅನ್ನೋದು ಸಂಶೋಧಕರು ಕಂಡು ಹಿಡಿದಿರುವ ಸತ್ಯ ,ಹಾಗಾಗಿ ಇದನ್ನು ಆ್ಯಕ್ಸಿಸ್ ಮುಂಡಿ ಅಂತ ಕರೆಯಲಾಗುತ್ತದೆ.
ಹಾಗಂದ್ರೆ ಭೂಮಿಯ ಮಧ್ಯ ಭಾಗದ ಸ್ಥಳ ಅಥವಾ ಸ್ವರ್ಗಕ್ಕೂ , ಭೂಮಿಗೂ ನಡುವೆ ಇರುವ ಸೇತುವೆ ಅಂತ ಅರ್ಥ.
ಅಷ್ಟೇ ಅಲ್ಲದೆ ಈ ಪರ್ವತ ಭೂಮಧ್ಯರೇಖೆಯಲ್ಲಿರುವುದು ಕೂಡ ಸಾಕಷ್ಟು ಅಧ್ಯಯನಗಳಿಂದ ದೃಢಪಟ್ಟಿದೆ.ಈ ಕೈಲಾಸ ಪರ್ವದಿಂದ ಸರಿಯಾಗಿ 6,666 ಕಿಲೋಮೀಟರುಗಳ ದೂರದಲ್ಲಿ ಬ್ರಿಟನ್ ನಲ್ಲಿರುವ ವಿಸ್ಮಯಕಾರಿ ಸ್ಟೋನ್ ಹ್ಯಾಚ್ ಪ್ರದೇಶ ಇದೆ ,ಅಲ್ಲಿಂದ ಸರಿಯಾಗಿ 6,666 ಕಿಲೋ ಮೀಟರ್ಗಳಲ್ಲಿ ನಾರ್ತ್ ಪೋಲ್ ಸಿಗುತ್ತದೆ.
ಇನ್ನು ಸೌತ್ ಪೋಲ್ ಈ ಪರ್ವತದಿಂದ 13,332 ಕಿಲೋಮೀಟರ್ ದೂರದಲ್ಲಿದೆ.ಇದೆಲ್ಲವನ್ನು ನೋಡಿದಾಗ ಈ ಪ್ರದೇಶ ಭೂಮಿಯ ಮಧ್ಯ ಭಾಗದಲ್ಲಿದೆ ಎನ್ನುವುದು ಸ್ಪಷ್ಟವಾಗುತ್ತದೆ.ನಿಮಗೆ ಹೇಳಿದರೆ ಆಶ್ಚರ್ಯ ಆಗಬಹುದು ,ಕೈಲಾಸ ಪರ್ವತ ಅಥವಾ ಮೇರು ಪರ್ವತದ ಬಗ್ಗೆ ನಮ್ಮ ರಾಮಾಯಣ ಮಹಾಭಾರತಗಳಲ್ಲಿ ಕೂಡ ಉಲ್ಲೇಖ ಇದೆ ಅದೆಲ್ಲಕ್ಕಿಂತ ಹೆಚ್ಚಾಗಿ ಸುಮಾರು 2.5 ಸಾವಿರ ವರ್ಷಗಳ ಹಿಂದೆ ರಚಿಸಲ್ಪಟ್ಟ ಗ್ರಂಥ ಅಂತ ಪಾಶ್ಚಿಮಾತ್ಯ ರಿಂದಲೇ ನಂಬಲ್ಪಟ್ಟ 14 ವರ್ಷಗಳ ಹಿಂದಿನ ಗ್ರಂಥ ಅಂತ ಭಾರತೀಯರು ನಂಬುವ ಸೂರ್ಯ ಸಿದ್ಧಾಂತ ಎನ್ನುವ ಖಗೋಳ ವಿಜ್ಞಾನದ ಗ್ರಂಥದಲ್ಲಿ ಈ ಪರ್ವತದ ಉಲ್ಲೇಖ ಇದೆ.
