ಈ ಜಗತ್ತಿನಲ್ಲಿ ಅದೆಷ್ಟು ಅಚ್ಚರಿಗಳಿವೆ , ಅದೆಷ್ಟು ಅದ್ಭುತಗಳಿವೆ .ಕೆಲವೊಂದು ನಮ್ಮನ್ನು ಬೆರಗುಗೊಳಿಸುತ್ತವೆ.ಜಗತ್ತಿನ ಅದ್ಭುತ ಕಟ್ಟಡಗಳ ಬಗ್ಗೆ ತಿಳಿಯೋಣ ಬನ್ನಿ..ಈ ಕಟ್ಟಡಗಳಲ್ಲಿ ಬಳಸಲಾದ ಅದ್ಭುತ ಟೆಕ್ನಾಲಜಿ ನಿಮ್ಮನ್ನು ದಂಗು ಪಡಿಸುತ್ತದೆ.1 )ಪೆನುಂಬ್ರಪ್ರಾನ್ಸ್ ನ ಒಬ್ಬ ವಿದ್ಯಾರ್ಥಿ ಈ ಬಿಲ್ಡಿಂಗನ್ನು ಡಿಸೈನ್ ಮಾಡಿದ್ದಾನೆ.ಈ ಬಿಲ್ಡಿಂಗ್ ನ ವಿಶೇಷತೆ ಆದ್ರೆ ಅದರ ಕಿಟಕಿಗಳು.ಈ ಕಿಟಕಿಗಳು ಸೂರ್ಯನ ಕಿರಣಗಳಿಗೆ ತಕ್ಕಂತೆ ಎಕ್ಸಿಸ್ಟ್ ಅಗ್ತವೆ.ಸೂರ್ಯನ ಬಿಸಿಲು ಬೀಳುತ್ತಿದ್ದಂತೆ ಕಿಟಕಿಗಳು ಸ್ವಯಂಚಾಲಿತವಾಗಿ ಅಲೈನ್ ಅಗ್ತವೆ.ಹೀಗೆ ಕಿಟಕಿಗಳು ಅಲೈನ್ ಆಗೋದರಿಂದ ಬಿಲ್ಡಿಂಗ್ ನ ಒಳಗಡೆ ಯಾವುದೇ ಬಿಸಿಲು ಬೀಳುವುದಿಲ್ಲ.ಈ ಕಿಟಕಿಗಳು 360 ಡಿಗ್ರಿ ತಿರುಗುತ್ತದೆ.ಯಾವ ಕಡೆ ಬಿಸಿಲಿದ್ದರು ಕೂಡ ಅದು ಬಿಲ್ಡಿಂಗ್ನ ಒಳ ಪ್ರವೇಶಿಸದಂತೆ ತಡೆಯುತ್ತದೆ.
2 )ಅಘೋರ ಟವರ್ ತೈವಾನ್:ಡಿ ಬಿಲ್ಡಿಂಗ್ ತೈವಾನ್ನ ಕ್ಸಿನ್ಯಿ ನಗರದಲ್ಲಿದೆ.ಈ ಬಿಲ್ಡಿಂಗನ್ನು ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಕಟ್ಟಲಾಗಿದೆ.ಕೆಳಗಿನಿಂದ ಮೇಲಿನವರೆಗೆ ಬಿಲ್ಡಿಂಗ್ ನ ಸುತ್ತ ತುತ್ತ ತುದಿಯವರೆಗೂ ಗಿಡಗಳನ್ನು ಇಡಲಾಗಿದೆ ,ಬಳ್ಳಿಗಳನ್ನು ಬೆಳೆಸಲಾಗಿದೆ. ಇದ್ಯಾವುದೂ ಪ್ಲಾಸ್ಟಿಕ್ ಅಲ್ಲ ಬದಲಾಗಿ ನೈಸರ್ಗಿಕವಾಗಿಯೇ ಬೆಳೆಸಲಾಗಿದೆ.ಇಲ್ಲಿ ತರಕಾರಿ ಹಣ್ಣಿನ ಗಿಡಗಳನ್ನು ಕೂಡ ನೆಡಲಾಗಿದೆ ಹೀಗಾಗಿ ಈ ಬಿಲ್ಡಿಂಗ್ ನೋಡುವುದಕ್ಕೆ ತುಂಬಾನೇ ಸುಂದರವಾಗಿ ಕಾಣುತ್ತೆ.ಈ ಬಿಲ್ಡಿಂಗ್ ನಲ್ಲಿ ಮತ್ತೊಂದು ವಿಶೇಷತೆ ಇದೆ ,ಈ ಬಿಲ್ಡಿಂಗ್ ಡಿಎನ್ಎ ಶೇಪ್ನಲ್ಲಿದೆ.ಈ ಬಿಲ್ಡಿಂಗ್ ನ ಟಾಪ್ ಫ್ಲೋರ್ ನಲ್ಲಿ ಸೋಲಾರ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.ಇಲ್ಲಿನ ಸೋಲಾರ್ನಿಂದ ಉತ್ಪಾದನೆಯಾದ ಕರೆಂಟ್ನಲ್ಲಿ ಈ ಬಿಲ್ಡಿಂಗ್ನಲ್ಲಿ ಬಳಸಲಾಗುತ್ತದೆ.ಸಿಂಪಲ್ಲಾಗಿ ಹೇಳಬೇಕು ಅಂದ್ರೆ ಇದೊಂದು ಪರಿಸರ ಪ್ರೇಮಿ ಬಿಲ್ಡಿಂಗ್.
