ನಮಸ್ಕಾರ ಗೆಳೆಯರೇ, ನಮ್ಮ ಹಿರಿಯರು ಹೇಳಿರುವಂತೆ ಮಂಗಳವಾರದಂದು ಕೆಲವೊಂದು ಕೆಲಸಗಳನ್ನು ಮಾಡಿದರೆ ಅದರಿಂದ ಆರ್ಥಿಕ ಪರಿಸ್ಥಿತಿ ಹದಗೆಡುವುದು ಮತ್ತು ದಾರಿದ್ರ್ಯ ಕೂಡ ಕಾಡುತ್ತದೆ ಹೀಗಂತ ನಮ್ಮಲ್ಲಿ ಗಾಢವಾದ ನಂಬಿಕೆ ಇದೆ, ಹಾಗಾದರೆ ಮಂಗಳವಾರದಂದು ಯಾವ ಕೆಲಸವನ್ನು ಮಾಡಬಾರದು ಅನ್ನುವುದನ್ನು ಈ ದಿನ ನಾವು ತಿಳಿಯೋಣ ಬನ್ನಿ.ಮಂಗಳವಾರ ಮಂಗಳ ಗ್ರಹದ ದಿನವಾಗಿದೆ, ಜಾತಕದ ಪ್ರಕಾರ ಯಾವುದೇ ಕೆಲಸವನ್ನು ಮಂಗಳವಾರ ಮಾಡಬಾರದು ಮಂಗಳವಾರ ಮಾಡಿದರೆ ಲಾಭಕ್ಕಿಂತ ಹೆಚ್ಚು ನಷ್ಟ ಉಂಟಾಗುತ್ತದೆ, ಮಂಗಳ ದೋಷ ಬರಬಾರದು ಅಂದರೆ ನೀವು ಇಂತಹ ಕೆಲಸಗಳನ್ನು ಮಾಡಬಾರದು,
ಮೊದಲನೆಯದಾಗಿ:ಹಣವನ್ನು ನೀವು ಯಾರಿಗೂ ಸಾಲವಾಗಿ ನೀಡಬೇಡಿ ಮತ್ತು ನೀವು ಯಾರಿಂದಲೂ ಹಣವನ್ನು ತೆಗೆದುಕೊಳ್ಳಬೇಡಿ, ಇದರಿಂದ ಆರ್ಥಿಕ ತೊಂದರೆಗಳು ಸಂಭವಿಸುತ್ತವೆ.ಇನ್ನು ಎರಡನೆಯದು: ಮಾಂಸವನ್ನು ತಿನ್ನುವುದು ಮಂಗಳವಾರದ ದಿನ ಒಳ್ಳೆಯದಲ್ಲ, ಮಂಗಳವಾರದಂದು ಅದಿಸ್ಟೋ ಜನ ಮಾಂಸವನ್ನು ತಿನ್ನುವುದನ್ನು ಮಾಡುತ್ತಿರುತ್ತಾರೆ ಆದರೆ ಮಾಂಸವನ್ನು ಮಂಗಳವಾರ ತಿನ್ನದೇ ಇದ್ದರೆ ಒಳ್ಳೆಯದು ಅದರಿಂದ ನಿಮಗೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಭಗವಂತನ ಕೃಪೆ ಕೂಡ ಉಂಟಾಗುತ್ತದೆ.
ಇನ್ನು ಮೂರನೆಯದು ಕಟ್ಟಿಂಗ್ ಮತ್ತು ಶೇವಿಂಗ್: ಇದನ್ನು ಮಂಗಳವಾರದ ದಿನ ಮಾಡಬೇಡಿ ಪ್ರತಿಯೊಬ್ಬರಿಗೂ ಗೊತ್ತಿರುವಂತದ್ದೆ ಮಂಗಳವಾರ ಕಟಿಂಗ್ ಶೇವಿಂಗ್ ಮಾಡಿದರೆ ಮಂಗಳದೋಷ ಸಾಧ್ಯವಾಗುತ್ತದೆ.ಇನ್ನು ನಾಲ್ಕನೆಯದಾಗಿ ಉಗುರುಗಳನ್ನು ಕಟ್ ಮಾಡಬಾರದು: ಆದಷ್ಟು ಉಗುರನ್ನು ಮಂಗಳವಾರದ ದಿನ ಕಟ್ ಮಾಡುವುದನ್ನು ಬಿಡಿ ಇದರಿಂದ ದಾರಿದ್ರ್ಯ ತೊಲಗುತ್ತದೆ,ಇನ್ನು ಒಟ್ಟಾರೆಯಾಗಿ ನೀವು ಮಂಗಳವಾರದಂದು ಮಂಗಳಾದೇವಿಯನ್ನು ಪೂಜಿಸಿ ನಿಮ್ಮ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಕಾಪಾಡಿಕೊಳ್ಳಿ,
ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ದಿನಕ್ಕೆ ಅದರದೇ ಆದ ಮಹತ್ವ ಇದೆ, ಒಂದೊಂದು ದಿನವೂ ಒಂದೊಂದು ದೇವತೆಗಳ ದಿನವಾಗಿರುತ್ತದೆ ಹೀಗಾಗಿ ಆ ದಿನದ ಮಹತ್ವಕ್ಕೆ ತಕ್ಕಂತೆ ನಡೆದುಕೊಂಡರೆ ದೇವಾನುದೇವತೆಗಳ ಕೃಪೆ ನಮ್ಮ ಮೇಲೆ ಉಂಟಾಗುತ್ತದೆ, ಮಂಗಳವಾರ ಮಂಗಳಗ್ರಹದಿಂದ ದಿನವೆಂದೇ ಭಾವಿಸಲಾಗಿದ್ದು, ಜಾತಕ ಫಲಕ್ಕೆ ಅಡ್ಡಿ ಆಗುವಂತಹ ಯಾವುದೇ ಕೆಲಸವನ್ನು ಮಂಗಳವಾರದ ದಿನ ಮಾಡಬಾರದು, ಮಂಗಳವಾರ ಯಾವುದೇ ವಿಶೇಷ ಕೆಲಸವನ್ನು ಮಾಡುವುದಿಲ್ಲ ಆದ್ದರಿಂದಲೇ ಇದರಿಂದ ಲಾಭಕ್ಕಿಂತ ಹೆಚ್ಚಾಗಿ ನಷ್ಟವೇ ಸಂಭವಿಸುತ್ತದೆ, ಮಂಗಳ ದೋಶಕ್ಕೆ ಒಳಗಾಗಬಾರದು ಆರ್ಥಿಕ ಸಂಕಷ್ಟ ಎದುರಿಸಬಾರದು ಅಂದರೆ ಈ ಕೆಲಸಗಳನ್ನು ಮಾಡದೆ ಇರುವುದು ಒಳ್ಳೆಯದು….