Chanakya Niti In Kannada: ನೂರಾರು ವರ್ಷಗಳ ಹಿಂದೆ ರಚನೆಗೊಂಡಿರುವ ಆಚಾರ್ಯ ಚಾಣಕ್ಯರ ನೀತಿಗಳು ಇಂದಿಗೂ ಕೂಡ ಬಹಳ ಜನಪ್ರಿಯವಾಗಿವೆ. ಪ್ರಸಿದ್ದ ರಾಜತಾಂತ್ರಿಕ ಮತ್ತು ರಾಜನೀತಿಜ್ಞರಾಗಿದ್ದ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಚಾಣಕ್ಯ ನೀತಿಯಲ್ಲಿ ಮಹಿಳೆಯರ ಗುಣಗಳ ಬಗ್ಗೆಯೂ ವರ್ಣಿಸಲಾಗಿದ್ದು, ಇಂತಹ ಗುಣಗಳನ್ನು ಹೊಂದಿರುವರ ಹೆಣ್ಣು ಮಕ್ಕಳು ಗಂಡನ ಜೀವನದಲ್ಲಿ ಅದೃಷ್ಟದ ದೇವತೆ ಆಗಿರುತ್ತಾರೆ ಎಂದು ಹೇಳಲಾಗುತ್ತದೆ. ಆಚಾರ್ಯ ಚಾಣಕ್ಯರು, ತಮ್ಮ ಪತಿಗೆ ಯಾವ ರೀತಿಯ ಮಹಿಳೆಯರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ ಎಂಬುದನ್ನು ಕೂಡ ಬಹಳ ಸೊಗಸಾಗಿ ಉಲ್ಲೇಖಿಸಿದ್ದಾರೆ. ಹೆಣ್ಣನ್ನು ಮನೆಯ ಕಣ್ಣು ಎಂದು ಬಣ್ಣಿಸಲಾಗುತ್ತದೆ. ಯಾವುದೇ ಒಂದು ಕುಟುಂಬದಲ್ಲಿ ಹೆಣ್ಣಿನ ಪಾತ್ರ ತುಂಬಾ ಮಹತ್ವದ್ದಾಗಿರುತ್ತದೆ. ಒಂದು ಮನೆ ಉದ್ಧಾರವಾಗಲು ಹೆಣ್ಣಿನ ಪಾತ್ರ ಎಷ್ಟು ಪ್ರಮುಖವಾಗಿರುತ್ತದೆಯೋ, ಮನೆಯ ಅವನತಿಗೂ ಕೂಡ ಹೆಣ್ಣೇ ಕಾರಣಳಾಗಿರುತ್ತಾಳೆ.
ಆಚಾರ್ಯ ಚಾಣಕ್ಯರ ಪ್ರಕಾರ, ಒಂದು ಹೆಣ್ಣು ಮನಸ್ಸು ಮಾಡಿದರೆ ಆಕೆ ಬಿಕ್ಷುಕನನ್ನು ಲಕ್ಷಾಧಿಪತಿಯಾಗಿಯೂ ಮಾಡಬಹುದು. ಅಂತೆಯೇ, ಹೆಣ್ಣು ಒಳ್ಳೆಯ ಸ್ವಭಾವವನ್ನು ಹೊಂದಿಲ್ಲದಿದ್ದರೆ ಎಂತಹ ಕೋಟ್ಯಾಧೀಶ್ವರನನ್ನೂ ಕೂಡ ಬೀದಿಗೆ ತರಬಹುದು. ಚಾಣಕ್ಯರ ಪ್ರಕಾರ, ಹೆಣ್ಣಿನಲ್ಲಿರುವ ಕೆಲವು ಗುಣಗಳು ಆಕೆಯ ಪತಿಗೆ ಅದೃಷ್ಟವನ್ನು ತರುತ್ತದೆ. ಈ ರೀತಿಯ ಹೆಣ್ಣು ಮಕ್ಕಳು ಪತಿಯ ಬಾಳಿಗೆ ಅದೃಷ್ಟದ ದೇವತೆಯಾಗಿರುತ್ತಾರೆ ಎಂದು ಹೇಳಲಾಗುತ್ತದೆ.
ಈ ರೀತಿಯ ಹೆಣ್ಣು ಮಕ್ಕಳು ಪತಿಯ ಬಾಳಿಗೆ ಅದೃಷ್ಟದ ದೇವತೆಯಾಗಿರುತ್ತಾರೆ!
ಶಾಂತ ಸ್ವಭಾವದ ಹುಡುಗಿಯರು: ಸ್ವಭಾವದ ಹುಡುಗಿಯರು ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳುತ್ತಾರೆ. ಹೆಣ್ಣಿನ ಶಾಂತ ಸ್ವಭಾವದಿಂದಾಗಿ ಮನೆಯಲ್ಲಿ ಜಗಳ, ಕದನಗಳು ಕ್ಷೀಣಿಸುತ್ತವೆ. ಇದು ಸುಖ ಸಂಸಾರಕ್ಕೆ ಮೊದಲ ಹಂತವಾಗಿದೆ.
ತಾಳ್ಮೆ:
ಕುಟುಂಬದಲ್ಲಿ ತಾಳ್ಮೆ ಬಹಳ ಮುಖ್ಯ. ಯಾವುದೇ ಕಠಿಣ ಸಮಯವನ್ನೂ ಕೂಡ ತಾಳ್ಮೆಯಿಂದ ನಿಭಾಯಿಸುವ ಗುಣ ಹೆಣ್ಣಿನಲ್ಲಿದ್ದರೆ ಆಕೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ತನ್ನ ಪತಿಗೂ ಪ್ರೇರೇಪಿಸುತ್ತಾಳೆ. ಅಷ್ಟೇ ಅಲ್ಲ, ಯಾವ ಹೆಣ್ಣು ಮಗುವಿನಲ್ಲಿ ತಾಳ್ಮೆ ಇರುತ್ತದೆಯೋ ಆಕೆ, ಎಂತಹದ್ದೇ ಸಂದರ್ಭದಲ್ಲಿಯೂ ಕೂಡ ತನ್ನ ಪತಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಇಂತಹವರನ್ನು ಆದರ್ಶ ಪತ್ನಿ ಎಂದು ಹೇಳಲಾಗುತ್ತದೆ.