ಅದರಲ್ಲಿ ಕೇವಲ ಪರ್ವತದ ಉಲ್ಲೇಖ ಅಷ್ಟೇ ಅಲ್ಲ ಇದು ಭೂಮಂಡಲದ ಮಧ್ಯಭಾಗದಲ್ಲಿದೆ ಅನ್ನೋದನ್ನು ಆ ಗ್ರಂಥದ ಶ್ಲೋಕ ವೊಂದರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
“ಅನೇಕರತ್ನ ನಿಚಯೋ
ಜಾಂಬೂನಾದ ಮೇಯೊಗಿರಿಃ
ಭೂಗೋಳ ಮಧ್ಯಾಗೋ
ಮೇರುರುಭಯತ್ರ ವಿನಿಗ್ರತಃ”
ಅಂದರೆ ವಿವಿಧ ರತ್ನಗಳು ಹಾಗೂ ಚಿನ್ನದಿಂದ ಕೂಡಿದ ಮೇರು ಪರ್ವತ ಜಂಬೂ ದ್ವೀಪದಲ್ಲಿ ಭೂಗೋಳದ ಮಧ್ಯಭಾಗದಲ್ಲಿದೆ ಅಂತ ಅರ್ಥ.ಸಾವಿರಾರು ವರ್ಷಗಳ ಹಿಂದೆನೇ ಮೇರು ಪರ್ವತವಿರುವ ಸ್ಥಳ ಇಡೀ ಭೂಮಂಡಲದ ಮಧ್ಯ ಭಾಗ ಅಂತ ನಮ್ಮ ಭಾರತೀಯ ಋಷಿಗಳು ಹೇಳಿದ್ರು ಅಂದ್ರೆ ಅವರ ಜ್ಞಾನಕ್ಕೆ ಸರಿಸಾಟಿಯಾದದ್ದು ಬೇರೇನಾದರೂ ಇರುವುದಕ್ಕೆ ಸಾಧ್ಯವೆ ಇಲ್ಲ.
ಇನ್ನು ಈ ಪರ್ವತ 21,778 ಅಡಿ ಎತ್ತರ ಇದೆ ಅಂತ ಹೇಳಲಾಗುತ್ತದೆ ಅಂದರೆ ಮೌಂಟ್ ಎವರೆಸ್ಟ್ ಗಿಂತಲೂ ಸುಮಾರು 7,000 ಅಡಿಗಳಷ್ಟು ಕಡಿಮೆ ಎತ್ತರದಲ್ಲಿದೆ ಕೈಲಾಸ ಪರ್ವತ.ಹಾಗಿದ್ದರೂ ಕೂಡ ಈ ಪರ್ವತವನ್ನು ಮಿಲರೇಪ ಅನ್ನೋ ಬೌದ್ಧ ಬಿಕ್ಕು ವನ್ನು ಹೊರತುಪಡಿಸಿದರೆ ಇನ್ಯಾರು ಇವತ್ತಿನವರೆಗೆ ಹತ್ತುವುದಕ್ಕೆ ಸಾಧ್ಯವಾಗಿಲ್ಲ.ಈ ಮಿಲರೇಪ ಬಗ್ಗೆ ಕೂಡ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಅವರು ಪರ್ವತವನ್ನು ಏರಿದರು ಆದ್ರೆ ಹಿಂತಿರುಗಿ ಬಾರದೆ ದೈವತ್ವವನ್ನು ಪಡ್ಕೊಂಡ್ರು ಎನ್ನುವ ವಾದ ಕೂಡ ಇದೆ ಆದ್ದರಿಂದ ಮಿಲರೇಪ ಬಿಟ್ಟರೆ ಇನ್ಯಾರಿಗೂ ಈ ಪರ್ವತವನ್ನು ಏರುವುದಕ್ಕೆ ಸಾಧ್ಯವಾಗಿಲ್ಲ.
ಹಾಗಾದರೆ ಇಲ್ಲಿರುವ ವಿಸ್ಮಯ ಏನು ?ಈ ಬಗ್ಗೆ ಸಂಶೋಧನೆಯನ್ನು ಶುರು ಮಾಡಿದ್ದು ರಷ್ಯಾದ ವಿಜ್ಞಾನಿ ಡಾಕ್ಟರ್ ಆರ್ನೆಸ್ಟ್ ಮರ್ಶಿವ್.ಈ ಆರ್ನೆಸ್ಟ್ ಮರ್ಶಿವ್ ಕೈಲಾಸ ಪರ್ವತದ ಬಗ್ಗೆ ಅಧ್ಯಯನ ಮಾಡಬೇಕು ಅಂತ ಸಾಕಷ್ಟು ದಿನಗಳ ಕಾಲ ಈ ಪರ್ವತದ ಬಳಿ ಉಳಿದುಕೊಂಡಿದ್ರು ,ಇವರಿಗೆ ಕೈಲಾಸ ಪರ್ವತದ ಬಗ್ಗೆ ಕುತೂಹಲ ಮೂಡೋದಿಕ್ಕೆ ರಷ್ಯಾದ ಸಾಕಷ್ಟು ಸಂಶೋಧಕರು ಕಾರಣ.
