ಈಗಿನ ಜೀವನ ಶೈಲಿಯಲ್ಲಿ ನಿದ್ರಾಹೀನತೆ ಎನ್ನುವುದು ಸಾಮನ್ಯವಾಗಿದೆ.ನಿದ್ರಾಹೀನತೆ ಶುರು ಆಗುವುದೇ ಮಲಗುವ ಕೋಣೆಯಲ್ಲಿ.ಇದರ ಬಗ್ಗೆ ಗಮನವರಿಸಬೇಕಾಗುತ್ತದೆ.ಮೊದಲು ಮಲಗುವ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಮನಸ್ಸಿಗೆ ಖುಷಿ ಕೊಡುವ ಹಾಗೆ ಮಲಗುವ ಕೋಣೆಯನ್ನು ರಚನೆ ಮಾಡಿಕೊಳ್ಳಬೇಕು.ಕೆಲವರು ಹಲವು ಸಾಮಾನುಗಳನ್ನು ಬೆಡ್ ಕೆಳಗೆ ಇಡುತ್ತಾರೆ.ಇದರಿಂದ ದೂಳು ಹೆಚ್ಚಾಗಿ ಮಲಗುವುದಕ್ಕೂ ಕಿರಿಕಿರಿ ಉಂಟಾಗುತ್ತದೆ ಹಾಗೂ ನೆಗೆಟಿವ್ ಎನರ್ಜಿ ಹೆಚ್ಚಾಗಿ ನಿದ್ರೆಗೆ ತೊಂದರೆ ಆಗುತ್ತದೆ.
ನಿದ್ರೆಗೆ ತೊಂದರೆ ಉಂಟಾದಾಗ ಸಂಬಂಧಗಳಲ್ಲಿ ಸಿಟ್ಟು ಜಾಸ್ತಿ ಆಗುತ್ತದೆ.ಹಾಗಾಗಿ ಮಂಚದ ಕೆಳಗೆ ಇರುವ ವಸ್ತುಗಳನ್ನು ಆದಷ್ಟು ಇಡುವುದನ್ನು ಕಡಿಮೆ ಮಾಡಿ. ಅಷ್ಟೇ ಅಲ್ಲದೆ ಕೆಲವರು ಮಲಗುವ ಕೋಣೆಯಲ್ಲಿ ಫ್ರಿಜ್, ಗ್ಯಾಸ್, ಸಿಲೆಂಡರ್ ಇಡುತ್ತಾರೆ.ಯಾವುದೇ ಕಾರಣಕ್ಕೂ ಫ್ರಿಜ್, ಗ್ಯಾಸ್, ಸಿಲೆಂಡರ್ ಅನ್ನು ಮಲಗುವ ಕೋಣೆಯಲ್ಲಿ ಇಡಬೇಡಿ.ಇದರಿಂದ ಮಾನಸಿಕ ಒತ್ತಡ ಜಾಸ್ತಿ ಆಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಮಂಚ ಮರದ್ದೆ ಆಗಿರಬೇಕು.ಯಾವುದೇ ಕಾರಣಕ್ಕೂ ಕಬ್ಬಿಣದ ಮಂಚದ ಮೇಲೆ ಮಲಗುವುದಕ್ಕೆ ಹೋಗಬೇಡಿ.ಮಲಗುವ ಕೋಣೆಯಲ್ಲಿ ಸ್ನೇಕ್ ಪ್ಲಾಂಟ್ ಹಾಗೂ ಮನಿ ಪ್ಲಾಂಟ್ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು.ಆದಷ್ಟು ಮುಳ್ಳು ಇರುವ ಪ್ಲಾಂಟ್ ಅನ್ನು ಮನೆಯಲ್ಲಿ ಹಾಗೂ ಮಲಗುವ ಕೋಣೆಯಲ್ಲಿ ಇಡಬಾರದು.ಕೆಲವರಿಗೆ ಮನೆಯ ಒಳಗೆ ಚಪ್ಪಲಿ ಹಾಕಿಕೊಂಡು ಓಡಾಡುವ ಪದ್ಧತಿ ಇರುತ್ತದೆ.
ಆದಷ್ಟು ಮಲಗುವ ಕೋಣೆಯಲ್ಲಿ ಚಪ್ಪಲಿಯನ್ನು ಮಂಚದ ಕೆಳಗೆ ಹಾಕುವುದನ್ನು ಅವಾಯ್ಡ್ ಮಾಡಿ.ಈ ರೀತಿ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ಜೊತೆಯಲ್ಲಿ ಕೆಟ್ಟ ಕನಸುಗಳು ಕೂಡ ಹೆಚ್ಚಾಗುತ್ತಾ ಹೋಗುತ್ತದೆ.ಮಲಗುವ ಮೊದಲು ದೇವರಿಗೆ ನಮಸ್ಕಾರ ಮಾಡಿ ಆಂಜನೇಯ ಸ್ವಾಮಿಯ ಸೂತ್ರವನ್ನು ಹೇಳಿಕೊಂಡು ಮಲಗಿ.ಯಾವುದೇ ರೀತಿಯ ಕೆಟ್ಟ ಕನಸು ಸಹ ಬೀಳುವುದಿಲ್ಲ ಹಾಗೂ ತುಂಬಾ ಆರಾಮಾಗಿ ನಿದ್ದೆಯನ್ನು ಮಾಡಬಹುದು.
ಒಂದು ವೇಳೆ ಮಲಗುವ ಕೋಣೆಯಲ್ಲಿ ಫ್ಯಾನ್ ಹಾಳಾಗಿದ್ದಾರೆ, ಬಾಗಿಲು ಬಿರುಕು ಇರುವುದನ್ನು ಬೇಗ ಸರಿ ಮಾಡಿಕೊಳ್ಳಿ.ಮನುಷ್ಯರಿಗೆ ಸಹಜವಾಗಿ 7 ರಿಂದ 8 ಗಂಟೆಗಳ ಕಾಲ ನಿದ್ದೆ ಆಗಲೇಬೇಕು.ನಿದ್ದೆ ಚೆನ್ನಾಗಿ ಆಗದೆ ಇದ್ದಾರೆ ಮನಸ್ಸಿನಲ್ಲಿ ಕಿರಿ ಕಿರಿ ಶುರು ಆಗುತ್ತದೆ.ಇದರಿಂದ ಕುಟುಂಬದ ಮೇಲೆ ಪರಿಣಾಮ ಬಿರುತ್ತದೆ.ಆದಷ್ಟು ಆರಾಮಾಗಿ ನಿದ್ದೆಯನ್ನು ಮಾಡಿ.ಒಂದು ಒಳ್ಳೆಯ ವಾತಾವರಣವನ್ನು ಕ್ರಿಯೇಟ್ ಮಾಡಿಕೊಳ್ಳಿ.
ಮಲಗುವಾಗ ಆದಷ್ಟು ಮೊಬೈಲ್, ಲ್ಯಾಪ್ ಟಾಪ್ ಅವಾಯ್ಡ್ ಮಾಡಿ.ಮಲಗುವ ಎರಡು ಗಂಟೆ ಮುಂಚೆ ಊಟವನ್ನು ಮಾಡಿ ಹಾಗೂ ಮಲಗುವ ಮೊದಲು ಹಾಲು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.ನಿದ್ದೆ ಚೆನ್ನಾಗಿ ಬರಬೇಕು ಎಂದರೆ ಮಲಗುವ ದಿಕ್ಕು ಕೂಡ ತುಂಬಾನೇ ಮುಖ್ಯವಾಗಿರುತ್ತದೆ.ಉತ್ತರ ಕಡೆ ಯಾವುದೇ ಕಾರಣಕ್ಕೂ ತಲೆ ಹಾಕಿ ಮಲಗಬಾರದು.ಈ ರೀತಿ ಮಲಗಿದಾಗ ಕೆಟ್ಟ ಕನಸು ಹೆಚ್ಚಾಗಿ ಬೀಳುತ್ತದೆ.
ಅಷ್ಟೇ ಅಲ್ಲದೆ ಆರೋಗ್ಯದಲ್ಲಿ ಏರು ಪೆರು ಆಗುತ್ತದೆ.ಆದಷ್ಟು ದಕ್ಷಿಣ ಕಡೆ ತಲೆ ಹಾಕಿ ಮಲಗುವುದು ತುಂಬಾ ಒಳ್ಳೆಯದು.ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದಾಗ ಶ್ರೀಮಂತಿಕೆ ಹೆಚ್ಚಾಗುತ್ತದೆ.ಉತ್ತಮ ಅರೋಗ್ಯ ಕೂಡ ಲಭಿಸುತ್ತದೆ.ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು.ಈ ದಿಕ್ಕಿನಲ್ಲಿ ಮಲಗುವುದರಿಂದ ಮಕ್ಕಳಿಗೆ ಏಕಾಗ್ರತೆ ಹೆಚ್ಚಾಗುತ್ತದೆ ಹಾಗೂ ನೆನಪಿನ ಶಕ್ತಿ ಜಾಸ್ತಿ ಆಗುತ್ತದೆ.ಪಶ್ಚಿಮ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆ ಹಾಕಿ ಮಲಗಬಾರದು.ತಲೆಯನ್ನು ಪಶ್ಚಿಮ ಕಡೆ ಹಾಕಿ ಮಲಗಿದಾಗ ಪಾದಗಳು ಪೂರ್ವದ ಕಡೆ ಇರುತ್ತದೆ. ಪೂರ್ವ ದಿಕ್ಕು ದೇವರು ಇರುವಂತಹ ದಿಕ್ಕು. ಹಾಗಾಗಿ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬಾರದು.ಈ ರೀತಿ ಕೆಲವು ಜೀವನ ಶೈಲಿಯನ್ನು ಮಾಡಿಕೊಂಡಾಗ ನಿದ್ರಾಹೀನತೆ ಇರುವುದಿಲ್ಲ.