ನಾವು ಮಾಡುವ ಕೆಲವು ಮುಖ್ಯ ತಪ್ಪುಗಳೇ ನಮ್ಮ ಕೂದಲ ಹಾಗೂ ತ್ವಚೆಯಲ್ಲಿ ಉಂಟಾಗುವ ಹಲವಾರು ತೊಂದರೆಗೆ ಕಾರಣ ಆದರೆ ನಾವೆಲ್ಲ ಇದನ್ನು ಗಮನಿಸದೇ ಪದೇ ಪದೇ ಅದೇ ತಪ್ಪುಗಳನ್ನು ಮಾಡಿ ಕೂದಲಿನ ಸಮಸ್ಯೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.ಅದನ್ನು ನಾವು ಸ್ನಾನ ಮಾಡುವಾಗ ಮಾಡುವ ಕೆಲವು ಮುಖ್ಯ ತಪ್ಪುಗಳಿಂದ ನಾವೆಲ್ಲ ಪದೇ ಪದೆ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದೇವೆ.ಆ ತಪ್ಪುಗಳು ಯಾವುವು ಎಂದು ತಿಳಿಯೋಣ ಬನ್ನಿ..
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಬಿಸಿ ನೀರಿನ ಸ್ನಾನ:ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿನ ಸ್ನಾಯುಗಳಿಗೆ ಆರಾಮ ಸಿಗುತ್ತದೆ ನಿಜ ಆದರೆ ನಮ್ಮ ಚರ್ಮದಲ್ಲಿನ ನೈಸರ್ಗಿಕ ಎಣ್ಣೆ ಬಿಸಿ ನೀರಿನಿಂದ ಕಳೆದುಹೋಗುತ್ತದೆ ಇದರಿಂದ ಚರ್ಮ ಒಣಗಿದಂತೆ ಆಗುತ್ತದೆ.ಬೇಗನೆ ನೆರಿಗೆಗಳು ಮೂಡುವುದು ಮುಂತಾದ ತೊಂದರೆಗಳು ಎದುರಾಗುತ್ತವೆ.ಇನ್ನು ತಲೆಯ ಸ್ನಾನ ಮಾಡುವಾಗಲೂ ಅತಿ ಬಿಸಿನೀರಿನಿಂದ ಕೂದಲನ್ನು ತೊಳೆದು ಕೊಳ್ಳಬಾರದು ಇದರಿಂದ ಕೂದಲು ಕೋಶದಿಂದ ದುರ್ಬಲವಾಗಿ ಹೆಚ್ಚಾಗಿ ಉದುರುತ್ತದೆ ಅಷ್ಟೇ ಅಲ್ಲ ಕೂದಲು ಒರಟು ಹಾಗೂ ನಿರ್ಜೀವವಾಗುತ್ತದೆ.
ಇನ್ನು ಅಧಿಕ ಬಿಸಿ ನೀರಿನಿಂದ ತಲೆ ತೊಳೆದುಕೊಳ್ಳುವುದರಿಂದ ಕೂದಲ ಬುಡದಲ್ಲಿರುವ ನೈಸರ್ಗಿಕ ಎಣ್ಣೆ ಬಿಸಿ ನೀರಿನಿಂದ ಕಳೆದು ಹೋಗುತ್ತದೆ ಮತ್ತು ಇದರಿಂದ ತಲೆಹೊಟ್ಟಿನ ಸಮಸ್ಯೆ ಕೂಡ ಎದುರಾಗುತ್ತದೆ ಆದ್ದರಿಂದ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಬಳಸಿದರೆ ಉತ್ತಮ.ಸರಿಯಾದ ಸೋಪನ್ನು ಬಳಸಿ ನಾವು ಬಳಸುವ ಸೋಪಿನಲ್ಲಿ ಅಧಿಕ ಬೇಡದ ರಾಸಾಯನಿಕಗಳು ಇರಬಾರದು ಇದರಿಂದ ಚರ್ಮದ ಅಲರ್ಜಿ ಉಂಟಾಗುತ್ತದೆ.ಇನ್ನು ಕೆಲವು ಸೋಪು ಬಳಸಿದ ನಂತರ ನಿಮಗೆ ತುರಿಕೆ ಹಾಗೂ ಗುಳ್ಳೆಗಳು ಉಂಟಾಗುತ್ತಿದ್ದರೆ ತಕ್ಷಣ ಅಂತಹ ಸೋಪನ್ನು ಬದಲಾಯಿಸಿ.