ಅದ್ಯಾಕೋ ಗೊತ್ತಿಲ್ಲ ಈ ಪರ್ವತಕ್ಕೂ ರಷ್ಯಾದ ಸಂಶೋಧಕರಿಗೂ ಸಾಕಷ್ಟು ನಂಟಿದೆ .ನಿಮಗೆ ಗೊತ್ತಿರಲಿ ಈ ಕೈಲಾಸ ಪರ್ವತದ ಬಗ್ಗೆ ಇದುವರೆಗೆ ನಡೆದಿರುವ ಸಂಶೋಧನೆಗಳಲ್ಲಿ ಸಿಂಹ ಪಾಲನ್ನು ಪಡೆಯುವುದು ರಷ್ಯಾದವರೇ ಅದರಲ್ಲೂ ನಿಕೋಲಸ್ ರೋರಿಚ್ ಕಲಾವಿದ ಈ ಕೈಲಾಸ ಪರ್ವತವನ್ನು ಅತ್ಯದ್ಭುತವಾಗಿ ತಮ್ಮ ಕುಂಚದಿಂದ ಚಿತ್ರಿಸಿದ್ದಾರೆ. ಈ ಚಿತ್ರ ಇಡೀ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದ್ದಷ್ಟೇ ಅಲ್ಲದೆ ಕೈಲಾಸ ಪರ್ವತದ ಬಗೆಗಿನ ಆಸಕ್ತಿಯನ್ನು ಹೆಚ್ಚು ಮಾಡಿದೆ.
ರೋರಿಚ್ ಅವರ ಚಿತ್ರದ ಪ್ರಭಾವ ಕೂಡ ಮರ್ಶಿವ್ ಮೇಲೆ ಇತ್ತು ಅಂತ ಹೇಳಲಾಗುತ್ತದೆ.ರೋರಿಚ್ ನಂಬಿಕೆಯ ಪ್ರಕಾರ ಈ ಕೈಲಾಸ ಪರ್ವತ ಭಾರತೀಯರು ನಂಬುವ ಶಾಂಬಾಲಾ ಪ್ರದೇಶ.ಈ ಶಾಂಬಾಲ ಕಲ್ಕಿಯ ಹುಟ್ಟಿಗೆ ಕಾರಣವಾಗುವ ಪ್ರದೇಶ ಅಂತ ಪುರಾಣಗಳು ಹೇಳುತ್ತವೆ ಆದರೆ ರೋರಿಚ್ ರ ಈ ಸಿದ್ಧಾಂತವನ್ನು ಹೆಚ್ಚು ಜನ ಒಪ್ಪಲಿಲ್ಲ ಯಾಕೆಂದರೆ ಇದುವರೆಗೆ ಕೈಲಾಸ ಪರ್ವತ ಅಂದ್ರೆ ಅದು ಪರಶಿವನ ಆವಾಸ ಸ್ಥಾನ ಅಂತಲೇ ಜನ ನಂಬಿದ್ದಾರೆ.
ಹೀಗೆ ರೋರಿಚ್ ಇಷ್ಟೊಂದು ಭಿನ್ನವಾಗಿ ವರ್ಣಿಸಿರುವ ಕೈಲಾಸ ಪರ್ವತದ ಬಗ್ಗೆ ಮರ್ಶಿವ್ ಗೆ ಸಾಕಷ್ಟು ಕುತೂಹಲ ಹುಟ್ಟಿತ್ತುಆ ನಂತರ ಅವರು ರಷ್ಯಾದ ಪರ್ವತಾರೋಹಿಗಳು ಹಂಚಿಕೊಂಡಿದ್ದ ಅಭಿಪ್ರಾಯಗಳನ್ನು ಸಂಗ್ರಹಿಸುವುದಕ್ಕೆ ಶುರು ಮಾಡಿದರು.ಆಗಲೇ ನೋಡಿ ರಷ್ಯಾದ ಸಂಶೋಧಕರಿಗೆ ಈ ಕೈಲಾಸ ಪರ್ವತದಲ್ಲಿ ಅಡಗಿರುವ ಅದ್ಭುತ ಅನುಭವಗಳ ಅನಾವರಣ ಆಗುವುದು.
