ಶ್ರಾವಣ ಮಾಸದ ಪ್ರತಿಯೊಂದು ದಿನವೂ ವಿಶೇಷವಾಗಿರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರಾವಣ ಮಾಸವನ್ನು ಭಗವಾನ್ ಭೋಲೆನಾಥನಿಗೆ ಸಮರ್ಪಿಸಲಾಗಿದೆ. ಈ ಶ್ರಾವಣ ಮಾಸದಲ್ಲಿ ಸೋಮವಾರ ಭಗವಾನ್ ಶಿವನನ್ನು ಯಥಾವತ್ತಾಗಿ ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಭಗವಾನ್ ಭೋಲೆನಾಥನ ಆಶೀರ್ವಾದವನ್ನು ನೀವು ಪಡೆಯಲು ಬಯಸಿದರೆ, ಶ್ರಾವಣ ಮಾಸದಲ್ಲಿ ಶಿವನನ್ನು ಕಡ್ಡಾಯವಾಗಿ ಪೂಜಿಸಿ. ಹಾಗಾದರೆ, ವಿಧಿ – ವಿಧಾನಗಳ ಪ್ರಕಾರ, ಶಿವನನ್ನು ಪೂಜಿಸುವುದು ಹೇಗೆ..? ಶ್ರಾವಣ ಶಿವ ಪೂಜೆಯಲ್ಲಿ ನಾವು ಯಾವ ವಸ್ತುಗಳನ್ನು ಬಳಸಿಕೊಂಡು ಶಿವನನ್ನು ಪೂಜಿಸಬೇಕು..? ಶ್ರಾವಣ ಶಿವ ಪೂಜೆಯ ವಿಧಿ – ವಿಧಾನಗಳು ಹೀಗಿವೆ ನೋಡಿ..
ಶ್ರಾವಣ ಮಾಸದಲ್ಲಿ ಶಿವ ಪೂಜೆ ಮಾಡೋದು ಹೇಗೆ..?
- ಮೊದಲನೆಯದಾಗಿ, ಶ್ರಾವಣ ಮಾಸದಲ್ಲಿ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ. ಸ್ನಾನದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ.
- ಮನೆಯ ದೇವರ ಕೋಣೆಯಲ್ಲಿ ದೇವರಿಗೆ ದೀಪವನ್ನು ಹಚ್ಚಿ.
- ಗಂಗಾಜಲದಿಂದ ಎಲ್ಲಾ ದೇವಾನುದೇವತೆಗಳಿಗೆ ಅಭಿಷೇಕ ಮಾಡಿ.
- ಭಗವಾನ್ ಭೋಲೆನಾಥನಿಗೆ ಹೂವುಗಳನ್ನು ಮತ್ತು ಬಿಲ್ವಪತ್ರೆಯನ್ನು ಅರ್ಪಿಸಿ.
- ಭಗವಾನ್ ಶಿವನಿಗೆ ಆರತಿಯನ್ನು ಮಾಡಿ ಮತ್ತು ಭೋಗವನ್ನು ಅರ್ಪಿಸಿ.
- ಈ ಸಮಯದಲ್ಲಿ ನೀವು ಶಿವನಿಗೆ ಸಾತ್ವಿಕ ವಸ್ತುಗಳನ್ನು ಮಾತ್ರ ನೀಡಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
- ಈ ಮಾಸದಲ್ಲಿ ಶಿವ ನಾಮ ಸ್ಮರಣೆಯನ್ನು ಹೆಚ್ಚಾಗಿ ಮಾಡಿ.
ಉಪವಾಸದ ನಿಯಮಗಳಾವುವು..?
- ಈ ದಿನ ಸಾತ್ವಿಕ ಆಹಾರವನ್ನು ಸೇವಿಸಿ ಹಾಗೂ ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ತಾಮಸಿಕ ಆಹಾರವನ್ನು ಸೇವಿಸಬಾರದು.
- ಶ್ರಾವಣ ಮಾಸದಲ್ಲಿ ಮಾಂಸ ಮತ್ತು ಮದ್ಯವನ್ನು ಸೇವಿಸುವುದನ್ನು ತಪ್ಪಿಸಬೇಕು.
- ಬ್ರಹ್ಮಚರ್ಯವನ್ನು ಅನುಸರಿಸಿ.
- ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
ಶ್ರಾವಣ ಶಿವ ಪೂಜೆಗೆ ಬೇಕಾಗುವ ಪೂಜೆ ಸಾಮಾಗ್ರಿಗಳು:
- ಹೂವುಗಳು
- ಐದು ಬಗೆಯ ಹಣ್ಣುಗಳು
- ಪೂಜೆಯ ಪಾತ್ರೆಗಳು
- ಕುಶದ ಆಸನ
- ಮೊಸರು
- ತುಪ್ಪ
- ಜೇನುತುಪ್ಪ
- ಗಂಗಾಜಲ
- ಪಂಚರಸ
- ಜನೇವು
ಶ್ರಾವಣ ಮಾಸದ ಮಹತ್ವವೇನು? ಇಲ್ಲಿದೆ ಮಾಹಿತಿ
- ಬಿಲ್ವಪತ್ರೆ
- ಧಾತುರ
- ಭಾಂಗ್
- ಬೋರೆ ಹಣ್ಣು
- ಸಿಹಿತಿಂಡಿಗಳು
- ಹಸಿ ಹಸುವಿನ ಹಾಲು
- ಧೂಪ
- ದೀಪ
- ಬಾರ್ಲಿ
- ಮಂದಾರ ಹೂವು
- ಕಬ್ಬಿನ ರಸ
- ಕರ್ಪೂರ
- ಶ್ರೀಗಂಧ ಇತ್ಯಾದಿ.