ಇನ್ನು ಮನೆ ಮಂದಿಯೆಲ್ಲ ಒಂದೇ ಸೋಪನ್ನು ಬಳಸಬೇಡಿ ಇದರಿಂದ ಸೋಪಿನಲ್ಲಿ ಬ್ಯಾಕ್ಟೀರಿಯಾಗಳು ಜಮೆಯಾಗಿ ಮೊಡವೆ ಹಾಗೂ ಅಲರ್ಜಿಗಳಿಗೆ ಕಾರಣವಾಗಬಹುದು ಅಷ್ಟೇ ಅಲ್ಲ ಆದಷ್ಟು ಸೋಪ್ ಖರೀದಿಸುವಾಗ ಟಿಎಫ್ಎಮ್ ಅನ್ನು ಪರಿಶೀಲಿಸಿ ಖರೀದಿಸಿ. ನೀವು ಬಳಸುವ ಸೋಪ್ ನಲ್ಲಿ ಟಿಎಫ್ಎಂ ಶೇಕಡ 75 ಕ್ಕಿಂತ ಅಧಿಕವಿರಬೇಕು ಆದ್ದರಿಂದ ಸೋಪ್ ಖರೀದಿಸುವ ಮೊದಲು ಸೋಪ್ ನಲ್ಲಿರುವ ಸಾಮಗ್ರಿಗಳನ್ನು ಪರಿಶೀಲಿಸಿ. ಟಿಎಫ್ಎಂ 75ಕ್ಕಿಂತ ಅಧಿಕವಿದ್ದರೆ ಅಂತಹ ಸೋಪನ್ನು ಖರೀದಿಸಿ.
ಶ್ಯಾಂಪು ಖರೀದಿಸುವಾಗ ಎಚ್ಚರವಾಗಿರಿ ಶಾಂಪೂ ಖರೀದಿಸುವಾಗ ನಿಮ್ಮ ಕೂದಲ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿ ಆದಷ್ಟು ಮೈಲ್ಡ್ ಶ್ಯಾಂಪೂಗಳನ್ನು ಬಳಸಿ.ನೀವು ಬಳಸುವ ಶ್ಯಾಂಪೂವಿನಲ್ಲಿ ಪ್ಯಾರಬೆನ್ ,ಸಲ್ಫೆಡ್ ಇರಬಾರದು ಇಂತಹ ಹಾನಿಕಾರಕ ರಾಸಾಯನಿಕಗಳಿಂದ ಕೂದಲು ಉದುರುವುದು ಹಾಗೂ ಬಿಳಿ ಕೂದಲಿನ ಸಮಸ್ಯೆ ಎದುರಾಗುತ್ತದೆ ಆದಷ್ಟು ನೈಸರ್ಗಿಕವಾಗಿ ಸಿಗುವ ಸೀಗೆಕಾಯಿ ಪುಡಿಯನ್ನು ಬಳಸಿದರೆ ಇನ್ನೂ ಉತ್ತಮ.
ಅತಿಯಾಗಿ ಶ್ಯಾಂಪುವನ್ನು ಬಳಸುವುದು:ಕೂದಲಿಗೆ ಎಣ್ಣೆ ಹಚ್ಚಿದಾಗ ಅತಿಯಾಗಿ ಶಾಂಪೂವಿನ ಬಳಕೆ ಮಾಡುವವರು ಇದ್ದಾರೆ ,ಈ ರೀತಿ ಮಾಡದಿರಿ.ಪ್ರತಿ ಬಾರಿ ಕೂದಲು ತೊಳೆಯುವಾಗ ಚಿಕ್ಕ ಕೂದಲಿಗೆ ಒಂದು ನಾಣ್ಯದಷ್ಟು ಶ್ಯಾಂಪು ಬಳಸಿ ಹಾಗೂ ನಿಮ್ಮ ಕೂದಲು ಉದ್ದವಿದ್ದರೆ ಎರಡು ನಾಣ್ಯದಷ್ಟು ಶ್ಯಾಂಪು ಸಾಕಾಗುತ್ತದೆ.ಶ್ಯಾಂಪುವನ್ನು ಒಮ್ಮೆಗೆ ನೆತ್ತಿಗೆ ಹಾಕಿ ಉಜ್ಜದಿರಿ ಇದರಿಂದ ನೆತ್ತಿಯ ಭಾಗದ ಕೂದಲು ಬೇಗನೆ ಉದುರುರುತ್ತದೆ.ಯಾವಾಗಲೂ ಶ್ಯಾಂಪುವನ್ನು ನೀರಿನಲ್ಲಿ ಡೈಲ್ಯೂಟ್ ಮಾಡಿ ಬಳಸಿ ಇದರಿಂದ ಶ್ಯಾಂಪು ಕಡಿಮೆ ಬಳಕೆಯಾಗುವುದರ ಜೊತೆಗೆ ಕೂದಲ ಎಲ್ಲ ಭಾಗಗಳು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ.