ಅದರಲ್ಲೂ ಸೈಬೀರಿಯಾದ ಪರ್ವತಾರೋಹಿ ಒಬ್ಬ ಹಂಚಿಕೊಂಡ ಅನುಭವ ಮರ್ಶಿವ್ ರನ್ನು ಬೆಚ್ಚಿ ಬೀಳಿಸಿತ್ತು ಅದೇನೆಂದರೇ ಆ ಪರ್ವತಾರೋಹಿ ತನ್ನ ತಂಡದೊಂದಿಗೆ ಕೈಲಾಸ ಪರ್ವತವನ್ನು ಹತ್ತುವುದಕ್ಕೆ ಪ್ರಯತ್ನ ಪಟ್ಟನಂತೆ ಆದರೆ ಅಷ್ಟೊತ್ತಿಗಾಗಲೇ ಮತ್ತೊಂದು ತಂಡ ಕೈಲಾಸ ಪರ್ವತದ ಒಂದು ನಿರ್ದಿಷ್ಟ ಪ್ರದೇಶವನ್ನು ಮುಟ್ಟಿತ್ತಂತೆ ,ಅಲ್ಲಿಂದ ಇನ್ನಷ್ಟು ಮೇಲಕ್ಕೆ ಹೋಗುವುದಕ್ಕೆ ಅವರಿಗೆ ಸಾಧ್ಯ ಆಗದೆ ಅವರೆಲ್ಲ ಅಲ್ಲಿಂದ ವಾಪಸ್ ಬರ್ತಿದ್ದರಂತೆ.
ಈ ಹಂತದಲ್ಲಿ ಗೊತ್ತಾದ ವಿಚಾರ ಏನು ಅಂದ್ರೆ ಕೈಲಾಸ ಪರ್ವತವನ್ನು ನಿರ್ದಿಷ್ಟ ಜಾಗದವರೆಗೂ ಏರಿದ್ದ ಆ ಪರ್ವತ ಪರ್ವತಾರೋಹಿಗಳ ವಯಸ್ಸು ಇದ್ದಕಿದ್ದ ಹಾಗೆ ಹೆಚ್ಚಾಗಿಬಿಟ್ಟಿತ್ತಂತೆ ಅದರಲ್ಲೂ ಕೆಲವರ ವಯಸ್ಸು ಸುಮಾರು ಹತ್ತಾರು ವರ್ಷಗಳ ಕಾಲ ಮುಂದಕ್ಕೆ ಹೋದ ಹಾಗೆ ಕಾಣ್ತಿತ್ತು ಅಂತ ಆ ಪರ್ವತಾರೋಹಿ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾನೆ.
ಆ ನಂತರದ ಕೆಲವೇ ವರ್ಷಗಳಲ್ಲಿ ಅವರು ವಯಸ್ಸಾಗಿ ಸಾವನ್ನಪ್ಪಿದ ಬಗ್ಗೆ ಸೈಬೀರಿಯಾದ ಪರ್ವತಾರೋಹಿ ಮರ್ಶಿವ್ ಗೆ ತಿಳಿಸುತ್ತಾರೆ.ಅಲ್ಲಿಗೇ ಮರ್ಶಿವ್ ಗೆ ಕೈಲಾಸ ಪರ್ವತದ ಬಗ್ಗೆ ಇದ್ದ ಕುತೂಹಲ ಇನ್ನಷ್ಟು ಹೆಚ್ಚಾಗುತ್ತದೆ.
ಕೈಲಾಸ ಪರ್ವತದಲ್ಲಿ ನಿಮ್ಮ ಉಗುರುಗಳು ವೇಗವಾಗಿ ಬೆಳೆಯುತ್ತವೆ , ಕೂದಲು ಬೇಗ ಬೆಳೆಯುತ್ತದೆ , ನಿಮ್ಮ ವಯಸ್ಸು ಹೆಚ್ಚಾಗುತ್ತದೆ , ಚರ್ಮ ಬೇಗ ಸಿಕ್ಕಿಬಿಡುತ್ತದೆ , ದೇಹ ನಿತ್ರಾಣಗೊಳ್ಳುತ್ತದೆ.
ಇದೆ ಅಲ್ವಾ ಆಶ್ಚರ್ಯ ಅಂದ್ರೆ.
