ಬ್ರಹ್ಮ ಮುಹೂರ್ತ ಎನ್ನುವುದು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸಮಯ.ಇದು ಪ್ರಮುಖವಾಗಿ ಎರಡು ಮುಹೂರ್ತದ ಅವಧಿಗಳ ಒಳಗೊಂಡಿದೆ.ಮುಂಜಾನೆಯ ಸಮಯಕ್ಕಿಂತ ಒಂದೂವರೆ ಗಂಟೆ ಪೂರ್ವದ ಸಮಯವನ್ನು ಬ್ರಹ್ಮ ಮುಹೂರ್ತದ ಅವಧಿ ಅಥವಾ ಬ್ರಾಹ್ಮೀ ಮುಹೂರ್ತ ಎಂದು ಪರಿಗಣಿಸಲಾಗುವುದು.ವೈದಿಕ ಸಾಂಪ್ರದಾಯದ ಪ್ರಕಾರ ಈ ಅವಧಿಯು ಪ್ರಾರ್ಥನೆ ಮತ್ತು ಧ್ಯಾನವನ್ನು ಕೈಗೊಳ್ಳಲು ಸೂಕ್ತವಾದ ಸಮಯ ಎಂದು ಪರಿಗಣಿಸಲಾಗಿದೆ.ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.ಬ್ರಹ್ಮ ಮುಹೂರ್ತದಲ್ಲಿ ಕೆಲವು ಕೆಲಸವನ್ನು ಕೈಗೊಂಡರೆ ಆಯುಷ್ಯ ವೃದ್ಧಿಯಾಗುವುದು ಎಂದು ಸಹ ಹೇಳಲಾಗುವುದು. ಈ ಪವಿತ್ರ ಮುಹೂರ್ತದ ಕೆಲವು ಮುಖ್ಯ ವಿಚಾರಗಳನ್ನು ಇವತ್ತಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ …
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಸೂರ್ಯೋದಯಕ್ಕೆ ಸುಮಾರು ಒಂದು ಗಂಟೆ ಮೊದಲ ಅವಧಿಯನ್ನು ಬ್ರಹ್ಮ ಮುಹೂರ್ತ ಎಂದು ಕರೆಯುವರು.
ಈ ಅವಧಿಯು ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದು ಕೊಡುತ್ತದೆ.ಈ ಸಮಯವು ವ್ಯಕ್ತಿಯಲ್ಲಿ ಭರವಸೆ , ಸ್ಫೂರ್ತಿ ಮತ್ತು ಶಾಂತಿ ಪ್ರಕಟವಾಗುವಂತೆ ಮಾಡುವುದು.ಬ್ರಹ್ಮಜ್ಞಾನ , ಸರ್ವೋಚ್ಚ ಜ್ಞಾನ ಮತ್ತು ಶಾಶ್ವತ ಸಂತೋಷವನ್ನು ಪಡೆದುಕೊಳ್ಳಲು ಪ್ರಚೋದನೆ ನೀಡುವ ಸಮಯ ಎಂದು ಪರಿಗಣಿಸಲಾಗುವುದು.. ದೀರ್ಘ ನಿದ್ದೆಯ ಬಳಿಕ ಮನಸ್ಸು ಶುದ್ಧ ಹಾಗೂ ಶಾಂತವಾಗಿರುತ್ತದೆ.ಈ ಪರಿಸರದಲ್ಲಿ ಶಾಂತಿ ಹಾಗೂ ತಂಪಾದ ವಾತಾವರಣ ನೆಲೆಸಿರುತ್ತದೆ.ಈ ಸಮಯದಲ್ಲಿ ಜ್ಞಾನವನ್ನು ಕೈಗೊಂಡರೆ ಮಾನಸಿಕ ಕಾರ್ಯಕ್ಷಮತೆಯೂ ಸುಧಾರಿಸುತ್ತದೆ ಅಲ್ಲದೆ ಮಾನಸಿಕ ಕಿರಿಕಿರಿ ಆಲಸ್ಯತನ ಹಾಗೂ ಮಂಕಾದ ಭಾವನೆಗಳು ನಿವಾರಣೆಯಾಗುತ್ತವೆ.