ಭಗವಾನ್ ಶಿವನನ್ನು ಶ್ರಾವಣ ಮಾಸದಲ್ಲಿ ಈ ಮೇಲಿನ ವಿಧಿ – ವಿಧಾನಗಳ ಪ್ರಕಾರ ಪೂಜಿಸುವುದರಿಂದ ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವುದರ ಪ್ರಯೋಜನ ಪ್ರಾಪ್ತವಾಗುತ್ತದೆ. ನೀವೂ ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸಲು ಬಯಸಿದರೆ ಖಂಡಿತ ಈ ಮೇಲಿನ ಪೂಜೆ ವಿಧಿ – ವಿಧಾನಗಳನ್ನು ಅನುಸರಿಸಿ.
- –ಶಿವನಿಗೆ ತುಪ್ಪದಿಂದ ಅಭಿಷೇಕ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ.
- -ಮೋಸರಿನಿಂದ ಅಭಿಷೇಕ ಮಾಡಿದರೆ ಮುಂಬರುವ ಶುಭ ಶಕುನಗಳು ಗಟಿಸುತ್ತವೆ.
- -ಸಾಲಬಾದೆಯಿಂದ ಬಳಲುತ್ತಿದ್ದಾರೆ ಶ್ರಾವಣ ಸೋಮವಾರದಂದು ಅತ್ತಿ ಹಿಟ್ಟಿನಿಂದ ಶಿವನಿಗೆ ಅಭಿಷೇಕ ಮಾಡುವುದರಿಂದ ನಿಮ್ಮ ಸಾಲ ಬಾದೆ ದೂರವಾಗುತ್ತದೆ.
- -ಹೆಚ್ಚಿನ ಶತ್ರುಕಾಟ ನಿಮಗೆ ಇದ್ದರೆ ಕಬ್ಬಿನ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡುವುದು ತುಂಬಾನೇ ಉತ್ತಮ ಹಾಗು ಅರೋಗ್ಯ ವೃದ್ಧಿ ಕೂಡ ಆಗುತ್ತದೆ.
- -ಪದೇ ಪದೇ ನಿಮಗೆ ಸಾವಿನ ಭಯ ಕಾಡುತ್ತಿದ್ದಾರೆ ಶಿವನಿಗೆ ನಿಂಬೆಹಣ್ಣಿನ ರಸದಿಂದ ಶ್ರಾವಣ ಸೋಮವಾರದಂದು ಅಭಿಷೇಕ ಮಾಡುವುದರಿಂದ ಸಾವಿನ ಭಯ ಕೂಡ ದೂರವಾಗುತ್ತದೆ. ರೋಗದಿಂದ ಮುಕ್ತಿ ಹೊಂದಬಹುದು.
- -ಮನೆಯಲ್ಲಿ ಕಲಹ ಮತ್ತು ಹೆಚ್ಚಿನ ಸಮಸ್ಸೆಯಿಂದ ಬಳಲುತ್ತಿದ್ದಾರೆ ಎಳೆ ನೀರಿನಿಂದ ಶಿವನಿಗೆ ಅಭಿಷೇಕ ಮಾಡಿದರೆ ಮನೆಯಲ್ಲಿ ಶಾಂತಿಯುತ ನೆಮ್ಮದಿ ನಿರ್ಮಾಣ ಆಗುತ್ತದೆ.
- -ನೀವು ಎಷ್ಟೇ ಕಷ್ಟ ಪಟ್ಟರು ಹಣ ನಿಲ್ಲುತ್ತಿಲ್ಲವಾದರೆ ಸೋಮವಾರದ ಶಿವನಿಗೆ ಅನ್ನದ ಅಭಿಷೇಕವನ್ನು ಮಾಡಬೇಕು.
- -ಸಂಪತ್ತಿನ ದೇವತೆ ಒಲಿಯಬೇಕು ಎಂದರೆ ಶಿವ ಲಿಂಗಕ್ಕೆ ಗಂಧದ ಲೇಪನದ ಅಭಿಷೇಕ ಮಾಡಿದರೆ ಲಕ್ಷ್ಮಿ ಕೃಪಾಕಟಾಕ್ಷ ಸಿಗುತ್ತದೆ. ಇನ್ನು ಮಹಾ ಮೃತ್ಯುಂಜಯ ಮಂತ್ರ ಜಪಿಸಿದರೆ ತುಂಬಾ ಒಳ್ಳೆಯದು.