ಈ ವಿಚಾರಗಳೆಲ್ಲ ಗೊತ್ತಾಗಿ ಮರ್ಶಿವ್ ಏನಾದ್ರೂ ಮಾಡಿ ಕೈಲಾಸ ಪರ್ವತದ ಬಗೆಗಿನ ಮಿಸ್ಟರಿಯನ್ನು ಕಂಡುಹಿಡಿಬೇಕು ಅಂತ ಹೊರಡುತ್ತಾರೆ ಆದರೆ ಅವರ ತಂಡ ಟಿಬೆಟ್ ಅನ್ನು ಮುಟ್ಟಿ ಅಲ್ಲಿಂದ ಕೈಲಾಸ ಪರ್ವತದ ಅಡಿಗೆ ಬಂದು ನಿಲ್ಲುತ್ತೆ.ಅಲ್ಲಿಂದ ಮುಂದಡಿ ಇಡುವ ಸಂಶೋಧಕರ ತಂಡಕ್ಕೆ ಅಲ್ಲಿ ಅದ್ಭುತ ಎನಿಸುವ ನಿರ್ಮಾಣಗಳು ಕಾಣಸಿಗುತ್ತವೆ.ಹಾಗಾಗಿ ಆ ತಂಡ ಇಡೀ ಜಗತ್ತೇ ನಿಬ್ಬೆರಗಾಗಿಸುವಂತ ಮಾಹಿತಿಯೊಂದನ್ನು ಹೊರಗಿಡುವಲ್ಲಿ ಯಶಸ್ವಿಯಾಯ್ತು.
ಅದೇನೆಂದರೆ ಈ ಕೈಲಾಸ ಪರ್ವತ ಪ್ರಾಕೃತಿಕವಾಗಿ ನಿರ್ಮಾಣ ಆಗಿರುವುದಿಲ್ಲ ಬದಲಿಗೆ ಇದು ಮಾನವ ನಿರ್ಮಿತಾ ಅಂತ ಮರ್ಶಿವ್ ಪ್ರತಿಪಾದಿಸುತ್ತಾರೆ ಅಷ್ಟೇ ಅಲ್ಲದೆ ಈ ಪಿರಮಿಡ್ ಒಂದೇ ನಿರ್ಮಾಣ ಅಲ್ಲ ಇದರ ಜೊತೆಗೆ ಇನ್ನೂ ನೂರಾರು ಚಿಕ್ಕ ಚಿಕ್ಕ ಪಿರಮಿಡ್ ಗಳನ್ನು ಇಲ್ಲಿನ ಪುರಾತನ ನಾಗರಿಕತೆಯ ಜನ ನಿರ್ಮಿಸಿದ್ದಾರೆ.
ಕಾಲ ಕ್ರಮೇಣ ಇದು ಪ್ರಕೃತಿಯೇ ನಿರ್ಮಿಸಿರುವ ಹಾಗೆ ಭಾಸವಾಗುತ್ತಿದೆ ಅಂತ ಹೇಳ್ತಾರೆ ರಷ್ಯಾದ ವಿಜ್ಞಾನಿ ಮರ್ಶಿವ್.ಇನ್ನು ಈ ಪ್ರದೇಶದಲ್ಲಿ ಅವತ್ತಿನ ಜನ ಸಾಕಷ್ಟು ವಿಶೇಷವಾದ ಶಕ್ತಿಗಳನ್ನು ಪಡೆದುಕೊಳ್ಳುತ್ತಿದ್ರು , ಅವರು ಪರಮಾಣುವಿನ ರೀತಿಯ ಪರೀಕ್ಷೆಗಳನ್ನು ಇಲ್ಲಿ ನಡೆಸಿದ್ದಿರಬಹುದು ಎನ್ನುವ ಅನುಮಾನವನ್ನು ಕೂಡ ಹೊರ ಹಾಕುತ್ತಾರೆ ಮರ್ಶಿವ್.ಈ ಪರ್ವತದ ಸುತ್ತಮುತ್ತ ರೇಡಿಯೇಷನ್ ಇದೆ ಎನ್ನುವುದನ್ನು ಅವರು ಪತ್ತೆ ಹಚ್ಚುತ್ತಾರೆ.
