ಸಾಮಾನ್ಯವಾಗಿ ಪ್ರತಿಯೊಬ್ಬರೂ ಉದ್ಯೋಗ ಮಾಡುತ್ತಾರೆ ಆದರೆ ಯಾವ ರಾಶಿಯವರಿಗೆ ಯಾವ ಉದ್ಯೋಗ ಮಾಡಿದರೆ ಉತ್ತಮ ಎಂದು ಜಾತಕದ ಪ್ರಕಾರ ತಿಳಿದುಕೊಳ್ಳಬಹುದು.ಇನ್ನೂ ಫಲ ಜ್ಯೋತಿಷ್ಯ ಅಂತಿಮವಲ್ಲ ಅದು ಕೇವಲ ಮಾರ್ಗದರ್ಶಕವಾಗಿದೆ ಉದ್ಯೋಗದ ಆಯ್ಕೆ ನಮ್ಮದೇ ಆಗಿರಬೇಕು.ವರ್ತಮಾನದಲ್ಲಿ ಬದುಕಬೇಕು ಎಂಬುದು ನಿಜ ಅದೇ ರೀತಿ ಭವಿಷ್ಯದ ಬಗ್ಗೆ ಸ್ವಲ್ಪ ಕಾಳಜಿ ಇರುವುದು ಎನ್ನುವುದೂ ಅಷ್ಟೇ ಮುಖ್ಯ.ಹಾಗಾಗಿ ಭವಿಷ್ಯ ಸೂಚಕವನ್ನು ತಿಳಿದುಕೊಳ್ಳುವುದು ಕೆಲವು ಬಾರಿ ಮುಖ್ಯವಾಗುತ್ತದೆ.
ಮೇಷ ರಾಶಿ:ಈ ರಾಶಿಯವರು ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಹೊಂದುತ್ತಾರೆ,ಬಡ್ತಿಯನ್ನು ಪಡೆಯುತ್ತಾರೆ. ಹಾಗೂ ಇವರಿಗೆ ಕಾನೂನಿನ ಕ್ಷೇತ್ರ ಇವರಿಗೆ ಉತ್ತಮ ಆಯ್ಕೆಯಾಗಿರುತ್ತದೆ.ವೃಷಭ ರಾಶಿ: ಈ ರಾಶಿಯವರು ಹೆಚ್ಚು ಹೊಸ ಅನ್ವೇಷಣೆಯಲ್ಲಿ ತೊಡಗಿರುತ್ತಾರೆಈ ರಾಶಿಯವರು ಹೆಚ್ಚಾಗಿ ಹೊಸ ಅನ್ವೇಷಣೆಯಲ್ಲಿ ತೊಡಗುತ್ತಾರೆ.ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಅಡೆತಡೆಯುಂಟಾದರೂ ಇವರ ಪರಿಶ್ರಮದಿಂದ ಯಶಸ್ಸು ಗಳಿಸುತ್ತಾರೆ.ಇನ್ನು ವ್ಯಾಪಾರ ಕ್ಷೇತ್ರ ಇವರಿಗೆ ಉತ್ತಮವಾಗಿರುತ್ತದೆ.ಮಿಥುನ ರಾಶಿ:ಪಾಲುದಾರಿಕೆಯಲ್ಲಿ ಗೊಂದಲ ಕಾಣಬಹುದು.ಸರ್ವೆ ಹಾಗೂ ಸಂಶೋಧನಾ ಕ್ಷೇತ್ರ ಇವರಿಗೆ ಉತ್ತಮವಾಗಿರುತ್ತದೆ.
ಕಟಕ ರಾಶಿ:ಹಣದ ಸ್ಥಿತಿ ಉತ್ತಮವಾಗಿರಲಿದೆ ಹಾಗೂ ಅದೃಷ್ಟವು ನಿಮ್ಮ ಜೊತೆಯಲ್ಲಿರುತ್ತದೆ.ಸಿನಿಮಾ ಮತ್ತು ಮನರಂಜನಾ ಕ್ಷೇತ್ರ ಈ ರಾಶಿಯವರಿಗೆ ಉತ್ತಮ.ಸಿಂಹ ರಾಶಿ:ಅವಕಾಶಗಳು ಹೆಚ್ಚಾಗಿರುತ್ತವೆ ಅದೇ ರೀತಿ ಸಾಧಿಸುವ ಚಲ ಇವರಲ್ಲಿರುತ್ತದೆ.ಉತ್ತಮ ನಾಯಕತ್ವದ ಗುಣ ಇವರಲ್ಲಿರುತ್ತದೆ ಹಾಗಾಗಿ ಟೀಮ್ ಮ್ಯಾನೇಜರ್ ಅಥವಾ ಲೀಡರ್ ಉದ್ಯೋಗ ಉತ್ತಮ ಆಯ್ಕೆಯಾಗಿರುತ್ತದೆ.ಕನ್ಯಾ ರಾಶಿ:ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಬಡ್ತಿ ಸಿಗಲಿದೆ.ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಾಣುತ್ತಾರೆ. ಇವರಿಗೆ ಪತ್ರಿಕೋದ್ಯಮ ಉತ್ತಮ ಆಯ್ಕೆಯಾಗಿರುತ್ತದೆ.
ತುಲಾ ರಾಶಿ:ಹೊಸ ಅನ್ವೇಷಣೆಗಳಲ್ಲಿ ಇರುತ್ತಾರೆ.ಸಕಾರಾತ್ಮಕ ಚಿಂತನೆಯಿಂದ ಲಾಭ ಗಳಿಸುವಿರಿ.ಸಾಮಾಜಿಕ ,ಆರ್ಥಿಕ,ಕಾನೂನಿನ ಕ್ಷೇತ್ರ ಇವರಿಗೆ ಉತ್ತಮ ಆಯ್ಕೆಯಾಗಿರುತ್ತದೆ.ವೃಶ್ಚಿಕ ರಾಶಿ:ಕ್ಷೇತ್ರ ಯಾವುದೇ ಇರಲಿ ಪರಿಣಿತಿ ಹೊಂದುವ ಸಾಮರ್ಥ್ಯ ಇವರಲ್ಲಿರುತ್ತದೆ.ವಿಫಲವಾದ ಅವಕಾಶಗಳು ಇವರಿಗೆ ದೊರೆಯುತ್ತದೆ.ವೈದ್ಯಕೀಯ ಮತ್ತು ಬೋಧನ ಕ್ಷೇತ್ರ ಉತ್ತಮ ಆಯ್ಕೆಯಾಗಿರುತ್ತದೆ.ಧನಸ್ಸು ರಾಶಿ:ಸಾಕಷ್ಟು ನಿರೀಕ್ಷೆ ಗಳಲ್ಲಿರುವ ಪಾಲುದಾರಿಕೆಯ ವ್ಯವಹಾರ ಉತ್ತಮ ಲಾಭ ತಂದುಕೊಡುತ್ತದೆ.ನಾಯಕತ್ವದ ಗುಣ ಇವರಲ್ಲಿ ಸಹಜವಾಗಿ ಕಾಣಬಹುದು.ಇವರಿಗೆ ಪಾಲುದಾರಿಕೆ ಮತ್ತು ಟೀಮ್ ಮ್ಯಾನೇಜರ್ ಉದ್ಯೋಗ ಉತ್ತಮ ಆಯ್ಕೆಯಾಗಿರುತ್ತದೆ.
ಮಕರ ರಾಶಿ:ಕ್ಷೇತ್ರ ಯಾವುದಾದರೂ ಅದರಲ್ಲಿ ಗೆಲ್ಲುವ ಸಾಮರ್ಥ್ಯ ಇವರಲ್ಲಿರುತ್ತದೆ ಹಾಗೂಸಹಾಯದ ಗುಣ ಇವರಲ್ಲಿರುತ್ತದೆ.ಟೀಮ್ ವರ್ಕ್ ಇವರಿಗೆ ಅತ್ಯುತ್ತಮ ಕ್ಷೇತ್ರವಾಗಿರುತ್ತದೆ.ಕುಂಭ ರಾಶಿ:ಔದ್ಯೋಗಿಕ ಕ್ಷೇತ್ರದಲ್ಲಿ ಪರಿಣಿತಿಯನ್ನು ಪಡೆದಿರುತ್ತಾರೆ ಸಕಾರಾತ್ಮಕ ಹಾಗೂ ಧನಾತ್ಮಕ ಚಿಂತನೆಯು ಉತ್ತಮ ಫಲಿತಾಂಶವನ್ನು ನೀಡುತ್ತದೆ.ಟಾರ್ಗೆಟ್ ಓರಿಯೆಂಟೆಡ್ ಕ್ಷೇತ್ರ ಇವರಿಗೆ ಉತ್ತಮ ಆಯ್ಕೆಯಾಗಿರುತ್ತದೆ.ಮೀನರಾಶಿ:ಮೇಲಾಧಿಕಾರಿಗಳಿಗೆ ತಕ್ಕಂತೆ ಕೆಲಸ ಮಾಡುವ ಸಾಮರ್ಥ್ಯ ಇವರಲ್ಲಿರುವುದರಿಂದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಹುಟ್ಟಿಕೊಳ್ಳುತ್ತದೆ.ಕಲೆ ,ಚಿತ್ರಕಲೆ ಮತ್ತು ವಾಣಿಜ್ಯ ಕ್ಷೇತ್ರಗಳು ಇವರಿಗೆ ಉತ್ತಮ ಆಯ್ಕೆಯಾಗಿರುತ್ತದೆ.ನಿಮ್ಮ ಉದ್ಯೋಗ ಯಾವುದು ಎಂದು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಧನ್ಯವಾದಗಳು.