ಮಹಾಭಾರತದ ಆ 5 ಸಮಬಲರ ಬಗ್ಗೆ ನಿಮಗೆ ಗೊತ್ತಾ!

Written by Anand raj

Published on:

ಮಹಾಭಾರತ ಕಥಾನಕದಲ್ಲಿ ಬರುವ ಪ್ರತಿ ಪಾತ್ರಕ್ಕೂ ಅದರದೇ ಆದ ವೈಶಿಷ್ಟ್ಯ ಇದೆ. ಪ್ರತಿ ಘಟನೆಗೂ ಕಾರ್ಯಕಾರಣ ಸಂಬಂಧ ಇದೆ. ಒಬ್ಬ ಯೋಧ ಯಾರ ಕೈಯಲ್ಲಿ ಹತನಾಗಬೇಕು ಅನ್ನುವುದಕ್ಕೆ ಕೂಡ ಒಂದು ಕಾರಣ ಇರುತ್ತದೆ.ಇಲ್ಲಿ ಮುಖ್ಯ ಕಥೆಗೆ ಎಷ್ಟು ಪ್ರಾಮುಖ್ಯತೆ ಇರುತ್ತೋ ಅದರ ಉಪಕಥೆಗಳು ಹಾಗೂ ಒಳನೋಟಗಳು ಕೂಡ ಅಷ್ಟೇ ಆಸಕ್ತಿದಾಯಕವಾಗಿ ಕುತೂಹಲವಾಗಿರುತ್ತದೆ.ಅಂಥದ್ದೇ ಒಂದು ಕುತೂಹಲಕಾರಿ ಸಂಗತಿಯನ್ನು ಇಲ್ಲಿ ತಿಳಿಯೋಣ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಅವತ್ತಿನ ಕಾಲಘಟ್ಟದಲ್ಲಿ 5 ಜನ ಮಹಾವೀರರು ಸಮಬಲರಾಗಿದ್ದರಂತೆ .ಆ ಐವರಲ್ಲಿ ಯಾರು ಯಾರನ್ನು ಮಣಿಸಬೇಕಾದ್ರೂ ಆ ಐವರಲ್ಲಿ ಒಬ್ಬರಿಗೆ ಮಾತ್ರ ಸಾಧ್ಯವಲವಾಗುತ್ತಿತ್ತು ಅಷ್ಟೇ ಅಲ್ಲದೆ ಆ 5 ಜನರ ಸಾವು ಕೂಡ ಆ ಐವರಲ್ಲಿಯೇ ಯಾರಾದರೂ ಒಬ್ಬರಿಂದ ಸಾಧ್ಯವಾಗಬೇಕಿತ್ತು ಅಂದ್ರೆ ಆ ಐವರನ್ನು ಅವರಲ್ಲಿಯೇ ಒಬ್ಬರನ್ನು ಬಿಟ್ರೆ ಜಗತ್ತಿನ ಇನ್ಯಾರು ಸೋಲಿಸೋಕೆ ಸಾಧ್ಯವಿರಲಿಲ್ಲ .ಸೋಲಿಸೋಕೆ ಸಾಧ್ಯ ವಿಲ್ಲ ಅಂದ ಮೇಲೆ ಸಂಹರಿಸುವುದಕ್ಕೆ ಎಲ್ಲಿ ಸಾಧ್ಯ ಆಗುತ್ತದೆ.ಹಾಗಾಗಿ ಆ ಐವರು ಬಲ ಶಾಲಿಗಳ ಪೈಕಿ ಒಬ್ಬ ಶ್ರೀಕೃಷ್ಣನಿಗೆ ಕಂಟಕಪ್ರಾಯನಾಗಿ ತಯಾರಾಗಿ ಬಿಟ್ಟಿದ್ದ ಅಂದ್ರೆ ಅವನನ್ನು ನಿಗ್ರಹಿಸುವುದಕ್ಕೆ ಶ್ರೀಕೃಷ್ಣನಿಗೆ ಸಾಧ್ಯವಾಗ್ತಿರಲಿಲ್ಲ ಅಂತಲ್ಲ ಅವನ ಹಣೆಬರಹದಲ್ಲಿ ಸಾವು ಮತ್ತು ಸೋಲು ಅವನಷ್ಟೇ ಶಕ್ತಿಶಾಲಿಯಾದ ಉಳಿದ ನಾಲ್ವರ ಪೈಕಿ ಒಬ್ಬನಿಂದ ಸಾಧ್ಯವಾಗಬೇಕಿತ್ತು ಅಂದ್ರೆ ನಿಯತಿ ಅಂತ ಒಂದಿರುತ್ತೆ ನಿಮ್ಮ ಡೆಸ್ಟಿನಿ ಅದನ್ನು ಬದಲಿಸುವುದಕ್ಕೆ ದೇವರಿಂದ ಕೂಡ ಸಾಧ್ಯವಾಗುವುದಿಲ್ಲ.ಈ ಐವರ ವಿಶ್ವದಲ್ಲಿ ಕೂಡ ಹಾಗೇ ಆಗಿತ್ತು .