ಈ ಪವಿತ್ರ ಸಮಯದಲ್ಲಿ ದೇಹಕ್ಕೆ ಅಗತ್ಯವಾದ ಉನ್ನತ ಮಟ್ಟದ ಪ್ರಾಣ ಆದರೆ ಪ್ರಮುಖ ಜೀವ ಶಕ್ತಿಯ ಗುಣವು ದೊರೆಯುತ್ತದೆ.ವಾತಾವರಣದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆಯಾಗಿರುತ್ತದೆ ಹಾಗಾಗಿ ಆ ವಾತಾವರಣವು ದೇಹ ಹಾಗೂ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತವೆ.ಸಂಸ್ಕೃತದಲ್ಲಿ ದಿನಚರಿಯನ್ನು ದಿನಚಾರ್ಯ ಎಂದು ಹೇಳಲಾಗುವುದು.. ದಿನ್ ಎಂದರೆ ದಿನ ಎನ್ನುವ ಅರ್ಥವನ್ನು ಹಾಗೂ ಆಚಾರ್ಯ ಎಂದರೆ ಅನುಸರಿಸುವುದು ಎನ್ನುವ ಅರ್ಥವನ್ನು ನೀಡುವುದು.ಹಾಗಾಗಿ ದಿನಚಾರ್ಯವು ಪ್ರಕೃತಿಗೆ ಅನುಗುಣವಾಗಿ ಇದ್ದರೆ ಆದರ್ಶ ದೈನಂದಿನ ವೇಳಾ ಪಟ್ಟಿಯನ್ನು ಹೊಂದಬಹುದು.ನಿತ್ಯವೂ ಸರಳವಾದ ಹಾಗೂ ಪರಿಣಾಮಕಾರಿಯಾದ ರಕ್ಷಣಾ ಮಂತ್ರವನ್ನು ಪಠಿಸಬೇಕು.ಮಂತ್ರವನ್ನು ಪಠಿಸಿದ ಬಳಿಕ ಸ್ವಲ್ಪ ಸಮಯಗಳ ಕಾಲ ಮೌನವಾಗಿ ಕುಳಿತುಕೊಳ್ಳಬೇಕು.ಎರಡು ಅಂಗೈಗಳನ್ನು ಜೋಡಿಸಿ ಬೊಗಸೆ ಹಿಂದಿರುವಂತೆ ಇಟ್ಟುಕೊಳ್ಳಬೇಕು ನಂತರ
“ಕರಾಗ್ರೆ ವಸತೇ ಲಕ್ಷ್ಮೀ ಕರಾಮಧ್ಯೆ ಸರಸ್ವತಿ ಕರಮೂಲೇತು ಗೋವಿಂದ ಪ್ರಭಾತೆ ಕರ ದರ್ಶನಮ್”ಇದರ ಅರ್ಥ ಕರಾಗ್ರೆ ವಸತೇ ಲಕ್ಷ್ಮೀ ಎಂದರೆ ಕೈ ಬೆರಳುಗಳ ತುದಿಯಲ್ಲಿ ಇರುವ ಲಕ್ಷ್ಮೀ ಅಥವಾ ಸಂಪತ್ತಿನ ದೇವತೆ ಎಂದರ್ಥ ,ಕರಮಧ್ಯೇ ಸರಸ್ವತಿ ಎಂದರೆ ಅಂಗೈಯ ಮಧ್ಯದಲ್ಲಿ ವಾಸಿಸುವ ಸರಸ್ವತಿಯೇ ಎಂದು ಅರ್ಥ ,ಕರಮೂಲೇತು ಗೋವಿಂದ ಎಂದರೆ ಕೈಗಳು ಮೂಲೆಯಾದ ಮಣಿ ಕಟ್ಟುಗಳಲ್ಲಿರುವ ಭಗವಾನ್ ಗೋವಿಂದ ಎಂದರ್ಥ ಅಥವಾ ಕೃಷ್ಣ ಎಂದರ್ಥ ,ಪ್ರಭಾತೆ ಕರ ದರ್ಶನಮ್ಎಂದರೆ ಮುಂಜಾನೆ ಕೈ ನೋಡುವುದು ಶುಭಕರವಾದದ್ದು ಎಂದರ್ಥ.