ತಮ್ಮ “ವೇರ್ ಡು ವಿ ಕಮ್ ಫ್ರಂ” ಎನ್ನುವ ಪುಸ್ತಕದಲ್ಲಿ ಕೈಲಾಸ ಪರ್ವತದ ಮತ್ತೊಂದು ಮಹಾ ರಹಸ್ಯವನ್ನು ಮರ್ಶಿವ್ ಬಯಲು ಮಾಡ್ತಾರೆ.
ಈ ವಿಚಾರ ಕೇಳಿದ್ರೆ ನಿಮಗೂ ಆಶ್ಚರ್ಯ ಆಗಬಹುದು ಯಾಕೆಂದರೆ ಕೈಲಾಸ ಪರ್ವತ ಎನ್ನುವ ಪಿರಮಿಡ್ ಒಳಗೆ ಯಾರೋ ವಾಸ ಮಾಡ್ತಾ ಇದ್ದಾರೆ ಎನ್ನುವ ಅನುಮಾನವನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.
ಅವರು ಹೇಳುವ ಪ್ರಕಾರ ನಿಶ್ಶಬ್ದದ ಕತ್ತಲ ರಾತ್ರಿಯಲ್ಲಿ ಪರ್ವತದ ಒಳಗಿಂದ ಜನರ ಸದ್ದು ಕೇಳಿಸುತ್ತಿತ್ತಂತೆ ,
ಅದು ಗುಸುಗುಸು ಸದ್ದು ಅಂತಹ ದಾಖಲೆ ಮಾಡ್ತಾರೆ ಅಷ್ಟೇ ಅಲ್ಲದೆ ಮರ್ಶಿವ್ ಹಾಗೂ ಅವರ ಜೊತೆಗಿದ್ದ ಇನ್ನೊಬ್ಬ ಪರ್ವತಾರೋಹಿಗೆ ಮರುದಿನ ಪರ್ವತದ ಒಳಗೆ ಕಲ್ಲುಗಳು ಬೀಳುತ್ತಿರುವ ಸದ್ದು ಕೇಳಿಸಿತ್ತಂತೆ .
ಅಲ್ಲಿಗೆ ಅವರು ಇದೊಂದು ವಿಚಿತ್ರ ಪರ್ವತ ಎನ್ನುವ ನಿರ್ಧಾರಕ್ಕೆ ಬರುತ್ತಾರೆ.
ಅಂದಹಾಗೆ ಈ ಮರ್ಶಿವ್ ಪರ್ವತವನ್ನು ಭೂಮಿ ಮತ್ತು ಆಕಾಶದ ನಡುವಿನ ಏಣಿ ಅಂತ ಬರೆಯುದ್ದಾರೆ ಅಷ್ಟೇ ಅಲ್ಲದೆ ಈ ಪಿರಮಿಡನ್ನು ಆವತ್ತಿನ ಜನ ಅತ್ಯಂತ ನಿಖರವಾಗಿ ಭೂಮಿಯ ಪ್ರಮುಖ ಜಾಗದಲ್ಲಿ ನಿರ್ಮಾಣ ಮಾಡಿದ್ದಾರೆ.
ಈ ಕೈಲಾಸ ಪರ್ವತ ಹಾಗೂ ಕೀಸಾ ಮತ್ತು ಟಿಯೋ ತಿಹಿ ಕಾನ್ ನಲ್ಲಿರುವ ಪಿರಮಿಡ್ ಗಳು ಒಂದೇ ರೇಖೆಯಲ್ಲಿ ಬರುವುದು ಕೂಡ ಆಶ್ಚರ್ಯವನ್ನುಂಟು ಮಾಡುತ್ತದೆ ಅಂತಾರೆ ಮರ್ಶಿವ್.
ಅಂದ್ರೆ ಈ ಪ್ರದೇಶ ವಿಚಿತ್ರ ವಿದ್ಯಮಾನಗಳು ನಡೆಯುತ್ತಿರುವ ಪ್ರದೇಶ ಎನ್ನುವ ನಿರ್ಧಾರಕ್ಕೆ ಮರ್ಶಿವ್ ಮತ್ತು ತಂಡ ಬರುತ್ತೆ.
ಹೀಗೆ ರಷ್ಯಾದ ಸಂಶೋಧಕರು ಕೈಲಾಸ ಪರ್ವತದ ಬಗ್ಗೆ ಜಗತ್ತನ್ನೇ ನಿಬ್ಬೆರಗಾಗಿಸುವ ವಿಚಾರಗಳನ್ನು ಹೊರಹಾಕಿದ್ದಾರೆ ಅಷ್ಟೇ ಅಲ್ಲದೆ ಈ ಪರ್ವತದಲ್ಲಿ ಕಾಣಿಸುವ ಮತ್ತಷ್ಟು ವಿಸ್ಮಯಗಳನ್ನು ಕೂಡ ವಿದೇಶಿ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಕೈಲಾಸ ಪರ್ವತದ ಬಳಿ ಮತ್ತೊಂದು ಪರ್ವತಾಯಿದೆ ಅದು “ಓಂ” ಆಕಾರದಲ್ಲಿ ಗೋಚರಿಸುತ್ತದೆ
ಅಷ್ಟೇ ಅಲ್ಲದೆ ಆ ಪರ್ವತ ಸೂರ್ಯ ಮುಳುಗುವ ಹೊತ್ತಲ್ಲಿ “ಸ್ವಸ್ತಿಕ್” ಆಕೃತಿಯಲ್ಲಿ ಕಾಣುತ್ತಂತೆ.
“ಓಂ” ಅನ್ನುವುದು ಜಗತ್ತಿನ ಮೂಲ ಅಂತಲೇ ಎಲ್ಲರೂ ಹೇಳುವುದು ಹಾಗೇನೇ ಜಗತ್ತಿನ ಎಲ್ಲ ಶಕ್ತಿಗಳ ಅಡಿಪಾಯ “ಸ್ವಸ್ತಿಕ್” ಅಂತ ಬಾನ್ ಜನಾಂಗ ನಂಬುತ್ತೆ.ಹೀಗಾಗಿ ಈ ಓಂ ಪರ್ವತ ಹಾಗೂ ಸೂರ್ಯಾಸ್ತದ ವೇಳೆ ಅದರಲ್ಲಿ ಮೂಡುವ ಸ್ವಸ್ತಿಕ್ ಜಗತ್ತನ್ನು ನಿಬ್ಬೆರಗಾಗಿಸುವುದಲ್ಲದೆ ಸಾಕಷ್ಟು ಅಚ್ಚರಿಗಳಿಗೆ ಕೂಡ ಕಾರಣ ಆಗಿದೆ.
ಇನ್ನು ಈ ಪರ್ವತ ಟೈಮ್ ಟ್ರಾವೆಲ್ಗೆ ಸಾಕ್ಷಿ ನುಡಿಯುತ್ತೆ ಎನ್ನುವುದು ಪಾಶ್ಚಿಮಾತ್ಯರ ಅಭಿಮತ.ಈ ಪರ್ವತದ ಬಳಿ ನಿಂತರೆ ವಿಚಿತ್ರವಾದ ಅನುಭವಗಳು ಆಗುತ್ತವೆ , ನಮಗೇ ಗೊತ್ತಿಲ್ಲದೇ ನಮ್ಮ ಕಣ್ಣಲ್ಲಿ ನೀರು ಹರಿಯುತ್ತದೆ , ಅಧ್ಯಾತ್ಮದ ಕಡೆಗೆ ಮನಸ್ಸು ವಾಲುತ್ತೆ ಎನ್ನುವುದು ಇಲ್ಲಿಗೆ ಪರ್ವತಾರೋಹಿಗಳಾಗಿ ಬಂದಿದ್ದ ಸಾಕಷ್ಟು ಜನರ ಅನಿಸಿಕೆ.
ಇನ್ನು ಈ ಪರ್ವತದ ಬಗ್ಗೆ ಜಗತ್ತಿನಾದ್ಯಂತ ಇರುವ ಮಹಾ ವಿಸ್ಮಯಕಾರಿ ಅಂಶ ಅಂದ್ರೆ ಅದು ಈ ಪರ್ವತ ಚಲಿಸುತ್ತೆ ಅನ್ನೋದು.ಈ ಬಗ್ಗೆ ಸಾಕಷ್ಟು ಪರ್ವತಾರೋಹಿಗಳು ತಮಗಾದ ಗೊಂದಲವನ್ನು ದಾಖಲು ಮಾಡಿದ್ದಾರೆ.
ಪರ್ವತವನ್ನು ಒಂದು ದಿಕ್ಕಿನಿಂದ ಹತ್ತುತ್ತಾ ಹೋದರೆ ನಮಗೇ ಗೊತ್ತಿಲ್ಲದ ಹಾಗೆ ಆ ಪರ್ವತದ ಇನ್ಯಾವುದೋ ದಿಕ್ಕಲ್ಲಿರುವಂತೆ ಅವರಿಗೆ ಭಾಸವಾಗುತ್ತಿತ್ತಂತೆಹೀಗಾಗಿ ಈ ಪರ್ವತವನ್ನು ಹತ್ತುವುದಕ್ಕೆ ಸಾಧ್ಯವೂ ಆಗ್ತಿಲ್ಲ ಅನ್ನೋದು ಸಾಕಷ್ಟು ಪರ್ವತಾರೋಹಿಗಳ ಅಭಿಮತ.
ಈಗಾಗಲೇ ಸಾಕಷ್ಟು ಮಂದಿ ಕೈಲಾಸ ಪರ್ವತವನ್ನು ಹತ್ತುವುದಕ್ಕೆ ಹೋಗಿ ಕಣ್ಮರೆಯಾಗಿದ್ದಾರೆ ಮತ್ತಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ಇಲ್ಲಿ ಪರ್ವತಾರೋಹಿಗಳ ಸಾವು ಮುಂದುವರಿಯುವುದು ಬೇಡ ಅನ್ನೋ ಕಾರಣಕ್ಕೆ ಚೀನಾ ಸರ್ಕಾರ ಪರ್ವತವನ್ನು ಹತ್ತುವುದಕ್ಕೆ ಪರ್ಮಿಶನ್ ಕೊಡುವುದನ್ನು ನಿರಾಕರಿಸುತ್ತಿದೆ.
ಆದರೆ ಇನ್ನು ಕೆಲವರು ಮಾತ್ರ ತಾವು ಈ ಪರ್ವತವನ್ನು ಹತ್ತಿ ಬಿಡ್ತೀವಿ ಆದ್ರೆ ಚೀನಾ ಸರ್ಕಾರವೇ ಅದಕ್ಕೆ ಅನುಮತಿ ಕೊಡ್ತಿಲ್ಲ ಅಂತ ಹೇಳ್ತಿದ್ದಾರೆ.
ಅದೆಲ್ಲಾ ಏನೇ ಆದ್ರೂ ಕೈಲಾಸ ಪರ್ವತ ವೈಜ್ಞಾನಿಕವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಅದು ಇರುವ ಸ್ಥಳದಿಂದ ಹಿಡಿದು ಇಲ್ಲಿ ನಡೆಯುವ ವಿಸ್ಮಯಗಳವರೆಗೆ ಎಲ್ಲವೂ ನಿಗೂಢವೆ.
ಇಷ್ಟಾದರೂ ಕೂಡ ಕೈಲಾಸ ಪರ್ವತವನ್ನು ಸುತ್ತುವ , ಕೈಲಾಸ ಪರ್ವತ ಯಾತ್ರೆಗೆ ಮಾತ್ರ ಜನ ಕಡಿಮೆ ಆಗಿಲ್ಲ.ಅದರಲ್ಲೂ ಭಾರತದಿಂದ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ಕೊಡುತ್ತಿರುವುದು ವಿಶೇಷ .ಚೀನಾ ಭಾರತದೊಂದಿಗೆ ಆಗಾಗ ಕ್ಯಾತೆ ತೆಗೆದು ಗಡಿ ವಿಚಾರದಲ್ಲಿ ತಕರಾರುಗಳನ್ನು ಎತ್ತಿದ್ರು ಕೂಡ ಈ ಯಾತ್ರೆಯ ವಿಚಾರದಲ್ಲಿ ಮಾತ್ರ ಸಮಸ್ಯೆ ಮಾಡಿಲ್ಲ ,ಆಗೊಮ್ಮೆ ಈಗೊಮ್ಮೆ ಗುಟುರು ಹಾಕಿದರು ಕೂಡ ಆ ಸದ್ದು ಅಲ್ಲಲಿಗೇ ನಿಂತು ಹೋಗ್ತಿದೆ.
ಇದು ಶಿವನ ವಾಸ ಸ್ಥಳ, ಶಿವ ಇರೋದು ಇಲ್ಲೇ ಅಂತ ಹಿಂದು ಪುರಾಣಗಳಲ್ಲಿ ಉಲ್ಲೇಖ ಗೊಂಡಿರುವ ಕೈಲಾಸ ಪರ್ವತದ ಕಥೆ.