ಮಹಾಭಾರತದಲ್ಲಿ ಕೇಳಿ ಬರುವ ಈ ಸಮಬಲರೆ ಭೀಮಾ ,ದುರ್ಯೋಧನ ,ಜರಾಸಂಧ ,ಕೀಚಕ ಹಾಗೂ ಬಕಾಸುರ .ಈ 5 ಜನ ಮಹಾಬಲ ಶಾಲಿಗಳಾಗಿದ್ದರು.ಒಬ್ಬರಿಗಿಂತ ಒಬ್ಬರು ಮಹಾ ಪರಾಕ್ರಮಿಗಳಾಗಿದ್ದರು. ಜರಾಸಂಧ ನಂತೂ ಶ್ರೀಕೃಷ್ಣನನ್ನೇ ರಾಜ್ಯ ಬಿಡಿಸಿ ಬಿಟ್ಟಿದ್ದ .ಇನ್ನು ಕೀಚಕ ಆತನ ಅಕ್ಕ ಪಕ್ಕದ ರಾಜ್ಯಗಳ ರಾಜರ ಪಾಲಿಗೆ ಯಮ ಸ್ವರೂಪಿಯಾಗಿದ್ದ.ಇನ್ನು ಬಕಾಸುರ ಯಾವ ಭಯ ಇಲ್ಲದೆ ಏಕಚಕ್ರನಗರದ ಜನರನ್ನು ಶೋಷಣೆ ಮಾಡ್ತಿದ್ದ.ಇನ್ನು ಭೀಮಾ ಮತ್ತು ದುರ್ಯೋಧನರ ಪೈಕಿ ಒಬ್ಬ ರಾಜ್ಯಕ್ಕಾಗಿ ಲೋಭಿಯಾಗಿದ್ದರೆ ಮತ್ತೊಬ್ಬ ಪತ್ನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಶಪಥ ಮಾಡಿ ಆ ಕ್ಷಣಕ್ಕಾಗಿ ಕಾಯುತ್ತಾ ಇದ್ದ.ಇಲ್ಲಿ ಈ ಐವರಿಗಿಂತ ಭೀಮಾ ಸ್ವಲ್ಪ ಹೆಚ್ಚು ಬಲಶಾಲಿಯಾಗಿ ಕಾಣುತ್ತಾನೆ ಯಾಕೆಂದರೆ ಅವನಿಗೇ 10 ಸಹಸ್ರ ಆನೆಗಳ ಬಲ ಇತ್ತು ಅಂತ ಹೇಳಲಾಗುತ್ತದೆ.