ನಂತರ ಎರಡು ಮೂಗಿನ ಹೊಳ್ಳೆಯಿಂದ ಉಸಿರಾಟವನ್ನು ನಡೆಸಿ ಪ್ರಾಣಾಯಾಮವನ್ನು ಮಾಡಬೇಕು
ಬಳಿಕ ಆಂತರಿಕ ಕಣ್ಣುಗಳನ್ನು ಕೇಂದ್ರೀಕರಿಸಿ ಧ್ಯಾನ ಮಾಡಿ ,ಶುದ್ಧವಾದ ವಾತಾವರಣದಲ್ಲಿ ಲಘುವಾದ ನಡಿಗೆಯನ್ನು ಅನುಸರಿಸಿ.ಇದು ಸರಳವಾದ ಮತ್ತು ಹಿತವಾದ ಚಿಂತನೆಗಳೊಂದಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಿರಾಳತೆಯನ್ನು ನೀಡುವುದು.ಮುಂಜಾನೆ ಸೂರ್ಯ ನಮಸ್ಕಾರ ಮಾಡುವುದರ ಮೂಲಕ ವ್ಯಾಯಾಮವನ್ನು ಕೈಗೊಳ್ಳಬೇಕು ನಂತರ ನಾಡಿಯನ್ನು ಶುದ್ಧಗೊಳಿಸುವ ಪ್ರಾಣಾಯಾಮ , ನಡಿಗೆ ಮತ್ತು ಈಜು ಸೇರಿದಂತೆ ಇತರ ವ್ಯಾಯಾಮಗಳನ್ನು ಮಾಡಬಹುದು.
ಮುಂಜಾನೆಯ ವ್ಯಾಯಾಮವೂ ದೇಹ ಮತ್ತು ಮನಸ್ಸಿನಲ್ಲಿ ನಿಶ್ಚಲತೆಯನ್ನು ತೆಗೆದುಹಾಕುತ್ತದೆ.ಜೀರ್ಣಕ್ರಿಯೆಯನ್ನು ಉತ್ತೇಜಿಸುವುದು ಜೊತೆಗೆ ಕೊಬ್ಬನ್ನು ಕೂಡ ಕಡಿಮೆ ಮಾಡುತ್ತದೆ.ದೇಹ ಮತ್ತು ಮನಸ್ಸು ನಿರಾಳತೆ ಹಾಗೂ ಆರೋಗ್ಯದಿಂದ ಕೂಡಿರುವುದರಿಂದ ಸದಾಕಾಲ ಸಂತೋಷದ ಭಾವನೆ ಇರುವಂತೆ ಮಾಡುವುದು.ಆಯುರ್ವೇದವು ದಿನಚರಿಗಳನ್ನು ಪ್ರಮುಖ ಸಂಗತಿಯಾಗಿ ಪರಿಗಣಿಸುವುದು.ಯಾರು ಆರೋಗ್ಯಕರವಾದ ದಿನಚರಿಯನ್ನು ಅನುಸರಿಸುತ್ತಾರೋ ಅವರ ಸಾಮರ್ಥ್ಯವೂ ಉತ್ತಮವಾಗಿ ಇರುತ್ತದೆ.
ಪ್ರತಿ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವುದರಿಂದ ನಮ್ಮ ಶಕ್ತಿಯ ಮಟ್ಟವೂ ಉತ್ತಮವಾಗುತ್ತದೆ.ಶಾಂತವಾದ ಹಾಗೂ ತಾಜಾ ವಾತಾವರಣ ನಮ್ಮನ್ನು ಬಹುಬೇಗ ಕ್ರಿಯಾಶೀಲರನ್ನಾಗಿ ಮಾಡುವುದು.ವೈಜ್ಞಾನಿಕ ಸಂಶೋಧನೆಯ ಪ್ರಕಾರ ಬ್ರಾಹ್ಮಿ ಮುಹೂರ್ತದಲ್ಲಿ ಆಮ್ಲಜನಕದ ಮಟ್ಟವು ಶೇಖಡ 41 ರಷ್ಟು ಹೆಚ್ಚಾಗಿರುತ್ತದೆ ಅದು ನಮ್ಮ ಶ್ವಾಸಕೋಶಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುವುದು.ನಿರ್ಮಲವಾದ ಹಾಗೂ ಶುದ್ಧವಾದ ವಾತಾವರಣವನ್ನು ಹೊಂದಿರುವ ಬ್ರಹ್ಮ ಮುಹೂರ್ತವು ಧನಾತ್ಮಕ ಶಕ್ತಿಗಳಿಂದ ಆವೃತವಾಗಿರುತ್ತವೆ ಅಂತಹ ಸಮಯದಲ್ಲಿ ವ್ಯಕ್ತಿ , ಧ್ಯಾನ ಹಾಗೂ ಸೂರ್ಯ ನಮಸ್ಕಾರಗಳಂತಹ ವ್ಯಾಯಾಮ ಮಾಡುವುದರಿಂದ ದೈವಶಕ್ತಿಯ ಆಶೀರ್ವಾದ ಪಡೆಯಬಹುದು.
ಋಷಿ ಮುನಿಗಳು ಹೇಳಿರುವ ಪ್ರಕಾರ ಯಾರು ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುತ್ತಾರೋ , ಧ್ಯಾನವನ್ನು ಕೈಗೊಳ್ಳುತ್ತಾರೋ , ಲಘು ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಾರೋ ಅವರ ಮಾನಸಿಕ ಮತ್ತು ದೈಹಿಕ ಶಕ್ತಿಯೂ ಅತ್ಯುತ್ತಮವಾಗಿರುತ್ತದೆ ಜೊತೆಗೆ ದೈಹಿಕ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಸಹಾಯವಾಗುತ್ತದೆ.ಇವುಗಳೊಂದಿಗೆ ನಮ್ಮ ಸುತ್ತ ಇರುವ ಋುಣಾತ್ಮಕ ಶಕ್ತಿಯು ದೂರ ಸರಿಯುತ್ತದೆ ಎಂದು ಹೇಳಲಾಗುವುದು.ಬ್ರಹ್ಮ ಮುಹೂರ್ತದಲ್ಲಿ ಇರುವ ಸಕಾರಾತ್ಮಕ ಹಾಗೂ ಪವಿತ್ರವಾದ ವಾತಾವರಣವೂ ವೈಯಕ್ತಿಕ ಆರೋಗ್ಯದ ಮೇಲೆ ಗಮನಾರ್ಹ ಬದಲಾವಣೆಗಳನ್ನು ತರುವುದು. ಪ್ರಮುಖವಾಗಿ ದೇಹದ ಆರೋಗ್ಯವನ್ನು ನಿಯಂತ್ರಿಸುವ ವಾತಾ , ಪಿತ್ತ ಮತ್ತು ಕಫಗಳ ಮೇಲೆ ಆಳವಾದ ಪರಿಣಾಮ ಬೀರುವುದು.ಆರೋಗ್ಯದ ಬಹುತೇಕ ಆಯಾಮಗಳನ್ನು ವಾತವು ನಿಯಂತ್ರಿಸುತ್ತದೆ .ಬ್ರಹ್ಮ ಮುಹೂರ್ತದಲ್ಲಿ ವಾತವನ್ನು ಸಮತೋಲನದಲ್ಲಿ ಇಡುವ ಗುಣವಿರುತ್ತದೆ.ಇದರ ಪ್ರಭಾವದಿಂದ ವ್ಯಕ್ತಿ ಅತ್ಯುತ್ತಮ ಆರೋಗ್ಯವನ್ನು ಪಡೆದುಕೊಳ್ಳುವನು.ಅದೇರೀತಿ ಆಧ್ಯಾತ್ಮಿಕ ಅಭ್ಯಾಸಗಳನ್ನು ಮಾಡುವುದರಿಂದ ಆತ್ಮ ಶುದ್ಧಿ ಹಾಗೂ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಸಹ ನಿರಾಳತೆಯನ್ನು ಪಡೆದುಕೊಳ್ಳುತ್ತದೆ.ಬ್ರಹ್ಮ ಮುಹೂರ್ತವೂ ಜೀವನದಲ್ಲಿ ಜಡತ್ವವನ್ನು ನಿವಾರಿಸಿ ಕ್ರಿಯಾಶೀಲರಾಗಿ ಬಾಳುವಂತೆ ಪ್ರೇರೇಪಿಸುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp