ಸೆರಾಮಿಕ್ ಕುಕ್ ವೇರ್ ಮತ್ತು ಮಣ್ಣಿನ ಮಡಿಕೆಗಳ ವ್ಯತ್ಯಾಸಗಳ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..
ಸೆರಾಮಿಕ್ ಕುಕ್ ವೇರ್ , ಮಣ್ಣಿನ ಮಡಿಕೆಗಳು ಅಥವಾ ಟೆರಕೋಟ ಮಣ್ಣಿನ ಮಡಿಕೆಗಳು
ಪಿಂಗಾಣಿ ಪಾತ್ರೆಗಳು.ಈ 3 ಸಹ ಮಣ್ಣಿನಿಂದಲೇ ತಯಾರಾಗುತ್ತದೆ ಆದರೆ ತಯಾರಿಸುವ ವಿಧಾನಗಳು ಬೇರೆಯಷ್ಟೆ.ಸೆರಾಮಿಕ್ ಕುಕ್ ವೇರ್ ಗಳು ಅಡುಗೆ ಮಾಡುವುದಕ್ಕೆ ಯೋಗ್ಯವಾಗಿದೆ ಹಾಗಂತ ಮಣ್ಣಿನ ಮಡಿಕೆಗಳನ್ನು ಅಡುಗೆ ಮಾಡಲು ಯೋಗ್ಯವಲ್ಲ ಎಂದಲ್ಲ .
ಸೆರಾಮಿಕ್ ಪಾತ್ರೆಗಳಲ್ಲಿ ಹೈ ಫ್ಲೇಮ್ ನಲ್ಲಿಟ್ಟು ಅಡುಗೆಯನ್ನು ಮಾಡಬಹುದು ಇದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಆದರೆ ಮಣ್ಣಿನ ಮಡಿಕೆಗಳಲ್ಲಿ ಹೈ ಫ್ಲೇಮ್ ನಿಟ್ಟು ಅಡುಗೆ ಮಾಡಲು ಹೊರಟರೆ ಮಣ್ಣಿನ ಮಡಿಕೆಗಳು ಒಡೆದು ಹೋಗುವ ಸಂಭವ ಜಾಸ್ತಿ ಇರುತ್ತದೆ.
ಸೆರಾಮಿಕ್ ಪಾತ್ರೆಗಳನ್ನು ಸೋಪ್ ಅಥವಾ ಡಿಟರ್ ಜೆನ್ಟ್ ಹಾಕಿ ತೊಳೆಯುವಾಗ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಯಾಕೆಂದರೆ ಇದು ಜೇಡಿಮಣ್ಣಿನಿಂದ ತಯಾರಾಗುತ್ತದೆ ಹಾಗೂ ಇದರಲ್ಲಿ ಸಣ್ಣ ಸಣ್ಣ ಪೋರ್ಸ್ ಗಳು ಇರುವುದಿಲ್ಲ ಆದರೆ ಮಣ್ಣಿನ ಮಡಿಕೆಗಳನ್ನು ಸೋಪ್ ಅಥವಾ ಡಿಟರ್ಜೆಂಟ್ ಬಳಸಿ ತೊಳೆಯಲು ಸಾಧ್ಯವಿಲ್ಲ ಏಕೆಂದರೆ ಸೋಪ್ ಅಥವಾ ಡಿಟರ್ಜೆಂಟ್ನ ಸಣ್ಣ ಸಣ್ಣ ಕಣಗಳು ಸೇರಿಕೊಂಡು ಅಡುಗೆ ಮಾಡುವಾಗ ಆಹಾರದಲ್ಲಿ ಸೇರಬಹುದು.
ಸೆರಾಮಿಕ್ ಪಾತ್ರೆಗಳು ಫೇಮಸ್ಸಾಗಿರುವುದು ಹೈ ಫ್ಲೇಮ್ ನಲ್ಲಿ ಅಡುಗೆ ಮಾಡಬಹುದು ಮತ್ತು ಓಪನ್ ಪೋರ್ಸ್ ಇಲ್ಲ ಎಂಬ ಮುಖ್ಯ ಕಾರಣಕ್ಕೆ.
ಸೆರಾಮಿಕ್ ಪಾತ್ರೆಗಳಲ್ಲಿ ಬ್ಯಾಕ್ಟೀರಿಯಾ ಫಂಗಸ್ ನಂಥ ಯಾವುದೇ ರೀತಿಯ ಬ್ಯಾಕ್ಟೀರಿಯಾಗಳು ಸೇರಿಕೊಳ್ಳಲು ಆಗುವುದಿಲ್ಲ ಆದರೆ ಮಣ್ಣಿನ ಮಡಿಕೆಗಳಲ್ಲಿ ಫಂಗಸ್ ಬ್ಯಾಕ್ಟೀರಿಯಾದಂಥ ಸಣ್ಣ ಸಣ್ಣ ಕಣಗಳು ಸೇರಿಕೊಂಡು ನಮ್ಮ ಆಹಾರದಲ್ಲಿ ಸೇರಿಕೊಳ್ಳಬಹುದು.
ಸೆರಾಮಿಕ್ ಪಾತ್ರೆಗಳು ಮತ್ತು ಮಣ್ಣಿನ ಮಡಿಕೆಗಳಲ್ಲಿ ಯಾವುದು ಗಟ್ಟಿ ಎಂದು ಪರಿಶೀಲಿಸಿ ನೋಡಿದಾಗ ಸೆರಾಮಿಕ್ ಪಾತ್ರೆಗಳು ಮಣ್ಣಿನ ಮಡಿಕೆ ಗಿಂತ ಹೆಚ್ಚು ಬಲಿಷ್ಠ ಎಂದು ತಿಳಿದುಬಂದಿದೆ
ಆದರೆ 1 ವಿಷಯ ಗಮನದಲ್ಲಿಡಿ ಎರಡೂ ಪಾತ್ರಗಳೂ ಸಹ ಮೇಲಿನಿಂದ ಕೆಳಗೆ ಹಾಕಿದರೆ ಖಂಡಿತವಾಗಿಯೂ ಒಡೆದುಹೋಗುತ್ತದೆ.
ಇನ್ನೂ ಸೆರಾಮಿಕ್ ಪಾತ್ರೆಗಳಲ್ಲಿ ಹೈ ಫ್ಲೇಮ್ ಇಟ್ಟು ಅಡುಗೆ ಬೇಗನೆ ಮಾಡಬಹುದು ಆದರೆ ಮಣ್ಣಿನ ಮಡಿಕೆಗಳ ಪಾತ್ರೆಗಳು ಬೇಗ ಬಿಸಿಯಾಗುವುದಿಲ್ಲ ಇದರಿಂದ ತಡವಾಗಿ ಅಡುಗೆ ಮಾಡಬೇಕಾಗುತ್ತದೆ . ಹಾಗೂ ಮುಖ್ಯವಾಗಿ ಸೆರಾಮಿಕ್ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಸಮಯದ ಉಳಿತಾಯದ ಜೊತೆಗೆ ಅಡುಗೆ ಅನಿಲದ ಉಳಿತಾಯ ಸಹ ಮಾಡಬಹುದಾಗಿದೆ.
ಸೆರಾಮಿಕ್ ಪಾತ್ರಗಳಲ್ಲಿ ಮತ್ತು ಮಣ್ಣಿನ ಮಡಿಕೆ ಗಳಲ್ಲಿ ಮಾಡಿದ ಅಡುಗೆಯೂ ಬೇಗನೆ ಹಾಳಾಗುವುದಿಲ್ಲ.ಸೆರಾಮಿಕ್ ಪಾತ್ರೆಗಳಲ್ಲಿ ಮತ್ತು ಮಣ್ಣಿನ ಮಡಿಕೆಗಳಲ್ಲಿ ಹೆಚ್ಚು ಎಣ್ಣೆ ಹಾಕುವ ಅಗತ್ಯವಿಲ್ಲ.
ಸ್ವಲ್ಪ ಎಣ್ಣೆಯನ್ನು ಹಾಕಿ ರುಚಿ ರುಚಿಯಾದ ಸ್ವಾದಿಷ್ಟವಾದ ಅಡುಗೆಯನ್ನು ಮಾಡಬಹುದು.ನೀವು ಯಾವ ರೀತಿಯ ಪಾತ್ರೆಯಲ್ಲಿ ಅಡುಗೆ ಮಾಡುತ್ತೀರ ಎಂದು ಕಾಮೆಂಟ್ ಮಾಡಿ ತಿಳಿಸಿ.
ಧನ್ಯವಾದಗಳು.