3 )ಡೈನಾಮಿಕ್ ಟವರ್:ಇದು ದುಬೈ ನಲ್ಲಿ ನಿರ್ಮಿಸಿರುವ ಒಂದು ಅದ್ಭುತ .ಈ ಬಿಲ್ಡಿಂಗ್ ನಲ್ಲಿ ಇಟಲಿಯ ಆರ್ಕಿಟೆಕ್ಚರ್ ಒಬ್ಬ ನಿರ್ಮಿಸಿದ್ದಾನೆ.ಈ ಬಿಲ್ಡಿಂಗ್ ಗಳನ್ನು ನೋಡಿದ್ರೆ ಅಬ್ಬಬ್ಬಾ ಹೀಗೂ ಇರ್ಲಿಕ್ಕೆ ಸಾಧ್ಯಾನಾ ಅಂತ ಅನಿಸುತ್ತೆ.60 ಅಂತಸ್ತು ಇರುವ ಈ ಬಿಲ್ಡಿಂಗ್ ನಿಂದ ಪ್ರತಿಯೊಂದು ಅಂತಸ್ತುಗಳು ಕೂಡಾ 180 ಡಿಗ್ರಿಯಲ್ಲಿ ತಿರುಗುತ್ತೆ.ಯಾವ ದಿಕ್ಕಿಗೆ ಬೇಕೊ ಆ ದಿಕ್ಕಿಗೆ ಒಂದು ಅಂತಸ್ತನ್ನು ತಿರುಗಿಸಿ ಬಿಡಬಹುದು.ಈ ಬಿಲ್ಡಿಂಗ್ ಯಾವಾಗ್ಲೂ ತಿರುಗುತ್ತಲೇ ಇರುತ್ತದೆ.ಒಂದೇ ಬಿಲ್ಡಿಂಗ್ ನಲ್ಲಿ ಇದ್ದುಕೊಂಡು ದುಬೈನ ಬೇರೆ ಬೇರೆ ವೀವ್ ಗಳನ್ನು ಇಲ್ಲಿಂದ ನೋಡಬಹುದು.ಇಡೀ ದುಬೈಯನ್ನು ಇಲ್ಲಿಂದ ನೋಡಬಹುದು.
4 )ಸಾಂಗ್ ಜಿಯಾಂಗ್ ಹೋಟೆಲ್:ಇದು ಚೀನಾದ ಶಾಂಗಿಲ್ ನಗರದಲ್ಲಿದೆ.ಈ ಬಿಲ್ಡಿಂಗ್ ಅನ್ನು ಎರಡು ಬಂಡೆಗಳ ನಡುವೆ ನಿರ್ಮಿಸಲಾಗಿದೆ.ಈ ಬಿಲ್ಡಿಂಗ್ ನಲ್ಲಿ ಅಂಡರ್ ವಾಟರ್ ಹೋಟೆಲ್ಗಳಿವೆ , ಅಂಡರ್ ವಾಟರ್ ರೂಮ್ ಗಳು ಕೂಡ ಇದೆ.ಇದೆ ಇಲ್ಲಿನ ವಿಶೇಷತೆ.
5 )ಸಾಂಡ್ಸ್ ಸ್ಕೈ ಪಾರ್ಕ್ ಬಿಲ್ಡಿಂಗ್;ಈ ಬಿಲ್ಡಿಂಗ್ ಸಿಂಗಾಪುರದಲ್ಲಿದೆ. ಇಲ್ಲಿ ಮೂರು ಟವರ್ಗಳ ಮೇಲೆ ಒಂದು ಸ್ಕೈವಾಕ್ ಇದೆ.ಈ ಸ್ಕೈವಾಕ್ ನಲ್ಲಿ ಬಹುದೊಡ್ಡ ಸ್ವಿಮ್ಮಿಂಗ್ ಪೂಲ್ ಇದೆ ,ಇಲ್ಲಿ ಸ್ವಿಮ್ಮಿಂಗ್ ಮಾಡ್ತಾ ಇಡೀ ಸಿಂಗಾಪುರವನ್ನೇ ನೋಡಬಹುದು.ಇದು ಜಗತ್ತಿನ ಸುಂದರ ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಒಂದು.
6 ) ರಫ್ಫೆಲ್ಸ್ ಸಿಟಿ ಚಾಂಗಿಂಗ್:ಈ ಬಿಲ್ಡಿಂಗ್ ಚೀನಾದ ಚಾಂಗಿಂಗ್ ನಲ್ಲಿದೆ.ಈ ಬಿಲ್ಡಿಂಗ್ ನ ವಿಶೇಷತೆ ಅಂದ್ರೆ 6 ಬಿಲ್ಡಿಂಗ್ಗಳ ಮೇಲೆ ಒಂದು ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ.ಇದೊಂದು ಅದ್ಭುತ ಸ್ಕೈವಾಕ್.ಈ ಸ್ಕೈವಾಕ್ ಬರೋಬ್ಬರಿ 300 ಮೀಟರ್ ಉದ್ದ ಇದೆ.ಸ್ಕೈ ವಾಕ್ ನ ಒಳಗಡೆ ಲಕ್ಷುರಿ ಹೋಟೆಲ್ಗಳಿವೆ.ಇಲ್ಲಿನ 2 ಬಿಲ್ಡಿಂಗ್ಗಳ ಮೇಲೆ ಹೆಲಿಪ್ಯಾಡ್ ಕೂಡ ಇದೇ.
7 )ಎಕ್ಸ್ ಸೀಡ್ ಬಿಲ್ಡಿಂಗ್:ನೀವು ಇಲ್ಲಿವರೆಗೂ ಸುಂದರವಾದ ಬಿಲ್ಡಿಂಗ್ಗಳನ್ನು ,ಸೂಪರ್ ವಿನ್ಯಾಸದ ಬಿಲ್ಡಿಂಗ್ಗಳ ಬಗ್ಗೆ ಕೇಳಿದ್ರಿ..ನಾವೀಗ ಜಗತ್ತಿನ ಅತಿ ಎತ್ತರದ ಬಿಲ್ಡಿಂಗ್ ಬಗ್ಗೆ ಹೇಳ್ತೀವಿ .ಅತಿ ಎತ್ತರದ ಬಿಲ್ಡಿಂಗ್ ಅಂದ್ರೆ ಬುರ್ಜ್ ಖಲೀಫಾ ಅಂತ ನೀವೆಲ್ಲ ಅಂದು ಕೊಂಡಿದ್ದೀರಿ..ಆದರೆ ಈ ಬಿಲ್ಡಿಂಗ್ ಬುರ್ಜ್ ಖಲೀಫಾವನ್ನೇ ಮೀರಿಸಲಿದೆ.ಈ ಬಿಲ್ಡಿಂಗ್ನ ಎತ್ತರ ಬರೋಬ್ಬರಿ 4 ಸಾವಿರ ಮೀಟರ್ ಇರಲಿದೆಯಂತೆ.ಇದು ಜಪಾನ್ನಲ್ಲಿ ನಿರ್ಮಾಣವಾಗುತ್ತಿರುವ ಜಗತ್ತಿನ ಅತಿ ಎತ್ತರದ ಬಿಲ್ಡಿಂಗ್.ಈ ಒಂದೇ ಬಿಲ್ಡಿಂಗ್ ನಲ್ಲಿ ಒಂದೂವರೆ ಲಕ್ಷ ಜನ ವಾಸ ಮಾಡಬಹುದಂತೆ.ಎಲ್ಲಿವರೆಗೆ ಅಂದ್ರೆ ಟಾಪ್ ಪ್ಲೋರ್ ನಲ್ಲಿ ಇರುವವರಿಗೆ ವಾತಾವರಣದಲ್ಲಾದ ಬದಲಾವಣೆ ಕೂಡ ಗೊತ್ತಾಗುವುದಿಲ್ಲವಂತೆ..ಈ ಬಿಲ್ಡಿಂಗ್ ಈಗ ನಿರ್ಮಾಣ ಹಂತದಲ್ಲಿದೆ.ಆದಷ್ಟು ಬೇಗ ಈ ಬಿಲ್ಡಿಂಗ್ ನಿರ್ಮಾಣ ಕಾರ್ಯ ಮುಗಿಯಲಿದೆ.