ಈಗ ದೇಶಾದ್ಯಂತ ಎಲ್ಲೆಡೆ ಕೊರೋನಾವೈರಸ್ ಹಾವಳಿಯಿಂದ ಜನರು ಬೆಚ್ಚಿಬಿದ್ದಿದ್ದಾರೆ.ಇನ್ನೂ ಕೋವಿಡ್ ಬಂದ ನಂತರ ಅದರಿಂದ ಗುಣಮುಖವಾಗಿರುವವರ ಅನೇಕ ಜನರಲ್ಲಿ ಹೆಚ್ಚು ಸುಸ್ತು ಕಾಡಲು ಶುರುವಾಗುತ್ತಿದೆ.ಇನ್ನೂ ಯಾವುದೇ ರೀತಿಯ ಆಹಾರ ಸೇವಿಸಿದರೂ ಎನರ್ಜಿ ಜಾಸ್ತಿಯಾಗದೆ ನಿಶ್ಶಕ್ತಿ ,ಸುಸ್ತು ಹೆಚ್ಚಾಗಿ ಕಾಡುತ್ತದೆ.ಅಂತಹ ಸುಸ್ತು ನಿಶ್ಶಕ್ತಿಯನ್ನು ನಿವಾರಿಸುವಂತಹ ಕೆಲವು ಸುಲಭವಾಗಿ ಮಾಡಿಕೊಳ್ಳುವ ಎನರ್ಜಿ ಡ್ರಿಂಕ್ ಗಳನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಅಂಜೂರ ಮತ್ತು ಒಣ ದ್ರಾಕ್ಷಿ-ಅಂಜೂರ ಮತ್ತು ಒಣ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಶ್ಯಕ್ತಿ , ಸುಸ್ತು ಕಡಿಮೆಯಾಗುತ್ತದೆ.(ಮಧುಮೇಹ ಇರುವಂಥವರು ಇದನ್ನು ಸೇವಿಸುವುದು ಬೇಡ).ನಟ್ಸ್ ಅಂದರೆ ಕಡಲೆ ಬೀಜ ,ಗೋಡಂಬಿ,ಬಾದಾಮಿ, ವಾಲ್ ನಟ್,ಪಿಸ್ತ ಇವುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸುಸ್ತು ,ನಿಶ್ಶಕ್ತಿ ದೂರವಾಗುತ್ತದೆ ಜೊತೆಗೆ ಸುಲಭವಾಗಿ ಜೀರ್ಣವಾಗುತ್ತದೆ.
ಓಟ್ಸ್ಓಟ್ಸ್ ನಲ್ಲಿ ನೀರಿನಲ್ಲಿ ಕರಗುವಂತಹ ನಾರಿನಂಶವಿದೆ.ಓಟ್ಸ್ ಅನ್ನು ಬೇಯಿಸಿ ಅದಕ್ಕೆ ಒಣದ್ರಾಕ್ಷಿ ಮತ್ತು ಕೆಲವು ಹಣ್ಣುಗಳನ್ನು ಕಟ್ ಮಾಡಿ ಹಾಕಿ ಬೆಳಿಗ್ಗೆ ತಿಂಡಿ ಸಮಯದಲ್ಲಿ ತಿನ್ನುವುದರಿಂದ ನಿಶ್ಶಕ್ತಿ, ಸುಸ್ತು ನಿವಾರಣೆಯಾಗುತ್ತದೆ.ಸಲಾಡ್-ಬಾಳೆಹಣ್ಣು ,ಸೇಬು ಹಣ್ಣನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಅದಕ್ಕೆ ಕ್ಯಾರೆಟನ್ನು ತುರಿದು ಹಾಕಿ ಅದಕ್ಕೆ ಅರ್ಧ ಚಮಚ ಬಾದಾಮಿ ಪೌಡರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷ ಬಿಟ್ಟುಸೇವಿಸುವುದರಿಂದ ಸುಸ್ತು ,ನಿಶ್ಶಕ್ತಿ ದೂರವಾಗುತ್ತದೆ.ಸಪೋಟ-ಸಪೋಟ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಸುಸ್ತಿನ ಜೊತೆಗೆ ಬಾಯಾರಿಕೆಯನ್ನು ನಿವಾರಣೆ ಮಾಡುತ್ತದೆ.
ಚಿಕ್ಕು ಹಣ್ಣಿನ ಒಳ ತಿರುಳಿನ ಜೊತೆಗೆ ಖರ್ಜೂರ ಅಥವಾ ಉತ್ತುತ್ತೆಯನ್ನು ಹಾಗೂ ಕಾಲು ಚಮಚ ಗಸಗಸೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಜೊತೆಗೆ ಕಾಯಿಸಿ ಆರಿಸಿದ ಹಾಲನ್ನು ಹಾಕಿ 5 ನಿಮಿಷ ಬಿಟ್ಟು ಸೇವಿಸುವುದರಿಂದ ಇದು ಸುಸ್ತು ,ನಿಶ್ಯಕ್ತಿ ದೂರ ಮಾಡಲು ಸಹಾಯವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ.
ಧನ್ಯವಾದಗಳು.