ಇಷ್ಟಕ್ಕೂ ಭೀಮಾ 10 ಸಾವಿರ ಆನೆಗಳ ಬಲ ಪಡೆದದ್ದು ಹೇಗೆ ಅನ್ನೋದನ್ನು ನೋಡಿದರೆ ನಾವು ಕೌರವ ಪಾಂಡವರ ಬಾಲ್ಯದ ದಿನಗಳನ್ನು ನೆನಪು ಮಾಡ್ಕೋಬೇಕು.ಪಾಂಡು ರಾಜನ ಸಾವಿನ ನಂತರ ಅವನ ಐವರು ಮಕ್ಕಳು ಕುಂತಿಯೊಂದಿಗೆ ಹಸ್ತಿನಾಪುರಕ್ಕೆ ಬಂದಿದ್ದ ಸಂದರ್ಭ ಅದು ,ಅಲ್ಲಿಯವರೆಗೂ ಕೌರವರು ಆ ಇಡೀ ಸಾಮ್ರಾಜ್ಯಕ್ಕೆ ತಾವೇ ವಾರಸುದಾರರು ಅಂತ ಅಂದುಕೊಂಡಿದ್ದರು.100 ಮಂದಿ ಸಹೋದರರು ಅಗ್ರಜ ಸುಯೋಧನನ ಆಜ್ಞಾ ಪಾಲಕರಾಗಿದ್ದರು.ಆ ದಿನಗಳಲ್ಲೇ ಪಾಂಡು ಕುಮಾರರ ಆಗಮನವಾಯಿತು.ಸಹಜವಾಗಿ ಹೊಸ ಮಕ್ಕಳು ಬಂದಿದ್ದು ಅರಮನೆಯಲ್ಲಿದ್ದ ಸಹೋದರರ ಅಸಹನೆಗೆ ಕಾರಣವಾಯಿತು.ಅವರು ಪರಸ್ಪರ ಹೊಂದಿಕೊಂಡು ಹೋಗಬೇಕು ಅಂದ್ರೆ ಬಂದವರು ಕೂಡ ಸುಯೋಧನನ ಆಧಿಪತ್ಯವನ್ನು ಸಹಿಸಿಕೊಳ್ಳಬೇಕಿತ್ತು ಆದ್ರೆ ಆ ಐವರಲ್ಲಿ ಭೀಮಾ ಅದಕ್ಕೆ ಸಿದ್ಧನಿರಲಿಲ್ಲ.ಅವನು ಸುಯೋಧನ ಇಬ್ರು ಸಮವಯಸ್ಕರು , ಸಮಬಲರು.ಹೀಗಾಗಿ ಭೀಮ ಹಸ್ತಿನಾವತಿಯಲ್ಲಿ ಸುಯೋಧನನ 99 ಅನುಜರನ್ನು ಕಾಡ ಬಾರದ ರೀತಿಯಲ್ಲಿ ಕಾಡುವುದಕ್ಕೆ ಶುರು ಮಾಡ್ತಾನೆ.ಇದು ಸಹಜವಾಗಿಯೇ ದುರ್ಯೋಧನ ಮತ್ತವನ ತಮ್ಮ ದುಶ್ಯಾಸನನಿಗೆ ಭೀಮನ ಮೇಲೆ ಹೊಟ್ಟೆ ಕಿಚ್ಚು ದ್ವೇಷ ಹುಟ್ಟುವ ಹಾಗೆ ಮಾಡುತ್ತದೆ.

ಒಂದು ಬಾರಿಯಂತೂ ಮರದ ಮೇಲಿದ್ದ ದುರ್ಯೋಧನ ಹಾಗೂ ಅವನ ಸಹೋದರರನ್ನು ಹಿಡಿಯೋಕೆ ಆಗದೆ ಇಡೀ ಮರವನ್ನು ಅಲುಗಾಡಿಸಿ ಬಿಟ್ಟನಂತೆ ಭೀಮ ಹೀಗಾಗಿ ಆ ಮರದ ಮೇಲಿದ್ದ ಮಕ್ಕಳೆಲ್ಲ ಎಳೆ ಮಾವಿನ ಕಾಯಿಗಳ ತರಹ ಉದುರಿ ನೆಲಕ್ಕೆ ಬಿದ್ದಿದ್ದರು.ಭೀಮನ ಇಂತಹ ವಿಚಿತ್ರ ಕಾಟಗಳನ್ನು ತಾಳಲು ಆಗದೆ ಸುಯೋಧನ ಹಾಗೂ ಅವನ ಅನುಜರ ಪಡೆ ಭೀಮನಿಗೆ ವಿಷ ಉಣಿಸಿ ಬಿಡುವ ನಿರ್ಧಾರಕ್ಕೆ ಬರ್ತಾರೆ .ಹೇಗಿದ್ದರೂ ಭೀಮಾ ತಿನ್ನೋದ್ರಲ್ಲಿ ಮುಂದು ಹೀಗಾಗಿ ಪಾಯಸಕ್ಕೆ ವಿಷ ಹಾಕಿ ಕೊಡುವ ತಂತ್ರಕ್ಕೆ ಸುಯೋಧನ ಮುಂದಾಗ್ತಾನೆ.ಅವನ ಈ ತಂತ್ರ ಫಲಿಸುತ್ತೆ ,ವಿಷಯುಕ್ತ ಪಾಯಸವನ್ನು ತಿಂದ ಭೀಮಾ ಪ್ರಜ್ಞೆ ತಪ್ಪಿ ಬೀಳ್ತಾನೆ ಅವನ ಕೈ ಕಾಲುಗಳನ್ನು ಕಟ್ಟಿದ ದುರ್ಯೋಧನಾದಿಗಳು ಭೀಮನನ್ನು ಗಂಗಾ ನದಿಗೆ ಎಸೆದು ಬಿಡ್ತಾರೆ.

ಹೀಗೆ ಪ್ರಜ್ಞೆ ಇಲ್ಲದ ಭೀಮಾ ಗಂಗಾ ನದಿಯಲ್ಲಿ ಬಿದ್ದ ನಂತರ ಸರ್ಪ ಲೋಕವನ್ನು ತಲುಪಿದ್ದನಂತೆ ಅಲ್ಲಿ ಅವನನ್ನು ಹಾವುಗಳು ಕಚ್ಚುತ್ತವೆ ಆದರೆ ಹಾವಿನ ವಿಷ ಭೀಮನಿಗೆ ತಿನ್ನಿಸಲಾದ ವಿಷದ ವಿರುದ್ಧ ಕೆಲಸ ಮಾಡುತ್ತದೆ ಹೀಗಾಗಿ ಹಾವುಗಳು ಕಚ್ಚಿದ ಎಷ್ಟೋ ಸಮಯದ ನಂತರ ಭೀಮ ಎಚ್ಚರಗೊಳ್ಳುತ್ತಾನೆ.ಅವನು ತನ್ನ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿಕೊಂಡು ಹಾವುಗಳನ್ನು ಹಿಡಿದು ಬಡಿ ಯುತ್ತಿರುತ್ತಾನೆ.ಈ ವಿಚಾರ ವಾಸುಕಿಗೆ ಗೊತ್ತಾಗುತ್ತೆ ,ವಾಸುಕಿ ಸರ್ಪ ಲೋಕದ ರಾಜ.ಅವನು ಭೀಮನನ್ನು ತಡೆದು ನಿಲ್ಲಿಸ್ತಾನೆ ,ವಾಸುಕಿಗೆ ಭೀಮ ಯಾರು ಎನ್ನುವುದು ಗೊತ್ತು ಹೀಗಾಗಿ ಅವನು ಭೀಮನನ್ನು ಸ್ವಾಗತಿಸಿ ಅವನಿಗೆ ಶಕ್ತಿಶಾಲಿ ಔಷಧವೊಂದನ್ನು ಕೊಡ್ತಾನೆ.ಅದನ್ನು ಕುಡಿದ ಭೀಮನ ಮೈಯಲ್ಲಿದ್ದ ವಿಷ ನಾಶವಾಗುತ್ತೆ ಅಲ್ಲದೆ 10 ಸಾವಿರ ಆನೆಗಳ ಬಲವನ್ನು ಪಡೆಯುತ್ತಾನೆ.ಆ ನಂತರ ವಾಸುಕಿ ಮತ್ತೆ ಭೀಮನನ್ನು ಗಂಗಾ ನದಿಯ ದಡಕ್ಕೆ ತಂದು ಬಿಟ್ಟನಂತೆ.ಹೀಗೆ ವಾಸುಕಿ ಕೊಟ್ಟ ಔಷಧದಿಂದಾಗಿ ಭೀಮ ತನ್ನ ಸರಿಸಮಾನರಿಗಿಂತ ಹೆಚ್ಚು ಶಕ್ತಿಶಾಲಿ ಆಗ್ತಾನೆ.ಮುಂದೆ ಅವರೆಲ್ಲರ ಸಂಹಾರಕ್ಕೆ ಕೂಡ ಭೀಮಾ ಕಾರಣನಾಗುತ್ತಾನೆ.

ಇನ್ನು ಪಾಂಡವರ ಮೇಲೆ ದ್ವೇಷವನ್ನು ಬೆಳೆಸಿಕೊಳ್ಳುತ್ತ ಹೋಗುವ ದುರ್ಯೋಧನ ಅವರನ್ನು ಕೊಂದು ಬಿಡುವುದಕ್ಕೆ ಅರಗಿನ ಮನೆಯ ಷಡ್ಯಂತ್ರವನ್ನು ರೂಪಿಸಿದ್ದ ,ಶ್ರೀಕೃಷ್ಣನ ನೆರವಿನಿಂದ ಯುಯುತ್ಸು ಕೊಟ್ಟ ಸೂಚನೆಯ ಪರಿಣಾಮ ಅರಗಿನ ಮನೆಯಿಂದ ಹೊರಬೀಳುವ ಪಾಂಡವರು ಏಕಚಕ್ರನಗರದ ಬ್ರಾಹ್ಮಣರ ಮನೆಯೊಂದರಲ್ಲಿ ಅಜ್ಞಾತವಾಗಿ ಬದುಕುವುದಕ್ಕೆ ಶುರು ಮಾಡ್ತಾರೆ.ಅಲ್ಲಿ ಬಕಾಸುರ ಅನ್ನುವ ರಾಕ್ಷಸನೊಬ್ಬನ ಹಾವಳಿ ಮಿತಿಮೀರಿತ್ತು.ವಾರಕ್ಕೊಮ್ಮೆ ಒಂದು ಚಕ್ಕಡಿ ತುಂಬಾ ಆಹಾರ ತಗೊಂಡು ಬಕಾಸುರನಿಗೆ ತಲುಪಿಸಬೇಕಿತ್ತು .ಅಪರಿಮಿತ ಶಕ್ತಿಯಿಂದ ಅಹಂಕಾರ ಹಾಗೂ ಕ್ರೌರ್ಯವನ್ನು ಬೆಳೆಸಿಕೊಂಡಿದ್ದ ಬಕ ತನಗೆ ಆಹಾರವನ್ನು ತಂದು ಕೊಟ್ಟವರನ್ನು ಕೊಂದು ಹಾಕುತ್ತಿದ್ದ.ಅವನನ್ನು ನರಭಕ್ಷಕ ಅಂತ ಚಿತ್ರಿಸಲಾಗಿದೆ ಆದ್ರೆ ಬಹುಶಃ ಅವನು ಜನರಲ್ಲಿ ಭಯ ಹುಟ್ಟಿಸುವುದಕ್ಕಾಗಿ ಆಹಾರ ತಂದವರನ್ನು ಕೊಲ್ಲುತ್ತಿದ್ದ ಅಂತ ಕಾಣುತ್ತೆ. ಅಕಸ್ಮಾತ್ ಜನ ಆಹಾರ ಕಳಿಸದೆ ಇದ್ರೆ ಊರಿನ ಮೇಲೆ ಬಿದ್ದು ಕಾಟ ಕೊಡುತ್ತಿದ್ದ ಬಕಾಸುರ.

ಹೀಗಾಗಿ ಅವನಿಗೆ ವಾರಕ್ಕೊಂದು ದಿನ ಆಹಾರ ತಲುಪಿಸುವ ಜವಾಬ್ದಾರಿಯನ್ನು ಇಡೀ ಊರಿನ ಜನ ಹಂಚಿಕೊಂಡಿದ್ದರು.ಹೀಗಿದ್ದಾಗಲೇ ಅದೊಂದು ದಿನ ಪಾಂಡವರಿಗೆ ಆಶ್ರಯ ಕೊಟ್ಟಿದ್ದ ಬ್ರಾಹ್ಮಣನ ಮನೆಯ ಸರದಿ ಬಂತು ಆ ಮನೆಯವರು ಅಡುಗೆಯನ್ನು ಮಾಡಿ ಬಕಾಸುರನಿಗೆ ಕಳುಹಿಸುವುದಕ್ಕೆ ಮುಂದಾದರು ಆದರೆ ಆ ಮನೆಯ ಏಕಮಾತ್ರ ವಾರಸುದಾರನನ್ನು ಕಳಿಸುವುದಕ್ಕೆ ಅವರಿಗೆ ಮನಸ್ಸಿರಲಿಲ್ಲ.ಇಂಥ ಸಂದರ್ಭದಲ್ಲಿ ಕುಂತಿ ತನ್ನ ಮಗನನ್ನು ಕಳಿಸುವುದಾಗಿ ಹೇಳ್ತಾಳೆ ಅಷ್ಟೆ ಅಲ್ಲದೆ ಭೀಮನನ್ನು ಕರೆದು ಎಲ್ಲ ವಿಚಾರವನ್ನು ಹೇಳಿ ಬಕಾಸುರನ ಸಮಸ್ಯೆಯಿಂದ ಮುಕ್ತಿ ಕೊಡಿಸುವಂತೆ ಅಪ್ಪಣೆ ಕೊಡ್ತಾಳೆ.ಅದು ಆಶ್ರಯ ಕೊಟ್ಟ ಮನೆ ಹಾಗೂ ಊರಿನ ಋಣ ತೀರಿಸಿಕೊಳ್ಳುವ ಪ್ರಯತ್ನ. ತಾಯಿಯ ಆದೇಶದಂತೆ ಆಹಾರದ ಬಂಡಿಯೊಂದಿಗೆ ಬಕಾಸುರನ ಬಳಿಗೆ ಹೋದ ಭೀಮ ತಾನು ತಂದ ಎಲ್ಲ ಆಹಾರವನ್ನು ತಾನೇ ತಿಂದು ಬಕನನ್ನು ಕೂಡ ದ್ವಂದ್ವ ಯುದ್ಧದಲ್ಲಿ ಕೊಂದು ಏಕಚಕ್ರನಗರಿಗೆ ವಾಪಸ್ ಬರ್ತಾನೆ.

ಇನ್ನು ಜರಾಸಂಧ ಇವನ ಕಾಟಕ್ಕೆ ಸಾಕ್ಷಾತ್ ಶ್ರೀಕೃಷ್ಣನೇ ತನ್ನ ರಾಜಧಾನಿಯನ್ನು ಮಥುರಾದಿಂದ ದ್ವಾರಕೆಗೆ ಬದಲಾಯಿಸಿದ್ದ.
ಅಂಥ ಜರಾಸಂಧನ ಸಾವು ಕೂಡ ಭೀಮನ ಕೈಯಲ್ಲಿತ್ತು.ಹೀಗಾಗಿ ಪಾಂಡವರು ಇಂಧ್ರಪ್ರಸ್ತವನ್ನು ನಿರ್ಮಿಸಿಕೊಂಡ ಮೇಲೆ ರಾಜಸೂಯೆಯಾಗ ಮಾಡುವಾಗ ಕೃಷ್ಣ ಭೀಮನನ್ನು ಜರಾಸಂಧನ ಜೊತೆ ಮಲ್ಲಯುದ್ಧಕ್ಕೆ ಕರ್ಕೊಂಡು ಬರ್ತಾನೆ.ಆ ಮಲ್ಲಯುದ್ಧದಲ್ಲಿ ಭೀಮ ಜರಾಸಂಧ ನನ್ನು ಸಿಗಿದು ಹಾಕ್ತಾನೆ.ಅಲ್ಲಿಗೆ ಭೀಮನ ಸರಿಸಮಾನರಾದ ಇಬ್ಬರೂ ಬಲಶಾಲಿಗಳು ಭೀಮನಿಂದಲೆ ಅಂತ್ಯ ಕಾಣ್ತಾರೆ.

ಇನ್ನು ಮೂರನೆಯವನು ಕೀಚಕಈ ಕೀಚಕ ವಿರಾಟ ನಗರದ ಅರಸ ವಿರಾಟನ ಹೆಂಡತಿಯ ತಮ್ಮ ನಾಗಿದ್ದ .ಅವನು ಎಷ್ಟು ಬಲಶಾಲಿ ಅಂದ್ರೆ ಅವನಿರುವವರೆಗೆ ಶತ್ರುಗಳು ವಿರಾಟನ ಮೇಲೆ ಯುದ್ಧ ಸಾರುವುದಕ್ಕೆ ಖಂಡಿತ ಹೆದರುತ್ತಾ ಇದ್ರು.ಇಂಥ ಸಂದರ್ಭದಲ್ಲಿ ಪಾಂಡವರು ಅಜ್ಞಾತವಾಸದ ಸಮಯದಲ್ಲಿ ವಿರಾಟನಗರಕ್ಕೆ ಬರ್ತಾರೆ ಅಲ್ಲಿ ಸೈರಂದ್ರಿ ರೂಪದಲ್ಲಿದ್ದ ಪಾಂಚಾಲಿಯನ್ನು ಕಂಡ ಕೀಚಕ ಅವಳ ಮೇಲೆ ಮೋಹಿತನಾಗುತ್ತಾನೆ.ಆಕೆಯನ್ನು ತಾನು ಪಡೀಬೇಕು ಅಂತ ಹಂಬಲಿಸುತ್ತಾನೆ.ಈ ವಿಚಾರ ಗೊತ್ತಾದ ಭೀಮಾ ತಾನೇ ಸೈರಂದ್ರಿಯ ರೂಪ ಧರಿಸಿ ಕೀಚಕನನ್ನು ಸಂಹರಿಸಿ ಬಿಡ್ತಾನೆ.

ಇನ್ನು ಕಡೆಗೆ ಉಳಿಯುವುದು ದುರ್ಯೋದನ ಹಾಗೂ ಭೀಮಾ.ಅವರಿಬ್ಬರು ಕುರುಕ್ಷೇತ್ರ ಕದನ ಭೂಮಿಯಲ್ಲಿ ಎದುರುಗೊಳ್ಳುತ್ತಾರೆ.ಯುದ್ಧದ ಕೊನೆಯ ದಿನ ವೈಶಂಪಾಯನ ಸರೋವರದ ತೀರದಲ್ಲಿ ಭೀಮಾ ಮತ್ತು ದುರ್ಯೋಧನ ಇಬ್ಬರೇ ದ್ವಂದ್ವಕ್ಕೆ ನಿಲ್ತಾರೆ.ಆ ಯುದ್ಧದಲ್ಲಿ ಭೀಮ ಬಸವಳಿದಂತೆ ಕಾಣ್ತಾನೆ ಯಾಕೆಂದ್ರೆ ದುರ್ಯೋಧನನ ತಾಯಿ ಗಾಂಧಾರಿ ತನ್ನ ಮಗನ ಇಡೀ ದೇಹಕ್ಕೆ ವಜ್ರ ಲೇಪವನ್ನು ಮಾಡಿ ಅವನ ದೇಹವನ್ನು ವಜ್ರದಂತೆ ಗಟ್ಟಿ ಮಾಡುವುದಕ್ಕೆ ನಿರ್ಧಾರ ಮಾಡಿರುತ್ತಾಳೆ ಅದಕ್ಕಾಗಿ ವಿವಸ್ತ್ರನಾಗಿ ಬರುವಂತೆ ಆಕೆ ದುರ್ಯೋಧನನಿಗೆ ಹೇಳಿದ್ದಳು ಆದರೆ ದುರ್ಯೋಧನ ತಾಯಿಯ ಮುಂದೆ ವಿವಸ್ತ್ರನಾಗಿ ನಿಲ್ಲುವುದಕ್ಕೆ ನಾಚಿ ಕೌಪೀನಧಾರಿಯಾಗಿ ಬಂದಿದ್ದ.

ಅವನ ತೊಡೆ ಭಾಗ ಮಾತ್ರ ಬಟ್ಟೆಗಳಿಂದ ಮುಚ್ಚಿತ್ತು ಹೀಗಾಗಿ ಗಾಂಧಾರಿ ಅವನ ಸೊಂಟದ ಭಾಗವನ್ನು ಬಿಟ್ಟು ದೇಹದ ಉಳಿದೆಲ್ಲ ಭಾಗಕ್ಕೆ ಲೇಹ್ಯವೊಂದನ್ನು ಲೇಪಿಸುವ ಮೂಲಕ ಅವನ ದೇಹವನ್ನು ವಜ್ರ ಕಾಯವನ್ನಾಗಿ ಮಾಡಿದ್ಲು ಆದರೆ ಅದೊಂದು ತೊಡೆಯ ಭಾಗ ಮಾತ್ರ ಲೇಪನ ರಹಿತವಾಗಿ ಅದು ಸಾಮಾನ್ಯವಾಗಿ ಉಳಿದುಕೊಂಡಿತ್ತು.ಹೀಗಾಗಿ 10 ಸಾವಿರ ಆನೆಗಳ ಬಲ ಇದ್ರೂ ಕೂಡ ಭೀಮಾ ದುರ್ಯೋದನನ ಮೇಲೆ ಎಷ್ಟೇ ಪ್ರಹಾರ ಮಾಡಿದರು ಅವನು ದಣಿವೇ ಇಲ್ಲದಂತೆ ಮತ್ತೆ ಮತ್ತೆ ಎದ್ದು ನಿಳ್ಳುತ್ತಿದ್ದ.ಈ ಸಂದರ್ಭದಲ್ಲಿ ಶ್ರೀಕೃಷ್ಣ ಭೀಮನಿಗೆ ಸನ್ನೆ ಮಾಡ್ತಾನೆ ದುರ್ಯೋಧನನ ತೊಡೆಗಳನ್ನು ಮುರಿದು ಹಾಕುವಂತೆ ಸೂಚನೆ ಕೊಡ್ತಾನೆ.ಹೇಗಿದ್ದರೂ ಭೀಮನದ್ದು ಒಂದು ಪ್ರತಿಜ್ಞೆ ಬಾಕಿ ಇರುತ್ತೆ , ಪುರಸಭೆಯಲ್ಲಿ ಪಾಂಚಾಲಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಸುಯೋಧನ ತನ್ನ ತೊಡೆಗಳನ್ನು ತೋರಿಸಿ ಪಾಂಚಾಲಿಗೆ ತೊಡೆಗಳ ಮೇಲೆ ಬಂದು ಕೂಡುವಂತೆ ಸನ್ನೆ ಮಾಡಿದ್ದ ಆವತ್ತು ಭೀಮಾ ಸುಯೋಧನನ ತೊಡೆಗಳನ್ನು ಮುರಿದು ಹಾಕ್ತೀನಿ ಅಂತ ಪ್ರತಿಜ್ಞೆ ಮಾಡಿದ್ದ .ಆ ಪ್ರತಿಜ್ಞೆಯನ್ನು ನೆನಪು ಮಾಡಿಕೊಂಡ ಭೀಮಾ ಗದಾಯುದ್ಧದ ನಿಯಮವನ್ನು ಮೀರಿ ಸೊಂಟದ ಕೆಳಗೆ ಸುಯೋಧನನ ತೊಡೆಗಳ ಭಾಗಕ್ಕೆ ಪ್ರಹಾರ ಮಾಡಿಬಿಡ್ತಾನೆ. ಅಲ್ಲಿಗೆ ದುರ್ಯೋಧನನ ಅಂತ್ಯವಾಗುತ್ತದೆ.

ಗೆಳೆಯರೇ ಇದು ಐವರು ಸಮಬಲರ ಸಣ್ಣ ವಿಚಾರ.ಇಲ್ಲಿ ಯಾರಿಗೆ ಯಾರು ಕಡಿಮೆ ಇರಲಿಲ್ಲ ಆದರೆ ಧರ್ಮ ಸಂಸ್ಥಾಪನೆಯ ಕಾರಣ ಆ ಜಗನ್ನಾಟಕ ಸೂತ್ರಧಾರಿ ಆಡಿಸಿದ ಆಟಕ್ಕೆ 4 ಜನ ಪರಾಕ್ರಮಿಗಳು ಸಾವನ್ನಪ್ಪುತ್ತಾರೆ.ಆ ನಂತರದಲ್ಲಿ ಭೀಮಾ ಕೂಡ ಸ್ವರ್ಗಾರೋಹಣ ಸಮಯದಲ್ಲಿ ಹಿಮಾಲಯದ ತಪ್ಪಲಲ್ಲಿ ಸಾವಿಗೆ ಶರಣಾಗುತ್ತಾನೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಧನ್ಯವಾದಗಳು.

Related Post

Leave a Comment