ಮೈ ಉಜ್ಜುವ ಬ್ರಶನ್ನು ಬದಲಿಸದೇ ಇರುವುದು ಮೈ ಉಜ್ಜುವ ಬ್ರಶ್ ಬಳಸುವುದು ಒಳ್ಳೆಯದೇ ಇದರಿಂದ ಸತ್ತ ಚರ್ಮದ ಕೋಶ ಎದ್ದು ಹೋಗುತ್ತದೆ ಆದರೆ ಒಂದೇ ಬ್ರಶನ್ನು ಬಹಳ ದಿನ ಬಳಸಬೇಡಿ. ಇದರಲ್ಲಿ ಬ್ಯಾಕ್ಟೀರಿಯಾಗಳು ಶೇಖರಣೆಯಾಗುತ್ತದೆ ಇಂತಹ ಬ್ರಶ್ ನಿಂದ ಮೈಯುಜ್ಜಿ ಕೊಂಡರೆ ತುರಿಕೆ ಕಾಣಿಸಿಕೊಳ್ಳಬಹುದು ಆದ್ದರಿಂದ ಫ್ರೆಶ್ ಅನ್ನು ತಿಂಗಳಿಗೊಮ್ಮೆ ಬದಲಾಯಿಸುತ್ತಾ ಇರಿ.ಸ್ನಾನವಾದ ನಂತರ ಮುಖವನ್ನು ತೊಳೆಯಿರಿ. ತಲೆ ಸ್ನಾನ ಮಾಡಿದಾಗ ಕೂದಲಲ್ಲಿ ಇರುವ ಎಣ್ಣೆ ಅಥವಾ ಬ್ಯಾಕ್ಟೀರಿಯಾಗಳು ನಮ್ಮ ಮುಖದಲ್ಲಿ ಬಂದು ಕುಳಿತಿರಬಹುದು ಇದರಿಂದ ಮೊಡವೆಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಸ್ನಾನ ಮಾಡಿದ ನಂತರ ಮುಖವನ್ನು ತೊಳೆಯಿರಿಹಾಗೆ ತಲೆ ಕೂದಲು ತೊಳೆದ ನಂತರ ಮೈ ತೊಳೆದುಕೊಳ್ಳಿ ಇಲ್ಲವಾದಲ್ಲಿ ಬೆನ್ನಿನಲ್ಲಿ ಗುಳ್ಳೆಗಳಾಗುವ ಸಾಧ್ಯತೆ ಹೆಚ್ಚು.
ಮುಖಕ್ಕೆ ಫೇಸ್ ವಾಷ್ ಬಳಸಿ:ನಾವು ಎಷ್ಟೇ ಸ್ವಚ್ಛವಾಗಿದ್ದರೂ ನಮ್ಮ ದೇಹದಲ್ಲಿ ಹಲವಾರು ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳು ಇರುತ್ತದೆ. ಇವೆಲ್ಲ ಸೋಪ್ನಲ್ಲಿ ಅಂಟಿಕೊಂಡಿರಬಹುದು ಅದೇ ಸೋಪಿನಿಂದ ಮುಖವನ್ನು ತೊಳೆದರೆ ಇದರಿಂದ ಮೊಡವೆಗಳು ,ಚಿಕ್ಕ ಚಿಕ್ಕ ಗುಳ್ಳೆಗಳಾಗಬಹುದು.ಅಷ್ಟೇ ಅಲ್ಲದೆ ನಮ್ಮ ಮುಖದ ಚರ್ಮ ತುಂಬಾ ಸೂಕ್ಷ್ಮ ಸಾಬೂನಿನಲ್ಲಿ ಸಾಕಷ್ಟು ರಾಸಾಯನಿಕಗಳಿವೆ ಇದರಿಂದ ಮುಖದಲ್ಲಿ ನೆರಿಗೆಗಳು ಮೂಡುವ ಸಾಧ್ಯತೆ ಹೆಚ್ಚು ಆದ್ದರಿಂದ ಫೇಸ್ ವಾಷ್ ಅಥವಾ ಮನೆಯಲ್ಲಿ ತಯಾರಿಸಿದ ಫೇಸ್ ವಾಷ್ ಪುಡಿಗಳನ್ನು ಬಳಸುವುದು ಉತ್ತಮ.
ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap