ಮಗು ಹುಟ್ಟಿದಾಗಲೂ ಬಿದಿರಿನ ಮೇಲೆ ಮಲಗಿಸುತ್ತಾರೆ ಮನುಷ್ಯ ಸತ್ತಾಗಲು ಬಿದಿರಿನ ಮೇಲೆ ಹಾಕುತ್ತಾರೆ ಹೀಗಾಗಿ ಬಿದಿರು ಎನ್ನುವುದು ಮನುಷ್ಯನ ಜೀವನದ ಒಂದು ಭಾಗವಾಗಿದೆ ಅಂತಹ ಬಿದಿರು ತನ್ನ ಜೀವಮಾನದಲ್ಲಿ ಒಮ್ಮೆ ಮಾತ್ರ ಹೂ ಬಿಟ್ಟು ಅಕ್ಕಿಯನ್ನು ಕೊಡುತ್ತದೆ ಅದನ್ನು ಬಿದಿರಕ್ಕಿ ಎಂದು ಕರೆಯಲಾಗುತ್ತದೆ ವಿಚಿತ್ರ ಏನೆಂದರೆ ಈ ಬಿದಿರಕ್ಕಿಯನ್ನು ಕಂಡರೆ ಜನರಿಗೆ ಭಯ ಅಷ್ಟೆಲ್ಲ ಇದ್ದರೂ ಕೂಡ ಈ ಬಿದಿರಿನ ಅಕ್ಕಿಯಲ್ಲಿ ಔಷಧಿಯ ಗುಣಗಳು ಇರುವುದರಿಂದ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಬಾಳೆಗೆ ಒಂದೇ ಗೊನೆ ಚೇಳಿಗೆ ಒಮ್ಮೆ ಮಾತ್ರ ಬಸರು ಎಂದು ಅದೇ ರೀತಿ ಈ ಬಿದಿರು ಕೂಡ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹೂ ಬಿಟ್ಟು ಅಕ್ಕಿಯನ್ನು ಕೊಡುತ್ತದೆ ಬಿದಿರಿನಿಂದಲೇ ಕೊಳಲನ್ನು ತಯಾರಿಸುತ್ತಾರೆ ಈ ಬಿದಿರು ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯ ಆಗಿದ್ದು ಹಿಂಡು ಹಿಂಡಾಗಿ ಬೆಳೆಯುವ ಈ ಬಿದಿರು 40 ರಿಂದ 80 ವರ್ಷಗಳ ಕಾಲ ಬದುಕುತ್ತದೆ ಇನ್ನು ಬಿದಿರಿನಿಂದ ತಯಾರಿಸಿದ ವಸ್ತುಗಳು ಕೂಡ ಕಡಿಮೆ ಎಂದರು 50 ವರ್ಷಗಳ ಕಾಲ ಗಟ್ಟಿ ಮುಟ್ಟಾಗಿರುತ್ತದೆ
ಇಂತಹ ಬಿದಿರಿನಲ್ಲಿ ಸುಮಾರು 500ಕ್ಕೂ ಅಧಿಕ ಪ್ರಭೇದಗಳು ಇದೆ ಇದು ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹೂವು ಕೊಡುತ್ತದೆ ಹಾಗೆ ಅಕ್ಕಿಯನ್ನು ನೀಡುತ್ತದೆ ಅನಂತರ ಬಿದ್ದು ಸಾಯುತ್ತದೆ ಹಾಗೆ ಬಿದಿರು ಅಕ್ಕಿ ಕೊಟ್ಟರೆ ಅದು ಬರಗಾಲದ ಮುನ್ಸೂಚನೆ ಎಂದು ಹಿರಿಯರು ಹೇಳುತ್ತಾರೆ ಹೀಗಾಗಿ ಬಿದಿರು ಹೂವು ಬಿಡುತ್ತಿರುವಾಗಲೇ ಅದರ ಬುಡವನ್ನು ಸ್ವಚ್ಛಗೊಳಿಸಲಾಗುತ್ತದೆ ಕೆಳಗೆ ಬೀಳುವ ಬಿದಿರಕ್ಕಿಯನ್ನು ಸಂಗ್ರಹಿಸಿ ಸಂಸ್ಕರಿಸಿ ದಾಸ್ತಾನು ಮಾಡಲಾಗುತ್ತದೆ ಇದನ್ನು ಅಕ್ಕಿ ಮತ್ತು ಗೋದಿಗೆ ಪರ್ಯಾಯವಾಗಿ ಬಳಸಲಾಗುತ್ತದೆ
ಅಕ್ಕಿಯ ಆಕಾರವನ್ನು ಹಾಗೆ ಗೋಧಿಯ ಬಣ್ಣವನ್ನು ಹೊಂದಿರುವ ಈ ಬಿದಿರಕ್ಕೆ ಹಲವು ಕಾಯಿಲೆಗಳಿಗೆ ಔಷಧಿಯಾಗಿದೆ ಇದು ಬುಡಕಟ್ಟು ಜನಾಂಗದವರಿಗೆ ಆದಾಯದ ಮೂಲವಾಗಿದೆ ಯಾಕೆಂದರೆ ಹೇರಳವಾಗಿ ಪೋಷಕಾಂಶಗಳಿಂದ ಕೂಡಿರುವ ಈ ಬಿದಿರಕ್ಕಿ ತುಂಬಾ ಅಪರೂಪವಾಗಿ ಸಿಗುತ್ತದೆ ಅಧ್ಯಯನಗಳ ಪ್ರಕಾರ ಬಿದಿರಕ್ಕೆ ಗೋಧಿ ಹಾಗೂ ಹಕ್ಕಿಗಿಂತ ಹೇರಳವಾದ ಪೋಷಕಾಂಶಗಳನ್ನು ಹೊಂದಿದೆ ಜೊತೆಗೆ ಕಬ್ಬಿಣ, ಪಟ್ಯಾಷಿಯಂ,ಐರನ್, ನಾರಿನಾಂಶ,ವಿಟಮಿನ್ ಗಳು ಮುಂತಾದ ಪೋಷಕಾಂಶಗಳನ್ನು ಒಳಗೊಂಡಿದೆ
ಆಯುರ್ವೇದದಲ್ಲಿ ಹೇಳುವಂತೆ ಇದು ಗರ್ಭಿಣಿಯರಿಗೆ ಅತ್ಯಂತ ಪೋಷಕಾಂಶದ ಆಹಾರವಾಗಿದೆ ಕಫ ಮತ್ತು ಪಿತ್ತದ ಸಮಸ್ಯೆಗಳನ್ನು ಹೊಂದಿರುವವರಿಗೆ ಇದು ಉತ್ತಮ ಔಷಧಿಯಾಗಿದೆ ಸಂಧಿವಾತ, ಬೆನ್ನು ನೋವು, ಕೀಲು ನೋವು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದೊಂದು ಉತ್ತಮ ಪೋಷಕಾಂಶವಾಗಿದೆ ಮತ್ತು ಮಧುಮೇಹವನ್ನು ನಿಯಂತ್ರಿಸುವ ಅಂಶಗಳನ್ನು ಕೂಡ ಒಳಗೊಂಡಿದೆ ತೂಕ ಕಡಿಮೆ ಮಾಡಿಕೊಳ್ಳಲು ಸಹ ತುಂಬಾ ಉಪಯುಕ್ತವಾಗಿದೆ.