ಪ್ರತಿದಿನ ದೇಹಕ್ಕೆ ಎಂಟು ಲೋಟ ನೀರಿನ ಅವಶ್ಯಕತೆ ಇದೆ. ಪದೇಪದೇ ನೀರು ಕುಡಿದರೆ ಮೂತ್ರಕ್ಕೆ ಹೋಗಬೇಕಾಗುತ್ತದೆ ಎನ್ನುವ ಕಾರಣದಿಂದ ಜನರು ನೀರನ್ನು ಕಡಿಮೆ ಕುಡಿಯುತ್ತಾರೆ. ನೀರು ಕುಡಿಯದಿದ್ದರೆ ಚರ್ಮದಲ್ಲಿ ಹೋಗಲಾರದಂತಹ ಕಲೆಗಳು ಹಾಗೆ ಇರುತ್ತದೆ. ದೇಹದ ಪ್ರತಿ ಜೀವಕೋಶ ಕೆಲಸಕ್ಕೆ ನೀರು ತುಂಬಾನೇ ಮುಖ್ಯ.
ನೀರಿನ ಕೊರತೆಯಿಂದ ಪ್ರತಿ ಜೀವಕೋಶಕ್ಕೆ ಲಭ್ಯವಾಗಿರುವ ನೀರು ಕಡಿಮೆಯಾದರೆ ಜೀವಕೋಶಗಳ ಕಾರ್ಯ ಕ್ಷಮತೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮದಿಂದ ದೇಹದಲ್ಲಿ ಸುಸ್ತು ಕಾಣಿಸುತ್ತದೆ ಹಾಗೂ ನಡೆಯಲು ಸಾಧ್ಯವಾಗುವುದಿಲ್ಲ. ಅವಧಿಗೂ ಮುನ್ನ ತುಂಬ ವಯಸ್ಸಾದ ರೀತಿಯಲ್ಲಿ ಕಾಣುತ್ತಾರೆ. ಕಡಿಮೆ ನೀರು ಕುಡಿದರೆ ದೇಹದ ಯೌವನ ಹಾಳಾಗುತ್ತದೆ.
ನೀರು ಕಡಿಮೆ ಕುಡಿಯುವುದರಿಂದ ಹೆಚ್ಚಿನ ತೂಕ ಮತ್ತು ಸ್ತುಲ ಕಾಯಿಲೆ ಬರಬಹುದು. ರಕ್ತದಲ್ಲಿರುವ ಪ್ಲಾಸ್ಮೂ ಮತ್ತು ದ್ರವ ಪದಾರ್ಥ ನೀರಿನಿಂದ ಕೂಡಿರುತ್ತದೆ. ನೀರಿನ ಕೊರತೆಯಿಂದ ದೇಹ ಸೊರಗಿ ರಕ್ತದಲ್ಲಿರುವ ನೀರಿನ ಪ್ರಮಾಣ ಕಡಿಮೆಯಾಗುವುದು ಪ್ರಮುಖ ಕಾರಣವಾಗಿರುತ್ತದೆ.
ಇದರಿಂದ ಹೃದಯ ಸಂಬಂಧಿಸಿದ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ ಹಾಗೂ ರಕ್ತದ ಒತ್ತಡ ಹೆಚ್ಚಾಗುತ್ತದೆ. ನೀರು ಕಡಿಮೆಯಾದರೆ ಹೆಚ್ಚು ಕೊಲೆಸ್ಟ್ರಾಲ್ ಹೊಂದುವ ಸಾಧ್ಯತೆಯಿರುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ದೇಹದ ಜೀರ್ಣಕ್ರಿಯೆಗೆ ನೀರಿನ ಅಗತ್ಯ ತುಂಬಾ ಇರುತ್ತದೆ. ಆಹಾರ ಪಚನವಾಗಿ ದೊಡ್ಡಕರುಳಿಗೆ ಬರುವವರೆಗೂ ನೀರು ಅರ್ಧಭಾಗದಷ್ಟು ಇರಬೇಕು. ದೊಡ್ಡ ಕರುಳು ಹೆಚ್ಚಿನ ನೀರನ್ನು ಹಿರಿ ತ್ಯಾಜ್ಯವನ್ನು ಹೊರಹಾಕುತ್ತದೆ.
ನೀರು ಇಲ್ಲದಿದ್ದರೆ ವಿಸರ್ಜನೆಗೆ ತುಂಬಾ ಕಷ್ಟವಾಗುತ್ತದೆ. ನೀರಿನ ಕೊರತೆಯಿಂದ ಆಹಾರ ಪೂರ್ಣ ಜೀರ್ಣವಾಗದೆ ಆಮ್ಲೀಯತೆಯಿಂದ ಕೂಡಿದ್ದರೆ ಕರುಳುಗಳ ಒಳಗೆ ಪ್ರಭಾವ ಬೀರುತ್ತದೆ. ಕರುಳಿನಲ್ಲಿ ಉಣ್ಣು ಆಗುವ ಸಾಧ್ಯತೆ ಇರುತ್ತದೆ.ಆಮ್ಲ ಪ್ರತ್ಯಾಮ್ಲಗಳ ಸಮತೋಲನದಲ್ಲಿ ತೊಂದರೆ ಉಂಟಾಗುತ್ತದೆ ಹಾಗೂ ತಮ್ಮ ಸಂಬಂಧಿಸಿದ ಕಾಯಿಲೆ ಎದುರಾಗುತ್ತದೆ.
ನೀರು ಕಡಿಮೆ ಕುಡಿದರೆ ಮೂತ್ರಕೋಶದಲ್ಲಿ ಸೋಂಕು ಮತ್ತು ಉರಿಮೂತ್ರ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಪ್ರತಿದಿನ ಸಾಧ್ಯವಾದಷ್ಟು 2.5 -4.0 ಲೀಟರ್ ನೀರು ಕುಡಿಯುವುದು ಉತ್ತಮ.